ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಗೌತಮ್ ಮನೆ ತುಂಬಾ ಮಂದಹಾಸ ; ಮಂಕಾಗಿದೆ ಜೇಡಿಯ ಅಟ್ಟಹಾಸ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್‌ ಅಟ್ಟಹಾಸ ಮಂಕಾಗಿದೆ. ಗೌತಮ್‌ ಮಾತ್ರ ದಿನೇ ದಿನೇ ಗೆದ್ದು ಬೀಗುತ್ತಿದ್ದಾನೆ. ಗೌತಮ್ ಮತ್ತೆ ಶಕುಂತಲಾಗೆ ಆಶ್ರಯ ನೀಡಿದರು ನೀಡಬಹುದು. ಲಕ್ಷ್ಮೀಕಾಂತ್‌ಗೆ ಆದಂತೆ ಶಕುಂತಲಾಗೆ ಕೂಡ ಜ್ಞಾನೋದಯವಾದರೂ ಆಗಬಹುದು. ಹಾಗೊಂದು ವೇಳೆ ಶಕುಂತಲಾ ನಿಜಕ್ಕೂ ಗೌತಮ್ ಬಳಿ ಹೋದರೆ ಜೈದೇವ್ ಸುಮ್ಮನೆ ಇರುತ್ತಾನಾ? ಅನ್ನೋದು ಪ್ರೇಕ್ಷಕರಲ್ಲಿ ಇರೋ ಕುತೂಹಲ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಕೆಡಿ ಜೈದೇವ್‌ ಅಟ್ಟಹಾಸ ಮಂಕಾಗಿದೆ. ಗೌತಮ್‌ ಮಾತ್ರ ದಿನೇ ದಿನೇ ಗೆದ್ದು ಬೀಗುತ್ತಿದ್ದಾನೆ. ಗೌತಮ್‌ (Gowtham) ಮೇಲೆ ಎಷ್ಟೇ ಜೈದೇವ್‌ (Jaidev) ಹಗೆ ಸಾಧಿಸಿದ್ದರೂ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.

ಗೌತಮ್‌ ಈಗ ಭೂಮಿಕಾ ಸಾಥ್‌ಗೆ ನಿಂತಿದ್ದಾನೆ. ಈ ಸ್ಕೂಲ್‌ ನಡೆಸುವ ತಾಕತ್‌ ನಿಮಗೆ ಇದೆ ಎಂದು ಭೂಮಿಯನ್ನ ಕರೆದುಕೊಂಡು ಬಂದಿದ್ದಾನೆ. ಈ ಕೆಲಸ ಸಾಧ್ಯ ಇಲ್ಲ ಎಂದು ಭೂಮಿಕಾ ಹೇಳಿದ್ದರೂ, ತೊಟ್ಟಿಲು ತೂಗೋ ಕೈಗೆ ಜಗತ್ತೇ ತೂಗೋ ಶಕ್ತಿ ಎಂದಿದ್ದಾರೆ ಗೌತಮ್‌. ತಾನು ಜೊತೆಗಿರುವೆ ಅಂತ ಭೂಮಿಕಾಗೆ ಸಾಥ್‌ ಕೊಟ್ಟಿದ್ದಾನೆ ಗೌತಮ್‌. ಹೀಗಾಗಿ ಇನ್ಮುಂದೆ ಸ್ಕೂಲ್‌ ಜವಬ್ದಾರಿ ಭೂಮಿಕಾ-ಗೌತಮ್‌ ಹೊಣೆ ಹೊತ್ತಿದ್ದಾರೆ. ಈ ಬಗ್ಗೆ ಮಕ್ಕಳ ಮುಂದೆ ಹೇಳಿ ಸಂತಸಪಟ್ಟಿದ್ದಾರೆ.

ಇದನ್ನೂ ಓದಿ: Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

ಕಪಟಿ ಜೇಡಿಯ ಅಟ್ಟಹಾಸ ಮಂಕಾಗಿದೆ!

ಜೈದೇವ್‌ ಹೂಡಿಕೆ ಮಾಡಿರೋ ಆಸ್ತಿ ಟ್ರ್ಯಾಕ್‌ ಆಗಿ ಹಣವನ್ನು ಕಳೆದುಕೊಂಡಿದ್ದಾನೆ. ಸಾಲ ಕೊಟ್ಟವನು ೪೮ ಗಂಟೆಗಳ ಒಳಗಾಗಿ ಹಣವನ್ನು ವಾಪಸ್‌ ಕೊಡಬೇಕು. ಇಲ್ಲದೇ ಹೋದರೇ ಎಲ್ಲ ಪ್ರಾಪಟಿ ನನ್ನ ಹೆಸರಿಗೆ ಬರೆದುಕೊಳ್ಳುವೆ ಅಂತ ವಾರ್ನ್‌ ಕೂಡ ಮಾಡಿದ್ದಾನೆ. ಇದರಿಂದಾಗಿ ಜೈದೇವ್‌ ಕಂಗಾಲಾಗಿದ್ದಾನೆ.

ಶಕುಂತಲಾಗೆ ಬುದ್ದಿ ಮಾತು

ಮತ್ತೊಂದು ಕಡೆ ಶಕುಂತಲಾ ಮನೆಯಲ್ಲಿ ಅವ್ಯವಸ್ಥೆ ಆಗಿದೆ. ಜೈದೇವ್‌ ಕಾಟದಿಂದ ಮಕ್ಕಳ ಮಧ್ಯೆಯೇ ಬಿರುಕು ಮೂಡಿದೆ. ಜೈದೇವ್‌ ಹೇಳಿದ ಮಾತಿಗೆ ಮಹಿ ಹಾಗೂ ಪಾರ್ಥ, ಮನೆಗೆ ಬರೋದಿಲ್ಲ ಅಂತ ಶಪಥ ಮಾಡಿದ್ದಾಳೆ. ಜೈದೇವ್‌ನಿಂದಾಗಿ ಶಕುಂತಲಾ ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಶಕುನಿ ಮಾವ ಕೂಡ ಶಕುಂತಲಾಗೇ ಬುದ್ದಿ ಹೇಳಿದ್ದಾನೆ. ಜೈದೇವ್‌ ತನ್ನದು ಅಂತ ಬಂದರೆ ಕಾಲಿನ ಕಸ ಮಾಡಿ ಬಿಡುತ್ತಾನೆ ಎಂದಿದ್ದಾನೆ. ಎಷ್ಟೇ ಹೇಳಿದರೂ ಶಕುಂತಲಾ ಮಾತ್ರ ಮಗನ ಮೇಲೆ ನಂಬಿಕೆ ಇಟ್ಟಿದ್ದಾಳೆ.



ಮನೆಯಿಂದ ಅಮ್ಮನನ್ನು ಹೊರ ಹಾಕಿದೆ ಜೈದೇವ್‌

ಶಕುಂತಲಾ ಜೈದೇವ್‌ ಬಳಿ ಬಂದು ಚೆಕ್‌ಗೆ ಸಹಿ ಹಾಕಲು ಹೇಳಿದ್ದಾಳೆ. ಹಣವನ್ನು ಕಳೆದುಕೊಂಡೆ. ಮೂರು ಕೋಟಿ ಬೇಕು ಅಂತ ಹೇಳಿದ್ದಾಳೆ. ಅದಕ್ಕೆ ಜೈದೇವ್‌ ಶಾಕ್‌ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್‌ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ.

ಇದು ಜೈದೇವ್‌ಗೆ ಕೋಪ ಬರುವಂತೆ ಆಗಿದೆ. ಶಕುಂತಲಾಳಿಗೆ ಏಕವಚನ ಬಳಸಿ, ಗಟ್ಟಿಯಾಗಿ ಹೆಡೆಮುರಿ ಕೊಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್‌. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ.

ಈ ಹಿನ್ನೆಲೆ ಗೌತಮ್ ಮತ್ತೆ ಶಕುಂತಲಾಗೆ ಆಶ್ರಯ ನೀಡಿದರು ನೀಡಬಹುದು. ಲಕ್ಷ್ಮೀಕಾಂತ್‌ಗೆ ಆದಂತೆ ಶಕುಂತಲಾಗೆ ಕೂಡ ಜ್ಞಾನೋದಯವಾದರೂ ಆಗಬಹುದು. ಹಾಗೊಂದು ವೇಳೆ ಶಕುಂತಲಾ ನಿಜಕ್ಕೂ ಗೌತಮ್ ಬಳಿ ಹೋದರೆ ಜೈದೇವ್ ಸುಮ್ಮನೆ ಇರುತ್ತಾನಾ? ಅನ್ನೋದು ಪ್ರೇಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Amruthadhaare Serial: ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ; ಗೌತಮ್ - ಭೂಮಿಕಾ ಜೋಡಿ ಕಂಡು ವೀಕ್ಷಕರು ಖುಷ್‌!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author