ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ( amruthadhaare serial )ಶಕುಂತಲಾ ಪಾಡು ಅಯೋಮಯವಾಗಿದೆ. ಶಕುಂತಲಾ (Shakuntala) ಈಗ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಶಕುಂತಲಾ ಭಿಕ್ಷೆ ಬೇಡುವಾಗ ಸೊಸೆ ಕೂಡ ಅತ್ಯಂತ ಹೀನಾಯವಾಗಿ ನಡೆದುಕೊಂಡಿದ್ದಾಳೆ.
ಸದ್ಯ ‘ಪಾರು’ ಧಾರಾವಾಹಿಯ ಅಖಿಲಾಂಡೇಶ್ವರಿ ಪಾತ್ರವನ್ನ ‘ಅಮೃತಧಾರೆ’ ಜೊತೆಗೆ ಸಮೀಕರಿಸಲಾಗಿದೆ. ಗೌತಮ್ ದಿವಾನ್ (Gowtham Diwan) ಪಾಲಿಗೆ ದೇವರಂತೆ ಬಂದಿದ್ದಾರೆ ಅಖಿಲಾಂಡೇಶ್ವರಿ. ಒಂದು ಕಡೆ ಬ್ಯುಸಿನೆಸ್ ಚಿಂತೆ ಆದರೆ ಇನ್ನೊಂದು ಕಡೆ ಶಕುಂತಲಾ ಚಿಂತೆ ಗೌತಮ್ ಆಗಿದೆ.
ಇದನ್ನೂ ಓದಿ: Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ; ಮನೆ ನಂದಗೋಕುಲವಾಗೋದು ಹೀಗೆ!
ಹೀಯಾಳಿಸಿದ ಸೊಸೆ
ಶಕುಂತಲಾ ಭಿಕ್ಷೆ ಬೇಡುವಾಗ ಸೊಸೆ ಅತ್ಯಂತ ಹೀನಾಯವಾಗಿ ಹಂಗಿಸುತ್ತಾಳೆ. ತನ್ನ ಬಳಿ ಇದ್ದ ನೋಟನ್ನು ಭಿಕ್ಷೆಯಾಗಿ ಶಕುಂತಲಾಗೆ ಕೊಡುತ್ತಾಳೆ. ಅತ್ಯಂತ ಅಹಂಕಾರದಿಂದ ಸೊಸೆಯೊಂದಿಗೆ ವರ್ತಿಸಿದ್ದಾಳೆ.
ಮತ್ತೊಂದು ಕಡೆ ಗೌತಮ್ ಇನ್ನೇನು ಮೀಟಿಂಗ್ ಮುಗಿಸಿ ಟ್ರಾಫಿಕ್‌ನಲ್ಲಿ ಇರುವಾಗ, ಶಕುಂತಲಾ ಕಣ್ಣಿಗೆ ಬೀಳುತ್ತಾಳೆ. ಶಕುಂತಲಾ ನೋಡಿ ಶಾಕ್ ಆಗುತ್ತಾನೆ ಗೌತಮ್. ಶಕುಂತಲಾ ಕೂಡ ಗಾಬರಿ ಆಗಿದ್ದಾಳೆ.
ಗೌತಮ್‌ಗೆ ನೆರವಾಗಿ ನಿಂತ್ರು ಅರಸನ ಕೋಟೆ ಅಖಿಲಾಂಡೇಶ್ವರಿ!
ಹಿರಿಯರು ಬಾಳಿ ಬದುಕಿದ ಮನೆ ಉಳಿಸಿಕೊಳ್ಳಲು ಗೌತಮ್ ದಿವಾನ್ ಅಖಿಲಾಂಡೇಶ್ವರಿ ಮನೆಗೆ ಬಂದಿದ್ದಾರೆ. ಅಲ್ಲೊಂದು ಮೀಟಿಂಗ್ ನಡೆಯುತ್ತೆ. ನಂತರ ಗೌತಮ್ ಕೈಗೆ ಬ್ಲ್ಯಾಂಕ್ ಚೆಕ್ ಕೊಟ್ಟು ಬಿಡ್ತಾರೆ ಅಖಿಲಮ್ಮ. ಚೆಕ್ ನೋಡಿದ ಗೌತಮ್‌ಗೆ ಶಾಕ್ ಜೊತೆಗೆ ಖುಷಿನೂ ಆಗುತ್ತೆ. ಆದರೂ ಏನಿದು ಮೇಡಮ್ ಅಂತ ಕೇಳ್ತಾರೆ. ಅದಕ್ಕೆ ಅಖಿಲಾಂಡೇಶ್ವರಿ ಇದು ನಾನು ದಿವಾನ್ ಕುಟುಂಬ ಉಳಿಸಿಕೊಳ್ಳುವುದಕ್ಕೆ ಗೌತಮ್ ದಿವಾನ್‌ಗೆ ಕೊಡ್ತಿರೋದು, ನಿಮಗೆ ಗೆಲುವು ಸಿಗಲಿ ಎನ್ನುತ್ತಾರೆ.
ಇತ್ತ ಜೈದೇವ್, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್ ಕೊಟ್ಟು ಜೈದೇವ್ ಕೊಡಲು ಗೌತಮ್ ಹೇಳುತ್ತಾನೆ. ಇನ್ನೇನು ಜೈದೇವ್ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್.
ಮುಂದೆ ಗೌತಮ್ ಅಷ್ಟೂ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ತಾನಾ? ಜೈದೇವ್ ವಿದೇಶಕ್ಕೆ ಹೋಗಿ ಸೆಟಲ್ ಆಗ್ತಾನಾ? ಜೈದೇವ್ ಪತ್ನಿಯ ಮೋಸವೂ ಕೂಡ ಬಯಲಾಗುತ್ತಾ? ಶಕುಂತಲಾ ಕಥೆ ಏನು ಗೌತಮ್ ಮುಂದಿನ ನಡೆಯೇನು? ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Amruthadhaare serial: ಗೌತಮ್‌ಗೆ ಸಾಥ್ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ! ತನ್ನ ಸಾಮ್ರಾಜ್ಯಕ್ಕೆ ಮರಳಿದ ದಿವಾನ್
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.