ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial ) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಭೂಮಿಕಾ ಹಾಗೂ ಗೌತಮ್ ಈಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಶಕುಂತಲಾ ಹಾಗೂ ಜೈದೇವ್‌ಗೆ (Shakuntala Jaidev) ಹಿನ್ನಡೆ ಆಗ್ತಾ ಇದ್ದರೆ, ಗೌತಮ್ ಕುಟುಂಬ ಬೆಳೆಯುತ್ತಲೇ ಇದೆ. ಶಕುಂತಲಾ ಆಟಕ್ಕೆ ಸದ್ಯ ಬ್ರೇಕ್ ಬಿದ್ದಿದಂತಾಗಿದೆ.
ಶಕುಂತಲಾ ಆಟಕ್ಕೆ ಬಿತ್ತು ಬ್ರೇಕ್!
ಶಕುಂತಲಾ ಆಟಕ್ಕೆ ಬಂದಾಗ, 3 ಕೋಟಿ ಹಣ ಪೆಡಿಂಗ್ ಇರುತ್ತೆ. ಅದನ್ನ ಪೇ ಮಾಡಲು ಶಕುಂತಲಾ ಬಳಿ ಹಣ ಇರುವುದಿಲ್ಲ. ಆಗ ಅವಳ ಸುತ್ತ ಇದ್ದ ಗೆಳತಿಯರು ಈ ಬಗ್ಗೆ ಕೊಂಕು ಮಾತನಾಡಿದ್ದಾರೆ. ಶಕುಂತಲಾ ಗೆಳತಿ, ತಾನೇ ಹಣವನ್ನು ಪೇ ಮಾಡುವುದಾಗಿ ಹೇಳುತ್ತಾಳೆ. ಶಕುಂತಲಾಗೆ ಆ ಸಮಯದಲ್ಲಿ ಅತ್ಯಂತ ಮುಜಗರವೂ ಆಗುತ್ತೆ. ಜೈದೇವ್ ಬಳಿ ಹಣ ಪಡೆದು ವಾಪಸ್ ಕೊಡುವುದಾಗಿ ಹೇಳುತ್ತಾಳೆ.
ಇದನ್ನೂ ಓದಿ: Annayya Serial: ತಂಗಿ ಜೀವದ ಜೊತೆ ಆಟ ಆಡಿದ ಜಿಮ್ ಸೀನನನ್ನು ಶಿವಣ್ಣ ಸುಮ್ನೆ ಬಿಡೋನಲ್ಲ!
ಶಕುಂತಲಾ ಜೈದೇವ್ ಬಳಿ ಬಂದು ಚೆಕ್‌ಗೆ ಸಹಿ ಹಾಕಲು ಹೇಳಿದ್ದಾಳೆ. ಹಣವನ್ನು ಕಳೆದುಕೊಂಡೆ. ಮೂರು ಕೋಟಿ ಬೇಕು ಅಂತ ಹೇಳಿದ್ದಾಳೆ. ಅದಕ್ಕೆ ಜೈದೇವ್ ಶಾಕ್ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್‌ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ.
ಇದು ಜೈದೇವ್‌ಗೆ ಕೋಪ ಬರುವಂತೆ ಆಗಿದೆ. ಶಕುಂತಲಾಳಿಗೆ ಏಕವಚನ ಬಳಸಿ, ಗಟ್ಟಿಯಾಗಿ ಹೆಡೆಮುರಿ ಕೊಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ.
ಗೆದ್ದು ಬೀಗಿದ ಭೂಮಿ-ಜೋಡಿ
ಇತ್ತ ಭೂಮಿಕಾ ಹಾಗೂ ಗೌತಮ್ ಒಂದು ಹೆಜ್ಜ ಮುಂದಿಟ್ಟಿದ್ದಾರೆ. ಇನ್ಮುಂದೆ ಸ್ಕೂಲ್ ಜವಬ್ದಾರಿ ಭೂಮಿಕಾ-ಗೌತಮ್ ಹೊಣೆ ಹೊತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಪ್ರಸಾರ ಆಗಿದೆ. ಭೂಮಿಕಾ- ಗೌತಮ್ ನಡೆ ಶಕುಂತಲಾಳಿಗೂ ಸಖತ್ ಶಾಕ್ ಆಗಿದೆ.
ಮಂಕಾಗಿದೆ ಜೇಡಿಯ ಅಟ್ಟಹಾಸ!
ಜೈದೇವ್ ಹೂಡಿಕೆ ಮಾಡಿರೋ ಆಸ್ತಿ ಟ್ರ್ಯಾಕ್ ಆಗಿ ಹಣವನ್ನು ಕಳೆದುಕೊಂಡಿದ್ದಾನೆ. ಸಾಲ ಕೊಟ್ಟವನು ೪೮ ಗಂಟೆಗಳ ಒಳಗಾಗಿ ಹಣವನ್ನು ವಾಪಸ್ ಕೊಡಬೇಕು. ಇಲ್ಲದೇ ಹೋದರೇ ಎಲ್ಲ ಪ್ರಾಪಟಿ ನನ್ನ ಹೆಸರಿಗೆ ಬರೆದುಕೊಳ್ಳುವೆ ಅಂತ ವಾರ್ನ್ ಕೂಡ ಮಾಡಿದ್ದಾನೆ. ಇದರಿಂದಾಗಿ ಜೈದೇವ್ ಕಂಗಾಲಾಗಿದ್ದಾನೆ.
ಗೌತಮ್ ಮತ್ತೆ ಶಕುಂತಲಾಗೆ ಆಶ್ರಯ ನೀಡಿದರು ನೀಡಬಹುದು. ಲಕ್ಷ್ಮೀಕಾಂತ್‌ಗೆ ಆದಂತೆ ಶಕುಂತಲಾಗೆ ಕೂಡ ಜ್ಞಾನೋದಯವಾದರೂ ಆಗಬಹುದು. ಹಾಗೊಂದು ವೇಳೆ ಶಕುಂತಲಾ ನಿಜಕ್ಕೂ ಗೌತಮ್ ಬಳಿ ಹೋದರೆ ಜೈದೇವ್ ಸುಮ್ಮನೆ ಇರುತ್ತಾನಾ? ಅನ್ನೋದು ಪ್ರೇಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Kara trailer: ಧನುಷ್ ಅಭಿನಯದ 'Kara'ಚಿತ್ರದ ಟ್ರೈಲರ್ ಔಟ್!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.