ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

Amruthadhaare Serial: ಅಮೃತಧಾರೆ ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್‌ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ ಈಗ ಎಂಟ್ರಿ ಆಗಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial) ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ (Jaidev) ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್‌ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ (Deepika) ಈಗ ಎಂಟ್ರಿ ಆಗಿದೆ.

ವಿಶೇಷ ಪ್ರೋಮೋ ಬಿಡುಗಡೆ

ಅಮೃತಧಾರೆ ಧಾರಾವಾಹಿ ತಂಡದಿಂದ ವಿಶೇಷ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಗೌತಮ್ ಜೊತೆಗಿನ ಬದುಕು ಹೇಗಿತು ಎಂಬುದನ್ನು ಭೂಮಿಕಾ ವಿವರಿಸಿದ್ದು, ಮುಂದಿನ ಕಥೆ ಎಷ್ಟು ವಿಶೇಷ ಮತ್ತು ವಿಭಿನ್ನವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ.

ಇದನ್ನೂ ಓದಿ: Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

ಈ ಹಿಂದೆಯೂ ಅಮೃತಧಾರೆ ಕಥೆಯಲ್ಲಿ ಈ ರೀತಿಯ ದಿಢೀರ್ ಬದಲಾವಣೆಗಳನ್ನು ತೆಗೆದುಕೊಂಡು ಬರಲಾಗಿತ್ತು. ಮಗುವನ್ನು ಹೊತ್ತುಕೊಂಡು ಮನೆ ತೊರೆದಿದ್ದ ಭೂಮಿಕಾ, ಸಾಮಾನ್ಯಾ ಮಹಿಳೆಯಂತೆ ದೂರದ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದಳು. ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.

ಆನಂತರ ಇವರಿಬ್ಬರ ಭೇಟಿ, ಮತ್ತೆ ಒಂದಾಗುವಿಕೆ ಕಥೆಯು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಆನಂತರ ಭೂಮಿಕಾಗೆ ಕ್ಯಾನ್ಸರ್ ತುತ್ತಾದ ಬಳಿಕ ವರ್ಷಗಳ ನಂತ್ರ ಅಂತ ತೋರಿಸಲಾಗಿತ್ತು. ಆನಂತರ ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗಿ ಜೈದೇವ್ ರಹಸ್ಯ ಹುಡುಕಲು ಮುಂದಾಗಿದ್ದಳು.



ಆ ಬಳಿಕ ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಇದ್ದಳು. ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆ ಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ ಫುಟೇಜ್​ ಚೆಕ್​ ಮಾಡಿಸಿದ್ದಾಳೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ.

ಹೊಸ ಅಧ್ಯಾಯದಲ್ಲಿ ದೀಪಿಕಾ ಎಂಟ್ರಿ

ಈ ಹೊಸ ಅಧ್ಯಾಯದಲ್ಲಿ ದೀಪಿಕಾ ಎಂಟ್ರಿ ಆಗಿದೆ. ಅವಳಿ ಜವಳಿ ಹೆತ್ತವಳು ನಾನು. ಆದರೆ ನನ್ನದೇ ಪ್ರತಿರೂಪ ಕಣ್ಣಿಗೆ ಬೀಳದೇ ಇರೋ ಹಾಗೆ ಆಯ್ತು ಅಂತ ಭೂಮಿಕಾ ಹೇಳಿದ್ದಾಳೆ. ಅದುವೇ ದೀಪಿಕಾ. ಬಡ್ಡಿ ಬಂಗಾರಮ್ಮ ಆಗಿ ದೀಪಿಕಾ ಬಂದಿದ್ದಾಳೆ. ಊಹಿಸಕ್ಕೆ ಆಗದೇ ಇರೋ, ಕಲ್ಪನೆಗೂ ಮೀರದ ಅಮೃತಧಾರೆ ವೀಕ್ಷಕರ ಮುಂದೆ ಬರುತ್ತಿದೆ.

ಇದನ್ನೂ ಓದಿ: Amruthadhaare Serial: ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author