ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare) ಮಿಂಚು ಸತ್ಯ ಸ್ಫೋಟವಾಗಿದೆ. ಅಮೃತಧಾರೆ ಸೀರಿಯಲ್ನಲ್ಲಿ ಜೈದೇವ್, ಗೌತಮ್-ಭೂಮಿಕಾ ಮಗಳು ಮಿಂಚುವನ್ನು ಅಪಹರಿಸಿದ್ದಾನೆ. ಇದೇ ವೇಳೆ, ನಕಲಿ ದಂಪತಿಗಳು ಗೌತಮ್ನನ್ನು ಅರೆಸ್ಟ್ ಮಾಡಿಸಿದ್ದು, ಮಗಳ ಜಾಡು ಹಿಡಿದು ಹೋದ ಭೂಮಿಕಾ (Bhoomika) ರೌಡಿಗಳ ವಿರುದ್ಧ ಹೋರಾಡಿದ್ದಾಳೆ. ಇದೀಗ ಗೌತಮ್ – ಭೂಮಿಕಾಗೆ ಮಿಂಚುನೇ ತಮ್ಮ ಮಗಳು ಅನ್ನೋದು ಗೊತ್ತಾಗಿದೆ.
ಮಗಳ ಬಗ್ಗೆ ಕಂಪ್ಲೇಟ್
ಪ್ರೋಮೋ ಔಟ್ ಆಗಿದೆ. ಆನಂದ್ ಮಿಂಚು ಬಗ್ಗೆ ಗೌತಮ್ ಬಳಿ ಹೇಳಿದ್ದಾನೆ. ನಕಲಿ ತಂದೆ ತಾಯಿ ಗೌತಮ್ ಬಳಿ ಓಡಿ ಬಂದು, ಮಗಳ ಬಗ್ಗೆ ಕಂಪ್ಲೇಟ್ ಮಾಡಿ ಒಳ್ಳೆಯದು ಮಾಡಿದ್ವಿ ಇಲ್ಲ ಅಂದ್ರೆ ನನ್ನ ಮಗಳು ನನಗೆ ಸಿಗ್ತಾ ಇರಲಿಲ್ಲ ಎಂದು ಡ್ರಾಮ ಮಾಡಿದ್ದಾರೆ. ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆಗ ಗೌತಮ್, ಮಿಂಚುಳನ್ನ ಯಾರೂ ಎಲ್ಲಿಯೂ ಕರೆದುಕೊಂಡು ಹೋಗೋ ಹಾಗಿಲ್ಲ ಎಂದಿದ್ದಾನೆ.
ಇದನ್ನೂ ಓದಿ: Bigg Boss: ‘ಬಿಗ್ ಬಾಸ್’ ಪ್ರೋಮೋ ಔಟ್; ಹೊಸ ನಿರೂಪಕ ನೋಡಿ ಫ್ಯಾನ್ಸ್ ಖುಷ್
ಮಿಂಚುನೇ ನನ್ನ ಮಗಳು ಎಂದಿದ್ದಾನೆ ಗೌತಮ್. ಈ ಸತ್ಯ ಗೌತಮ್ಗೆ ಹೇಗೆ ಗೊತ್ತಾಯ್ತು ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಭೂಮಿಕಾ ರಣಚಂಡಿ
ಭೂಮಿಕಾ, ರೌಡಿಗಳಿಗೆ ಹಣ ಕೊಟ್ಟು ಮಿಂಚುವನ್ನು ಕಿಡ್ನ್ಯಾಪ್ ಮಾಡಿದವರ ಜಾಡು ಹಿಡಿದು ಹೋದಳು. ಮಿಂಚುವನ್ನು ಜೈದೇವ್ ಅಪಹರಿಸಿ ಇಟ್ಟ ಜಾಗಕ್ಕೆ ಹೋಗುವಷ್ಟರಲ್ಲಿಯೇ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗಿತ್ತು. ಮಿಂಚುವಿನ ಗೊಂಬೆ ನೋಡಿದ ಭೂಮಿಕಾಗೆ ಮಿಂಚು ಅಲ್ಲಿರುವುದು ಕನ್ಫರ್ಮ್ ಆಯಿತು.
ಅಷ್ಟರಲ್ಲಿಯೇ ರೌಡಿಗಳು ಆಕೆಯ ಮೇಲೆ ಅಟ್ಯಾಕ್ ಮಾಡಿದ್ರು.ಮಿಂಚುವಿನ ಗೊಂಬೆ ನೋಡಿದ ಭೂಮಿಕಾಗೆ ಮಿಂಚು ಅಲ್ಲಿರುವುದು ಕನ್ಫರ್ಮ್ ಆಯಿತು. ಅಷ್ಟರಲ್ಲಿಯೇ ರೌಡಿಗಳು ಆಕೆಯ ಮೇಲೆ ಅಟ್ಯಾಕ್ ಮಾಡಿದ್ರು. , ಆ ನಕಲಿ ದಂಪತಿ ಅಸಲಿಯತ್ತು ಬಯಲು ಮಾಡಬೇಕಿದೆ. ಹೆತ್ತ ಮಗಳಿಂದಲೇ ಗೌತಮ್ಗೆ ತೊಂದರೆ ಇದೆ ಎನ್ನುವುದು ಹೀಗೆ ಸಾಬೀತಾಗಿಹೋಗಿದೆ.
ದಿಯಾ ಬೇಬಿಯನ್ನು ಕೊಂದಿರುವ ಜೈದೇವ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದಾನೆ. ಮತ್ತೊಂದೆಡೆ ಶಕುನಿ ಮಾಮಾ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಅರಸನಕೋಟೆ ಅಖಿಲಾಂಡೇಶ್ವರಿ ಸಹ ಮತ್ತೆ ಗೌತಮ್ ಸಂಪರ್ಕಕ್ಕೆ ಸಿಗುತ್ತಿಲ್ಲ.ಇದಲ್ಲವೂ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: Amruthadhaare Serial: ಮಗಳಿಗಾಗಿ ಮಿಡಿದಿದೆ ತಾಯಿ ಹೃದಯ; ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ವಾಹಿನಿ!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ