ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್! ಜೈದೇವ್‌ ಕಥೆ ಏನು?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿಗೆ ಜೈದೇವ್‌ ಕೊಡುವ ಕಾಟ ಜೋರಾಗಿದೆ. ಹೇಗಾದ್ರೂ ಮಾಡಿ ಮಲ್ಲಿ ಎಕ್ಸಾಮ್‌ ಹೋಗದಂತೆ ತಡೆ ಮಾಡ್ತಿದ್ದಾನೆ ಜೈದೇವ್‌ . ಹಿಂದಿನ ದಿನ ಭರ್ಜರಿ ಕಾಟ ಕೊಟ್ಟಿದ್ದಲ್ಲದೇ ಈಗ ಮಲ್ಲಿ ಮೇಲೆ ರೌಡಿಗಳನ್ನು ಬಿಟ್ಟಿದ್ದಾನೆ. ಆದರೆ ಇದು ಪ್ಲ್ಯಾನ್‌ ಪ್ಲಾಪ್‌ ಆಗಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿಗೆ ಜೈದೇವ್‌ ಕೊಡುವ ಕಾಟ ಜೋರಾಗಿದೆ. ಹೇಗಾದ್ರೂ ಮಾಡಿ ಮಲ್ಲಿ ಎಕ್ಸಾಮ್‌ ಹೋಗದಂತೆ ತಡೆ ಮಾಡ್ತಿದ್ದಾನೆ ಜೈದೇವ್‌ (Jaidev). ಹಿಂದಿನ ದಿನ ಭರ್ಜರಿ ಕಾಟ ಕೊಟ್ಟಿದ್ದಲ್ಲದೇ ಈಗ ಮಲ್ಲಿ (Malli) ಮೇಲೆ ರೌಡಿಗಳನ್ನು ಬಿಟ್ಟಿದ್ದಾನೆ. ಆದರೆ ಇದು ಪ್ಲ್ಯಾನ್‌ ಪ್ಲಾಪ್‌ ಆಗಿದೆ.

ಗೌತಮ್‌ ಮಾಸ್‌ ಎಂಟ್ರಿ

ಮಲ್ಲಿ ಎಲ್ಲಿ ಸಿವಿಲ್‌ ಎಕ್ಸಾಮ್‌ ಪಾಸ್‌ ಆದ್ರೆ ತನಗೆ ತೊಂದರೆ ಆಗುತ್ತೋ ಅಂತ ಜೈದೇವ್‌ ಓದಲು ತೊಂದರೆ ಕೊಡುತ್ತಿದ್ದಾನೆ. ಜೈದೇವ್‌ ಮಾಡಿರೋ ಕುತಂತ್ರ ತಿಳಿದ ಭೂಮಿ, ಮಲ್ಲಿಯನ್ನು ಕಾರ್‌ನಲ್ಲಿ ಕುಳಿಸಿ ಅದೇ ಲೈಟ್‌ ಮೂಲಕ ಓದಿಕೊಳ್ಳಲು ಅನುವು ಮಾಡಿಕೊಟ್ಟಿದ್ದಳು. ಇದೀಗ ಮತ್ತಷ್ಟು ಮಲ್ಲಿಯ ಜವಬ್ದಾರಿ ವಹಿಸಿಕೊಂಡಿದ್ದಾಳೆ ಭೂಮಿಕಾ.

ಇದನ್ನೂ ಓದಿ: Bhagyalakshmi Serial: ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು? ಭಾಗ್ಯಲಕ್ಷ್ಮೀ ಶೂಟಿಂಗ್ ಕ್ಲಿಪ್‌ ವೈರಲ್‌

ಮಲ್ಲಿಗೆ ಎಕ್ಸಾಮ್‌ ಸೆಂಟರ್‌ ವರೆಗೆ ಡ್ರಾಪ್‌ ಮಾಡಲು ಸುನಿಯನ್ನು ವಹಿಸಿದ್ದಾಳೆ. ಆದರೆ ಸುನಿ ಮಾತ್ರ ಜೈದೇವ್‌ ಪರ. ಜೈದೇವ್‌ ಮಲ್ಲಿ ಎಕ್ಸಾಮ್‌ ಬರೆಯಬಾರದು ಎಂದು ರೌಡಿಗಳನ್ನು ಬಿಟಿದ್ದ. ಮಲ್ಲಿ ತಪ್ಪಿಸಿಕೊಳ್ಳಲು ನೋಡಿದ್ರೂ ಆಗಿಲ್ಲ. ಮಲ್ಲಿ ಕೈ ಸುಡಲು ನೋಡಿದ್ದಾನೆ. ಅದೇ ಹೊತ್ತಿಗೆ ಗೌತಮ್‌ ಮಾಸ್‌ ಎಂಟ್ರಿ ಆಗಿದೆ. ರೌಡಿಗಳನ್ನ ಹೊಡೆದುರುಳಿಸಿ ಮಲ್ಲಿಗೆ ಸೇಫ್‌ ಮಾಡ್ತಾನಾ ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇನ್ನೊಂದು ಕಡೆ ಪಾರ್ಥ ಕೂಡ ಗೌತಮ್‌ ಪರ ನಿಲ್ಲುತ್ತಿರುವ ಬಗ್ಗೆ ಜೈದೇವ್‌ಗೆ ಅಸಮಾಧಾನ ಇದೆ. ಜೈದೇವ್‌ ಕೂಡ ಪಾರ್ಥ ಮೇಲೆ ಕೂಗಾಡಿದ್ದಾನೆ. ಹೀಗಾಗಿ ಪಾರ್ಥ ಈ ನೋವನ್ನು ತನ್ನ ಮಾವನ ಬಳಿ ತೋಡಿಕೊಂಡಿದ್ದಾನೆ. ಮಾವ ಕೂಡ ಅಳಿಯನನ್ನು ಬುದ್ಧಿಮಾತುಗಳಿಂದ ಸಮಾಧಾನ ಮಾಡಿದ್ದಾನೆ.



ಮೋಸ ಮಾಡಿ ಗೌತಮ್ ದೀವಾನ್ನ ಹೊರಕ್ಕೆ ಹಾಕಲಾಯಿತು. ಹೊರಕ್ಕೆ ಕಳಿಸುವಾಗ ಜಯದೇವ್ ಹಾಗೂ ಆತನ ತಾಯಿ ಶಕುಂತಲ ಎಲ್ಲಾ ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಅಲ್ಲದೆ, ಪತ್ನಿಯನ್ನು ಕೂಡ ಇವರು ದೂರ ಮಾಡಿದರು.

ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ಹಂತಕ್ಕೆ ಬಂದಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು.

ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ. ಗೌತಮ್ ಯಶಸ್ವಿ ಉದ್ಯಮಿ. ಆತ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಈಗಲೂ ಹಾಗೆಯೇ ಆಗುತ್ತದೆಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

ಇದನ್ನೂ ಓದಿ: Kannada Serial TRP: ಈ ಧಾರಾವಾಹಿಗೆ ಮೊದಲ ಸ್ಥಾನ! ಲಿಸ್ಟ್‌ ಇಲ್ಲಿದೆ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author