ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಮಿಂಚು ಸುಳಿವು ಕೇಡಿ ಜೆಡಿಗೆ ಸಿಕ್ಕೇ ಬಿಡುತ್ತಾ? ಶಕುನಿ ಮಾಮ ಕಿಡ್ನಾಪ್‌!

Amruthadhaare Serial: ಇನ್ನು ಮಿಂಚುನೇ ನಿಜವಾದ ಮಗಳು ಎಂದು ತಿಳಿದರೆ ಆಕೆಯ ಕಿಡ್​ನ್ಯಾಪ್​​ ಮಾಡಿಸಿ, ಗೌತಮ್​ ಮತ್ತು ಭೂಮಿಕಾರಿಗೆ ಹಿಂಸೆ ಕೊಡುವುದು ತಪ್ಪಲ್ಲ. ಮಗಳಿಂದ ತೊಂದರೆ ಎನ್ನುವ ಮಾತು ಅಲ್ಲಿಗೆ ನಿಜವಾಗಲಿದೆ ಎಂದಾಯ್ತು. ಈಗ ಶಕುನಿ ಮಾಮನನ್ನು ಕಿಡ್ನಾಪ್‌ ಮಾಡಿದ್ದಾನೆ ಜೈದೇವ್‌.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಶಕುನಿ ಮಾಮನ ಪರಿಸ್ಥಿತಿ ಅದೋ ಗತಿ ಆಗಿದೆ. ಜೈದೇವ್‌ ಈಗ ಲಕ್ಷ್ಮೀಕಾಂತನನ್ನು ಕಿಡ್ನಾಪ್‌ ಮಾಡಿದ್ದಾನೆ. ಮಿಂಚು ಬಗ್ಗೆ ಸತ್ಯ ಗೊತ್ತಾಗಿದ್ದರೂ ಹೇಳಲಾರದೇ ಚಡಪಡಿಸಿದ್ದಾನೆ ಲಕ್ಷ್ಮೀಕಾಂತ್‌. ಅಲ್ಲಿಗೆ ಎಲ್ಲಾ ಡಿಟೇಲ್ಸ್​ ಕಲೆಕ್ಟ್​ ಮಾಡೋದು ಗ್ಯಾರೆಂಟಿ. ಇನ್ನು ಮಿಂಚುನೇ ನಿಜವಾದ ಮಗಳು ಎಂದು ತಿಳಿದರೆ ಆಕೆಯ ಕಿಡ್​ನ್ಯಾಪ್​​ ಮಾಡಿಸಿ, ಗೌತಮ್​ ಮತ್ತು ಭೂಮಿಕಾರಿಗೆ (Bhoomika Gowtham) ಹಿಂಸೆ ಕೊಡುವುದು ತಪ್ಪಲ್ಲ. ಮಗಳಿಂದ ತೊಂದರೆ ಎನ್ನುವ ಮಾತು ಅಲ್ಲಿಗೆ ನಿಜವಾಗಲಿದೆ ಎಂದಾಯ್ತು. ಈಗ ಶಕುನಿ ಮಾಮನನ್ನು ಕಿಡ್ನಾಪ್‌ (Kidnap) ಮಾಡಿದ್ದಾನೆ ಜೈದೇವ್‌.

ಶಕುನಿ ಮಾಮಗೆ ಟಾರ್ಚರ್‌

ಮಿಂಚು ಫೋಟೋ ಜೈದೇವ್‌ಗೆ ಸಿಗದಂತೆ ಕಾಪಾಡಿಕೊಂಡಿದ್ದಾನೆ. ಗೌತಮ್‌ ಕೂಡ ಎಷ್ಟೇ ಕಾಲ್‌ ಮಾಡಿದ್ದರೂ ರಿಸೀವ್‌ ಮಾಡಲಾರದೇ ಲಕ್ಷ್ಮೀ ಕಾಂತ್‌ ಚಡಪಡಿಸಿದ್ದಾನೆ. ಜೈದೇವ್‌ ಕೂಡ ಈಗ ಶಕುನಿ ಮಾಮಗೆ ಟಾರ್ಚರ್‌ ಕೊಟ್ಟು ಗೌತಮ್‌ಗೆ ಬ್ಲಾಕ್‌ ಮೇಲ್‌ ಮಾಡಲು ಮುಂದಾಗಿದ್ದಾನೆ. ಮುಂದೆ ಮಿಂಚುಗೆ ಪ್ರಾಣಾಪಾಯ ಇದ್ಯಾ? ಗೌತಮ್‌ಗೆ ಕಂಟಕ ಆಗುತ್ತಾ ಅನ್ನೋದು ವೀಕ್ಷರಲ್ಲಿ ಇರುವ ಕುತೂಹಲ.

ಇದನ್ನೂ ಓದಿ: Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಅಖಿಲಾಂಡೇಶ್ವರಿ ಹೇಳಿದ ಅಡ್ರೆಸ್‌ನ ಲಕ್ಷ್ಮೀಕಾಂತ್ ಏನೋ ಬರೆದುಕೊಂಡಿದ್ದಾನೆ. ಆದರೆ ಗೌತಮ್ ದಿವಾನ್ ಸಾಮ್ರಾಜ್ಯದಲ್ಲಿ ಉಂಡ ಮನೆಗೆ ಕನ್ನ ಹಾಕುವರ ಸಂತತಿ ಇನ್ನೂ ಹಾಗೇ ಇದೆ. ಹೌದು, ಅಸಲಿಗೆ ಜೈದೇವ್‌ಗೆ ಮಗುವಿನ ವಿಚಾರ ಲಕ್ಷ್ಮೀಕಾಂತ್ ಹೇಳ್ತಾನೆ ಎಂದು ಎಲ್ಲರು ಅಂದುಕೊಂಡಿದ್ದರು.

ಲಕ್ಷ್ಮೀಕಾಂತ್ ಮತ್ತು ಶಕುಂತಲಾ ಬದಲಾಗಿಲ್ಲ ಎಂದೇ ವಾದ ಮಾಡುತ್ತಿದ್ದರು. ಆದರೆ, ಗೌತಮ್‌ಗೆ ಈ ಖುಷಿಯ ವಿಷಯ ಹೇಳಬೇಕೆಂದುಕೊಂಡು ಲಕ್ಷ್ಮೀಕಾಂತ್ ಹೋಗಿದ್ದಾನೆ. ಆದರೆ ಲಕ್ಷ್ಮೀಕಾಂತ್ ಮತ್ತು ಅಖಿಲಾಂಡೇಶ್ವರಿಯ ಸಂಭಾಷಣೆ ಪೂರ್ತಿ ಕೇಳಿಸಿಕೊಂಡಿರುವ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಜೈದೇವ್‌ಗೆ ಕರೆ ಮಾಡಿದ್ದಾನೆ. ಮಗು ವಿಚಾರ ಹೇಳಿದ್ದಾನೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.



ಸದ್ಯ ಜೈದೇವ್‌ಗೆ ಮಗು ವಿಚಾರ ಗೊತ್ತಾಗಿದೆ. ಮಗು ಎಲ್ಲಿದೆ ಎನ್ನುವುದು ಕೂಡ ತಿಳಿದಿದೆ. ಈಗ ಜೈದೇವ್ ಆ ಮಗುವನ್ನು ಕಿಡ್ನ್ಯಾಪ್ ಮಾಡಬಹುದು. ಬ್ಲ್ಯಾಕ್ ಮೇಲ್ ಮಾಡಬಹುದು. ಪ್ರಾಣಕ್ಕೆ ಕುತ್ತು ತರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.

ಇದನ್ನೂ ಓದಿ: Amruthadhaare serial: ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author