ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಗೌತಮ್‌ಗೆ ಹೇಗೋ ಭೂಮಿ ರಿಪೋರ್ಟ್‌ ಸಿಕ್ಕಿದೆ. ವೈದ್ಯರ ಬಳಿ ಬಂದು ಕೇಳಿದಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಮೂರನೇ ಹಂತ ಇದ್ದ ಕಾರಣ ವೈದ್ಯರು ಕೂಡ ಕಷ್ಟಕರ ಎಂದಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಶಾಕ್‌ ಆಗಿದ್ದಾನೆ. ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಭೂಮಿ ಹಾಗೂ ಗೌತಮ್‌ (Gowtham Diwan) ಬಾಳಲ್ಲಿ ಮತ್ತೆ ಆತಂಕ ಶುರು ಆಗಿದೆ. ಇನ್ನೇನು ಎಲ್ಲ ಸರಿ ಹೋಗೋ ಹೊತ್ತಲ್ಲೇ ಭೂಮಿಗೆ ಅನಾರೋಗ್ಯ ಸಂಭವಿಸಿದೆ. ಬ್ರೆಸ್ಟ್‌ ಕ್ಯಾನ್ಸರ್‌ ಇರೋ ಸುದ್ದಿ ಕೇಳಿ ಆಘಾತವಾಗಿದೆ. ಗೌತಮ್‌ಗೆ ಈ ವಿಚಾರವನ್ನು ಭೂಮಿ (Bhoomika) ಎಷ್ಟೇ ಮುಚ್ಚಿಟ್ಟಿದ್ದೃೂ ಈಗ ಗೌತಮ್‌ಗೂ ಈ ವಿಚಾರ ಗೊತ್ತಾಗೇ ಹೋಗಿದೆ.

ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌

ಒಂದೆಡೆ, ಶಕುಂತಲಾ ಮತ್ತು ಜೈದೇವ ಒಗ್ಗಟ್ಟಾಗಿದ್ದು, ಗೌತಮ್​ ಮತ್ತು ಭೂಮಿಕಾರನ್ನು ಸರ್ವನಾಶ ಮಾಡುವ ಮಹಾ ಪ್ಲ್ಯಾನ್ ಹಾಕುತ್ತಿದ್ದಾರೆ. ಅದೇ ಇನ್ನೊಂದೆಡೆ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ.

ಇದನ್ನೂ ಓದಿ: Jodi No 1 Winner: ‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ! ಗೆದ್ದವರಿಗೆ ಏನು ಬಹುಮಾನ?

ಮೊದಲಿಗೆ ಈ ವಿಚಾರ ಭೂಮಿಗೆ ಗೊತ್ತಾಗಿದ್ದೇ ತಡ, ಗೌತಮ್‌ನಿಂದ ಕ್ರಮೇಣ ದೂರ ಉಳಿಯಲು ಶುರು ಮಾಡಿದ್ದಳು. ಅಷ್ಟೇ ಅಲ್ಲ ಗೌತಮ್‌ಗೆ ಈ ವಿಚಾರ ಗೊತ್ತಾಗದಂತೆ ನಿಭಾಯಿಸಿದ್ದಳು. ಆದರೆ ರಾತ್ರಿ ತನ್ನ ಡೈರಿಯಲ್ಲಿ ತನಗಾದ ನೋವನ್ನು ಬರೆದಿದ್ದಾಳೆ ಭೂಮಿ. ಅಷ್ಟೇ ಅಲ್ಲ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಗೌತಮ್‌ಗೆ ಹೇಗೋ ಭೂಮಿ ರಿಪೋರ್ಟ್‌ ಸಿಕ್ಕಿದೆ. ವೈದ್ಯರ ಬಳಿ ಬಂದು ಕೇಳಿದಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಮೂರನೇ ಹಂತ ಇದ್ದ ಕಾರಣ ವೈದ್ಯರು ಕೂಡ ಕಷ್ಟಕರ ಎಂದಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಶಾಕ್‌ ಆಗಿದ್ದಾನೆ.

ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ. ಅಮೃತಧಾರೆಯಲ್ಲಿ ಭೂಮಿಕಾಗೆ ಅವಳ ನೆಚ್ಚಿನ ಪತಿ ಗೌತಮ್‌ ಒಂದು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಭೂಮಿ ಬರೆದ ಡೈರಿಯಲ್ಲಿರುವ ಭಾವುಕ ಬರಹ, ಕವನಗಳನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಆದರೆ ಇದರಲ್ಲಿ ಜೈದೇವ್‌ ಹಾಗೂ ಶಕುಂತಲಾ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ.



ಈ ಪುಸ್ತಕವನ್ನು ಓದಿದ ಶಕುಂತಲಾ, ಶಕುನಿ ಮಾಮನ ಮುಂದೆ ಕೋಪ ವ್ಯಕ್ತಪಡಿಸಿದ್ದಾಳೆ. ನನ್ನ ಜೈದೇವ್‌ ಬಗ್ಗೆ ಇಷ್ಟು ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ. ಅವಳಿಗೆ ಧೈರ್ಯ ಎಷ್ಟಿರಬೇಡ? ಎಂದಿದ್ದಾಳೆ. ಶಕುಂತಲಾ ಪುಸ್ತಕವನ್ನು ಬಿಸಾಕಿರೋದನ್ನ ಗಮನಿಸಿದ ಲಕ್ಷ್ಮೀಕಾಂತ್‌, ನಿಜವಾಗಲೂ ನೀನು ಬದಲಾಗಿದ್ದೀಯಾ ಎಂದು ಪ್ರಶ್ನೆ ಇಟ್ಟಿದ್ದಾನೆ. ಶಕುಂತಲಾ ಕೂಡ ಜೈದೇವ್‌ ಮುಂದೆ ಈ ಬಗ್ಗೆ ಪ್ರಸ್ತಾಪ ಇಟ್ಟಿದ್ದಾಳೆ. ಜೈದೇವ್‌ ಹಾಗೂ ಶಕುಂತಲಾ ಸೇರಿ ಮತ್ತೊಂದು ಮಾಸ್ಟರ್‌ ಪ್ಲ್ಯಾನ್‌ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Amruthadhaare Serial: ಅನುಮಾನ ಹುಟ್ಟಿದೆ ಶಕುಂತಲಾ ನಡೆ! ಜೈದೇವ್‌ ಮುಂದಿನ ಮಾಸ್ಟರ್‌ ಪ್ಲ್ಯಾನ್‌ ಏನು?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author