ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial Actress) ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಒಂದು ಕಡೆ ಗೌತಮ್ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಮನೆಯಿಂದ ಆಚೆ ಬಂದಿದ್ದಾರೆ. ಈ ವಿಚಾರ ಗೊತ್ತಾಗಿ, ಆನಂದ್ (Anand) ಹಾಗೂ ಗೌತಮ್ (Goutham) ತಾಯಿಯನ್ನು ಹುಡಕುತ್ತಿದ್ದಾರೆ. ಆನಂದ್ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ (Bhagyamma) ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಭೂಮಿ, ಅತ್ತೆ ಕಣ್ಣಿಗೆ ಬಿದ್ದಿದ್ದಾಳೆ.
ಅಪಾಯದಲ್ಲಿದ್ದಾಳೆ ಭೂಮಿಕಾ
ಭೂಮಿ ದೇವಸ್ಥಾನದಲ್ಲಿ ಇರುವಾಗ, ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು.
ಇದನ್ನೂ ಓದಿ: Kannada Serial TRP: ಅಮೃತಧಾರೆ ಟ್ವಿಸ್ಟ್ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ
ಇದೀಗ ಮಾತು ಬಂದಿದೆ. ಈಗ ಭಾಗ್ಯಮ್ಮ ಭೂಮಿಕಾ ಎಂದು ಕರೆದಿದ್ದಾಳೆ. ಅತ್ತೆ ಕರೆದಿರೋದು ಭೂಮಿಗೆ ಕೇಳಿಸಿದೆ. ಅವಳು ತನ್ನ ಸೆರಗಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿಕೊಂಡು ಅತ್ತೆ ಎಂದು ಮಾತನಾಡಿಸಲು ಮುಂದಾಗಿದ್ದಾಳೆ. ಅಲ್ಲಿ ಗೌತಮ್ ಕೂಡ ಬಂದಿದ್ದಾನೆ.
ಕದ್ದು ಕೇಳಿಸಿಕೊಂಡಿದ್ದ ಭಾಗ್ಯಮ್ಮ
ಆನಂದ್ ಹಾಗೂ ಪತ್ನಿ ಮಾತನಾಡಿಕೊಳ್ಳುತ್ತಿರುವದನ್ನ ಗೌತಮ್ ಅಮ್ಮ ಭಾಗ್ಯ ಕೇಳಿಸಿಕೊಂಡಿದ್ದಾಳೆ. ಗೌತಮ್ ಭೂಮಿ ವಠಾರದಲ್ಲಿ ಎದುರು ಬದುರು ಇದ್ದರೂ ಏನೂ ಮಾಡೋಕೆ ಆಗ್ತಿಲ್ಲ ಅಂದರೆ ಏನು ಅರ್ಥ.ಮಗು ನೋಡಿ ಅಪ್ಪಿ ಮುದ್ದಾಡೋಣ ಅನ್ನಿಸುತ್ತೆ. ಮಗನ ಜೊತೆ ಮಾತನಾಡಬೇಡ ಅಂದರೆ ಏನರ್ಥ? ಗೌತಮ್ ಬೇರೆ ಒಂದು ಹೆಣ್ಣು ಮಗವನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾನೆ ಎಂದು ಆನಂದ್ ಬಳಿ ಮಾತನಾಡುತ್ತಿರುವುದನ್ನ ಕೇಳಿಸಿಕೊಂಡಿದ್ದಾಳೆ ಭಾಗ್ಯ.
ಪೆಟ್ಟುತಿಂದ ಜೈದೇವ್
ಅತ್ತ ಜೈದೇವ್ ಮಲ್ಲಿ ಹುಡುಕಿಕೊಂಡು ವಠಾರಕ್ಕೆ ಬಂದಿದ್ದ. ಇನ್ನು ಭಾಗ್ಯಮ್ಮ ಗೌತಮ್ ಮತ್ತು ಭೂಮಿಕಾ ಹಾಗೂ ಮಕ್ಕಳನ್ನು ಹುಡುಕಿ ಹೊರಟಾದ ಜೈದೇವನ ಕೈಗೆ ಸಿಕ್ಕಿಬೀಳುವ ಸಾಧ್ಯತೆ ಇತ್ತು ಎಂದು ವೀಕ್ಷಕರು ಊಹಿಸಿದ್ದರು.
ಗೌತಮ್ ಮತ್ತು ಭೂಮಿಕಾ ವಿಚಿತ್ರವಾಗಿ ಆಡ್ತಿರೋದು ಮಕ್ಕಳಿಗೆ ತಲೆನೋವಾಗಿ್ತುತ. ಇವರಿಬ್ಬರಿಗೂ ಏನಾಗಿದೆ ಎನ್ನೋದೇ ಗೊತ್ತಾಗ್ತಿಲ್ಲ. ಅದರ ಬಗ್ಗೆನೇ ಆಕಾಶ್ ಮತ್ತು ಮಿಂಚು ಚರ್ಚೆ ಮಾಡುತ್ತಿದ್ದರು. ಜೈದೇವ್ ಬೇರೆ ವಠಾರಕ್ಕೆ ಬಂದಿದ್ದು, ಅವನ ನಡೆಗೆ ಇಡೀ ವಠಾರವೇ ಸರಿಯಾಗಿ ಪೆಟ್ಟು ಕೊಟ್ಟಿದೆ.
ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.