ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಕೇಡಿ ಜೈದೇವ್‌ ಮುಖವಾಡ ಕಳಚಿ ಬೀಳೋ ಹೊತ್ತು ಬಂದಾಯ್ತು!

Amruthadhaare Serial: ಅಮೃತಧಾರೆಯಲ್ಲಿ (amruthadhaare) ಮಿಂಚು ಹುಡುಕಾಟ, ಗೌತಮ್ ಬಂಧನ ಮತ್ತು ಜೈದೇವ್‌ನ ಕುತಂತ್ರಗಳ ನಡುವೆ ಕಥೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಅಂತೂ ಮಿಂಚುಳನ್ನು ಕಾಪಾಡಿಕೊಂಡಿದ್ದಾಳೆ ಭೂಮಿ. ಆದರೀಗ ಕೇಡಿ (KD) ಮುಖವಾಡ ಕಳಚಿಬೀಳೋ ಹೊತ್ತು ಬಂದಂತಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare) ಮಿಂಚು ಹುಡುಕಾಟ, ಗೌತಮ್ (Gowtham) ಬಂಧನ ಮತ್ತು ಜೈದೇವ್‌ನ ಕುತಂತ್ರಗಳ ನಡುವೆ ಕಥೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಅಂತೂ ಮಿಂಚುಳನ್ನು ಕಾಪಾಡಿಕೊಂಡಿದ್ದಾಳೆ ಭೂಮಿ. ಆದರೀಗ ಕೇಡಿ (KD) ಮುಖವಾಡ ಕಳಚಿಬೀಳೋ ಹೊತ್ತು ಬಂದಂತಿದೆ.

DNA ವಿಚಾರವಾಗಿ ಚರ್ಚೆ

ನಕಲಿ ತಂದೆ ತಾಯಿ ಗೌತಮ್‌ ಬಳಿ ಓಡಿ ಬಂದು, ಮಗಳ ಬಗ್ಗೆ ಕಂಪ್ಲೇಟ್‌ ಮಾಡಿ ಒಳ್ಳೆಯದು ಮಾಡಿದ್ವಿ ಇಲ್ಲ ಅಂದ್ರೆ ನನ್ನ ಮಗಳು ನನಗೆ ಸಿಗ್ತಾ ಇರಲಿಲ್ಲ ಎಂದು ಡ್ರಾಮ ಮಾಡಿದ್ದಾರೆ. ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆಗ ಗೌತಮ್‌, ಮಿಂಚುಳನ್ನ ಯಾರೂ ಎಲ್ಲಿಯೂ ಕರೆದುಕೊಂಡು ಹೋಗೋ ಹಾಗಿಲ್ಲ ಎಂದಿದ್ದಾನೆ. ಮಿಂಚುನೇ ನನ್ನ ಮಗಳು ಎಂದಿದ್ದಾನೆ ಗೌತಮ್‌. DNA ವಿಚಾರವಾಗಿ ಮಾತನಾಡಿದ್ದಾನೆ.

ಇದನ್ನೂ ಓದಿ: Salman Khan : ಗೆಳತಿ ನಿಧನದಿಂದ ತೀವ್ರ ದುಃಖಿತರಾದ ಸಲ್ಮಾನ್‌ ಖಾನ್‌; ಯಾರು ಈ ಕುಮುದ್ ರಾಣೆ ?

ಕೇಡಿ ಮುಖವಾಡ ಕಳಚಿಬೀಳೋ ಹೊತ್ತು!

ನಕಲಿ ಅಪ್ಪ ಅಮ್ಮ ಆ ಬಳಿಕ ಸೀದಾ ಬಂದದ್ದು ಜೈದೇವ್‌ ಮುಂದೆ DNA ಟೆಸ್ಟ್‌ ಕೊಡಲು ಹೇಳಿದ್ದಾರೆ. ಈ ಮ್ಯಾಟರ್‌ ಅಲ್ಲಿ ನಾವು ತಗಲಾಕೊಂಡ್ವಿ ಅನ್ನಿಸ್ತಾ ಇದೆ. ಜೈಲಿಗೆ ಕಳಿಸ್ತಾರೆ ನಮ್ಮನ್ನು. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಜೈದೇವ್‌ ಮುಂದೆ ಅಂಗಲಾಚಿ ಬೇಡಿದ್ದಾರೆ. ಇನ್ನೊಂದು ಕಡೆ ಮಿಂಚುಗೆ ಗೌತಮ್‌, ಕಾರ್‌ನಲ್ಲಿ ಕರೆದಕೊಂಡು ಹೋಗಿದ್ದು ಯಾರು ಅಂತ ಪ್ರಶ್ನೆ ಇಟ್ಟಿದ್ದಾನೆ. ಈಗ ಈ ಎಲ್ಲದರ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಗೌತಮ್‌ಗೆ ಗೊತ್ತಾಗತ್ತಾ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ.



ದಿಯಾ ಬೇಬಿಯನ್ನು ಕೊಂದಿರುವ ಜೈದೇವ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದಾನೆ. ಇದೀಗ ಮನೆಯಿಂದ ಹೊರಗೆ ಹೋಗಿರುವ ಮಿಂಚುಗೂ ಸಂಕಷ್ಟ ತರುತ್ತಿದ್ದಾನೆ. ಮತ್ತೊಂದೆಡೆ ಶಕುನಿ ಮಾಮಾ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ.

ಅರಸನಕೋಟೆ ಅಖಿಲಾಂಡೇಶ್ವರಿ ಸಹ ಮತ್ತೆ ಗೌತಮ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ವೇಳೆ ಮಿಂಚು ಜನ್ಮರಹಸ್ಯ ಬಯಲಾಗಿ, ಜೈದೇವ್ ಪಾತ್ರ ಕೊನೆಯಾದ್ರೆ ಅಮೃತಧಾರೆ ಸೀರಿಯಲ್ ಕೊನೆಯಾಗೋದು ಬಹುತೇಕ ಖಚಿತವಾಗಲಿದೆ.

ಇದನ್ನೂ ಓದಿ: Amruthadhaare Serial: ಸ್ಫೋಟವಾಯ್ತು ಮಹಾಸತ್ಯ; ಗೌತಮ್ - ಭೂಮಿಕಾಗೆ ಮಗಳು ಸಿಕ್ಕೇ ಬಿಟ್ಲು!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author