ಅಮೃತಧಾರೆ (Amruthadhaare serial) ಧಾರಾವಾಹಿಯಲ್ಲಿ ಭೂಮಿಕಾ ಬದುಕಿದ್ದರೂ ಆಕೆಗೆ ಹೊಸ ಕಂಟಕ ಎದುರಾಗಿದೆ. ಈಗಾಗಲೇ ದೀಪಿಕಾ ಮತ್ತು ಭೂಮಿಕಾ (Bhoomika Deepika) ಅವಳಿ-ಜವಳಿ ಎಂಬುದರ ಸುಳಿವನ್ನು ನೀಡಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಗೌತಮ್ ದಿವಾನ್ ಪಾತ್ರ ಬಹುತೇಕವಾಗಿ ತೆರೆ ಹಿಂದೆ ಸರಿಸಲಾಗಿದೆ. ಸದ್ಯ ಗೌತಮ್ ದಿವಾನ್‌ನನ್ನು ವಿದೇಶ ಪ್ರವಾಸದಲ್ಲಿರುವಂತೆ ತೋರಿಸಲಾಗಿದೆ. ಇಷ್ಟರ ಒಳಗೆ ಜೈದೇವ್ (Jaidev) ಮನೆಗೆ ಬಂದಾಗಿದೆ.
ದಿವಾನ್ ಮನೆಗೆ ಜೈದೇವ್!
ಹೌದು ದೀಪಿಕಾಳನ್ನು ಬಳಸಿಕೊಂಡು ಶಕುಂತಲಾ ಮನೆಗೆ ಜೈದೇವ್‌ನನ್ನು ಕರೆಸಿಕೊಂಡಿದ್ದಾಳೆ. ಶಕುಂತಲಾ ಜೈದೇವ್‌ಗೆ ಕಾಲ್ ಮಾಡಿ, ಅಂತೂ ನೀನು ಮನೆಗೆ ಬರೋ ಟೈಂ ಬಂದಾಯ್ತು. ದೀಪಿಕಾ ಬಳಸಿಕೊಂಡು ನೀನು ಮನೆಗೆ ಬರೋ ಹಾಗೆ ಮಾಡಿದೆ. ಮಲ್ಲಿ ಓಪಿನಿಯನ್ ನಮಗೆ ಬೇಕಾಗಿಲ್ಲ. ಇದು ನಿನ್ನ ಮನೆ ಬೇಗ ಬಾ ಎಂದಿದ್ದಾಳೆ. ಸ್ವತಃ ಭೂಮಿನೆ ಆರತಿ ಎತ್ತಿ ಜೈದೇವ್‌ನನ್ನು ಮನೆಗೆ ತುಂಬಿಸಿಕೊಂಡಿದ್ದಾರೆ.
ಮುಂದೆ ಏನಿದ್ದರೂ ಅಮ್ಮ ಮತ್ತು ಮಗ ಸೇರಿ ಭೂಮಿಕಾ ಮತ್ತು ಗೌತಮ್ರನ್ನು ಮಟ್ಟ ಹಾಕುವ ಪ್ಲ್ಯಾನ್ ಮಾಡುವುದೇ ಆಗಿದೆ. ಪ್ರತಿಸಲವೂ ಜೈದೇವ ಆರಂಭದಲ್ಲಿ ಗೆಲ್ಲುತ್ತಲೇ ಬಂದಿದ್ದಾನೆ. ಕೊನೆಗೆ ಸೋಲಾದರೂ ಒಂದಷ್ಟು ದಿನ ಭೂಮಿಕಾ ಮತ್ತು ಗೌತಮ್ಗೆ ಕಾಟ ತಪ್ಪಿದ್ದಲ್ಲ.ದೀಪಿಕಾಳನ್ನು ಅಸ್ತ್ರವಾಗಿಸಿಕೊಂಡು ಭೂಮಿಕಾಗೆ ಇನ್ನೇನೇನು ತೊಂದರೆ ಕೊಡುತ್ತಾನೆಯೋ ಎಂದು ಕಾದು ನೋಡಬೇಕಷ್ಟೇ. ಸೀರಿಯಲ್ ಮುಗಿಯತ್ತೆ ಮುಗಿಯತ್ತೆ ಎನ್ನುವಾಗಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಸಾಗಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಭೂಮಿಕಾ ಆಸ್ಪತ್ರೆಯಲ್ಲಿ ಬದುಕಿದ್ದಾಳೆ ಮತ್ತು ಆಕೆಯ ನೆನಪಿನ ಶಕ್ತಿ ಹಾಗೆಯೇ ಇದೆ. ಭೂಮಿಕಾಳನ್ನು ಆಸ್ಪತ್ರೆಯಲ್ಲಿಯೇ ಜೈದೇವ ಮತ್ತು ಶಕುಂತಲಾ ಏನಾದರೂ ಅನಾಹುತ ಮಾಡುವುದಂತೂ ಗ್ಯಾರಂಟಿ ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಭೂಮಿಕಾ ಮುಂದಿನ ಗತಿಯೇನು? ದೀಪಿಕಾಗೆ ಭೂಮಿಕಾನೇ ತನ್ನ ಅಕ್ಕ ಎಂದು ತಿಳಿದು ಆಕೆ ಒಳ್ಳೆಯವಳಾದರೆ ಪರವಾಗಿಲ್ಲ. ಅಕ್ಕ-ತಂಗಿ ಸೇರಿ ಎಲ್ಲರನ್ನೂ ಆಟವಾಡಿಸಬಹುದು ಎಂಬುದು ವೀಕ್ಷಕರ ಅಭಿಪ್ರಾಯ.
ಇದನ್ನೂ ಓದಿ: Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.