ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಮಲ್ಲಿ ಮದುವೆ ನಿಲ್ಲಿಸಲೆಂದು ಜೈದೇವ್ ಹರಸಾಹಸ ಪಡುತ್ತಿದ್ದಾನೆ. ಜೆಡಿ (JD) ಮದುವೆ ಮುರಿಯಲು ಮಾಡಿದ ಪ್ಲಾನ್ ವಿಫಲವಾಗಿದ್ದು, ಗೌತಮ್ ಮತ್ತು ಭೂಮಿಕಾ (Bhoomika Gowtham) ಪ್ರಯತ್ನದಿಂದ ಮಲ್ಲಿ ಮದುವೆಯಾಗಿದ್ದಾಳೆ. ಅಷ್ಟೇ ಅಲ್ಲ ಮಲ್ಲಿ ಕೂಡ ಜೈದೇವ್‌ಗೆ ಆವಾಜ್ ಹಾಕಿದ್ದಾಳೆ.
ಸುನಿ ಬಣ್ಣ ಬಯಲು
ಮತ್ತೊಂದು ಕಡೆ ಗೌತಮ್ ಮತ್ತು ಪಾರ್ಥ ಎದುರು ಸುನಿ ಬಣ್ಣ ಬಯಲಾಗಿದ್ದು ಕೊನೆ ಕ್ಷಣದಲ್ಲಿ ಮದುವೆಯಾಗಲು ಹಿಂದೇಟು ಹಾಕುವಂತೆ ಸುನಿಗೆ ಜೈದೇವ್ ಹೇಳಿದ್ದಾನೆ. ಆದರೆ ಮತ್ತೊಂದು ಕಡೆ ಮದುವೆಯಿಂದ ಹಿಂದೆ ಸರಿಯದಂತೆ ಸುನಿಗೆ ಗೌತಮ್ ಎಚ್ಚರಿಕೆ ನೀಡಿದ್ದಾನೆ. ಭೂಮಿಗೂ ಮಗನಿಂದ ಜೈದೇವ್ ಬಗ್ಗೆ ಗೊತ್ತಾಗಿದ್ದು, ನೇರವಾಗಿ ಜೈದೇವ್ ಬಳಿ ಹೋಗಿ ನೀನೇನು ಅವಳ ಮದುವೆ ನಿಲ್ಲಿಸೋದು, ನಾನೇ ನಿಲ್ಲಿಸುತ್ತೇನೆ ಎಂದು ಕೆಂಡ ಕಾರಿದ್ದಾಳೆ.
ಇದನ್ನೂ ಓದಿ: Akhil Akkineni: ‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್! ಹೊಸ ದಿನಾಂಕ ರಿವೀಲ್
ಭೂಮಿಕಾ ರೌದ್ರವತಾರ ಕಂಡು ಸುನಿ ಬೆಚ್ಚಿ ಬಿದ್ದಿದ್ದು, ಭೂಮಿಕಾಗೆ ಸತ್ಯ ಗೊತ್ತಾಗಿದೆ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ. ಹೀಗಾಗಿ ಭೂಮಿಕಾ ಮದುವೆ ನಿಲ್ಲಿಸಿದರೆ ಕಷ್ಟ ಎನ್ನುವುದನ್ನು ಮನಗಂಡ ಗೌತಮ್ ಮಾತನಾಡಲು ಭೂಮಿಕಾಳನ್ನು ಕರೆದೊಯ್ದಿದ್ದಾನೆ.
ಇದೇ ಸಮಯದಲ್ಲಿ ಭೂಮಿಕಾ ತನಗೆ ಗೊತ್ತಾದ ಸತ್ಯ ಹೇಳಲು ಮುಂದಾಗಿದ್ದು ನನಗೆಲ್ಲಾ ಗೊತ್ತು ಎಂದು ಗೌತಮ್ ಹೇಳಿದ್ದಾನೆ. ಈ ಮಾತು ಕೇಳಿ ಭೂಮಿಕಾ ಶಾಕ್ ಆಗಿದ್ದಾಳೆ.ಇದೆಲ್ಲದರ ನಡುವೆ ಸುನಿಗರ ಜೈದೇವ್ ಕಾಲ್ ಮಾಡ್ತಿದ್ದಾನೆ.
ಮಲ್ಲಿ ಕುತ್ತಗೆಯಲ್ಲಿ ತಾಳಿ
ಸುನಿ ಕೂಡ ಜೈದೇವ್ ಎಷ್ಟೇ ಕರೆ ಮಾಡಿದ್ದರೂ ಕಾಲ್ ಸ್ವೀಕರಿಸುತ್ತಿಲ್ಲ. ದಿಯಾ ಕೂಡ ಜೈದೇವ್‌ಗೆ ಆಗಾಗ ಪ್ರಶ್ನೆ ಹಾಕುತ್ತಲೇ ಇದ್ದಾಳೆ. ದಿಯಾಳ ಈ ಪ್ರಶ್ನೆಗೆ ಉತ್ತರ ನೀಡಿರುವ ಜೈದೇವ್ ಅವನೇ ಎದ್ದು ಬಂದು ಮದುವೆ ನಿಲ್ಲಿಸಿದರೆ ಸರಿ, ಇಲ್ಲವಾದಲ್ಲಿ ಅವನ ಹೆಣ ಬೀಳಿಸಿ ಆದರೂ ಮದುವೆ ನಿಲ್ಲಿಸುವ ಮಾತುಗಳನ್ನಾಡಿದ್ದಾನೆ. ತನ್ನ ರೌಡಿಗಳನ್ನು ಮದುವೆ ಮಂಟಪಕ್ಕೆ ಕಳಿಸಿದ್ದಾನೆ. ಆದರೂ ಹೊಸ ಪ್ರೋಮೋ ನೋಡಿದರೆ ಮಲ್ಲಿ ಮದುವೆ ಆದಂತೆ ಇದೆ. ಮಲ್ಲಿ ಕುತ್ತಗೆಯಲ್ಲಿ ತಾಳಿ ಇದೆ.
ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆ ನೀಡಿದ್ದಾಳೆ. ಈ ಎಚ್ಚರಿಕೆಯನ್ನು ಜೈದೇವ್ ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲ ಇಂದಿನ ಸಂಚಿಕೆಯಲ್ಲಿ ಇದೆ. ಗೌತಮ್ ಹಾಗೂ ಭೂಮಿ ಮಾಸ್ಟರ್ ಪ್ಲ್ಯಾನ್ ಏನು? ಮಲ್ಲಿಗೆ ಜೈದೇವ್ ಬಗ್ಗೆ ಈ ಮುಂಚೆ ಗೊತ್ತಿತ್ತಾ? ಸುನಿ ಹಾಗೂ ಮಲ್ಲಿ ಮುಂಚೆಯೇ ಈ ಬಗ್ಗೆ ಮಾತನಾಡಿಕೊಂಡಿದ್ರಾ? ಜೈದೇವ್ ಮುಂದಿನ ನಡೆಯೇನು? ಎನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಕೇಡಿ ಜೇಡಿಗೆ ಸವಾಲ್! ಭೂಮಿಯ ಮುಂದಿನ ನಡೆಯೇನು?
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.