ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಮಲ್ಲಿ ಮೇಲೆಯೇ ಕಥೆ ಸಾಗುತ್ತಿದ್ದು, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇದೆ. ಜೈದೇವ್ ಆಸ್ತಿ ಸಿಕ್ಕರೂ ಮಲ್ಲಿ ನೆಮ್ಮದಿ ಹಾಳು ಮಾಡದೇ ಇರೋನೇ ಅಲ್ಲ ಅಂತ ನಿರ್ಧಾರ ಮಾಡಿದ್ದಾಗಿದೆ. ಸಿಂಪಲ್ ಸುನಿಯನ್ನ (Simple Suni) ಸದ್ಯಕ್ಕಂತೂ ಮಲ್ಲಿ ವಿರುದ್ಧ ಛೂ ಬಿಟ್ಟಿದ್ದಾನೆ. ಮಲ್ಲಿಗೆ ಈ ಬಗ್ಗೆ ಯಾವುದೇ ಅರಿವು ಇಲ್ಲದೇ ಇದ್ದರೂ ಭೂಮಿಕಾ (Bhoomika) ಮಾತ್ರ ಅಳೆದು ತೂಗಿ ಸರಿಯಾಗಿ ನಿರ್ಧಾರ ತೆಗೆದುಕೊಳ್ತಾ ಇದ್ದಾಳೆ. ಇನ್ನೊಂದು ಕಡೆ ಸಿಂಪಲ್ ಸುನಿಯ ಹೈಡ್ರಾಮ ಗೌತಮ್ ಮುಂದೆಯೂ ಜೋರಾಗಿದೆ.
ಮಲ್ಲಿ ದಿನ ನಿತ್ಯ ಕಣ್ಣೀರು ಹಾಕಬೇಕು ಎಂದು ಮಲ್ಲಿ ಹಿಂದೆ ಹುಡುಗನನ್ನು ಬಿಟ್ಟಿದ್ದಾನೆ ಜೈದೇವ್. ಆತ ಕೂಡ ಪ್ರೀತಿಯ ನಾಟಕ ಮಾಡ್ತಿದ್ದಾನೆ ಕೇಡಿ ಜೇಡಿಯ ಪೈಲ್ವಾನ್ ಭೂಮಿ ಕಣ್ಣೆದುರು ಬಂದು ಆಯ್ತು. ತಕ್ಕ ಮಟ್ಟಿಗೆ ಇಂಪ್ರೆಸ್ ಕೂಡ ಮಾಡಾಯ್ತು.
ಇದನ್ನೂ ಓದಿ: Bhagyalakshmi Kannada Serial: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ನಟ ಸುದರ್ಶನ್!
ಗೌತಮ್ ಮುಂದೆ ಶುರು ಆಯ್ತು ಡ್ರಾಮ
ಇನ್ನೊಂದು ಕಡೆ ಗೌತಮ್, ಸ್ನೇಹಿತ ಆನಂದ್‌ಗೆ ಮಲ್ಲಿಗೆ ಹುಡುಗನ ಹುಡುಕುವ ವಿಚಾರವಾಗಿ ಹೇಳಿರ್ತಾನೆ. ಆನಂದ್ ಕೂಡ ಅದೆಲ್ಲವನ್ನು ತನಿಖೆ ಮಾಡಿ,ಹುಡುಗ ನಮ್ಮದೇ ಆಫೀಸ್ ಫಂಡ್ ಹಣದಲ್ಲಿ ಓದಿದ್ದು. ಒಳ್ಳೆಯ ಹುಡುಗ ಎಂದಿದ್ದಾನೆ. ಆದರೆ ಆ ಹುಡುಗ ಯಾರು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಗೌತಮ್ ಹಾಗೂ ಆನಂದ್ ನೋಡಿ, ಸಿಂಪಲ್ ಸುನಿ ಕೂಡ ಡ್ರಾಮ ಮಾಡ್ತಿದ್ದಾನೆ.
ಗೌತಮ್‌ನ ದೊಡ್ಡ ಅಭಿಮಾನಿ ಎಂದು ಆನಂದ್ ಬಳಿ ಹೇಳಿದ್ದಾನಿ ಸುನಿ. ಗೌತಮ್ ಕಂಡೊಡನೆ ಸುನಿ ಕಾಲಿಗೆ ಬಿದ್ದು ನಿಮ್ಮ ದೊಡ್ಡ ಅಭಿಮಾನಿ ಎಂದು ಇಂಪ್ರೆಸ್ ಮಾಡಲು ಮುಂದಾಗಿದ್ದಾನೆ. ಸುನಿ ಮಾಡುತ್ತಿರುವ ಡ್ರಾಮಕ್ಕೆ ಗೌತಮ್ ಬಕ್ರಾ ಆಗ್ತಾನಾ ಅನ್ನೋದೇ ಕುತೂಹಲ.
ಭೂಮಿ-ಮಲ್ಲಿ ಮುನಿಸು ಸರಿ ಹೋಗಾಯ್ತು
ಭೂಮಿ ಮಾಡಿದ ತನಿಖೆ ವಿಚಾರವಾಗಿ ಮಲ್ಲಿ ಊಟ ಬಿಟ್ಟು ಕೂತಿದ್ದಳು. ಮಲ್ಲಿ ಹಾಗೂ ಭೂಮಿ ನಡುವೆ ಮನಸ್ತಾಪವೂ ಆಯ್ತು. ಅದನ್ನು ಗೌತಮ್ ಸರಿ ಮಾಡಿದ್ದು ಆಯ್ತು. ಮಲ್ಲಿಗೆ ಮತ್ತೆ ಜೀವನದಲ್ಲಿ ನೋವು ಆಗಬಾರದು ಎನ್ನುವ ಉದ್ದೇಶ ಭೂಮಿಯದ್ದು. ಮುಂದೆ ಜೈದೇವ್ ಯಾವ ರೀತಿ ಮಲ್ಲಿ ಬದಕನ್ನು ತನ್ನ ಕೈಯಲ್ಲಿ ಕಂಟ್ರೋಲ್ ಹೇಗೆ ತೆಗೆದುಕೊಳ್ತಾನೆ? ಗೌತಮ್‌ಗೆ ಈ ಎಲ್ಲ ಮಾಸ್ಟರ್ ಪ್ಲ್ಯಾನ್ ಗಮನಕ್ಕೆ ಬರುತ್ತಾ? ಭೂಮಿಗೂ ಡೌಟ್ ಶುರು ಆಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಗಲಿದೆ.
ಇದನ್ನೂ ಓದಿ: Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ