ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿ ನಿಶ್ಚಿತಾರ್ಥವೂ ಆಗಿದೆ. ಸುನಿಯನ್ನು ಜೈದೇವ್‌ ತನ್ನ ಹಗೆತನಕ್ಕೆ ಬಳಸಿಕೊಂಡಿದ್ದಾನೆ. ಜೈದೇವ್‌ ಈ ಮಾಸ್ಟರ್‌ ಪ್ಲ್ಯಾನ್‌ ಸುನಿಗೆ ಗೊತ್ತಾಗಿಲ್ಲ. ಆದರೀಗ ಭೂಮಿಕಾ ಬಿಚ್ಚಿಟ್ಟ ಮಲ್ಲಿ (malli Bhoomika) ಬದುಕಿನ ಸತ್ಯ ಸುನಿ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ? ಅಥವಾ ಮಲ್ಲಿ ಮೇಲೆ ನಿಜವಾದ ಪ್ರೀತಿಯಿಂದ ಮಲ್ಲಿಗೆ ಸಾಥ್‌ ಕೊಡ್ತಾನಾ ಸುನಿ?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿ ನಿಶ್ಚಿತಾರ್ಥವೂ ಆಗಿದೆ. ಸುನಿಯನ್ನು ಜೈದೇವ್‌ ತನ್ನ ಹಗೆತನಕ್ಕೆ ಬಳಸಿಕೊಂಡಿದ್ದಾನೆ. ಜೈದೇವ್‌ ಈ ಮಾಸ್ಟರ್‌ ಪ್ಲ್ಯಾನ್‌ ಸುನಿಗೆ ಗೊತ್ತಾಗಿಲ್ಲ. ಆದರೀಗ ಭೂಮಿಕಾ ಬಿಚ್ಚಿಟ್ಟ ಮಲ್ಲಿ (malli Bhoomika) ಬದುಕಿನ ಸತ್ಯ ಸುನಿ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ? ಅಥವಾ ಮಲ್ಲಿ ಮೇಲೆ ನಿಜವಾದ ಪ್ರೀತಿಯಿಂದ ಮಲ್ಲಿಗೆ ಸಾಥ್‌ ಕೊಡ್ತಾನಾ ಸುನಿ?

ಸುನಿ ಮುಂದೆ ಸತ್ಯದ ಅನಾವರಣ

ಸುನಿ ಮುಂದೆ ಭೂಮಿಕಾ ಮಾತನಾಡಿ, ನನಗೆ ಮಲ್ಲಿ ಪಾಸ್ಟ್ ಯಾವುದೂ ಬೇಡ, ಯಾರು ಏನು ಹೇಳ್ತಾಳೆ ಅನ್ನೋದು ನನಗೆ ಮುಖ್ಯ ಅಲ್ಲ, ವರ್ತಮಾನ ಮತ್ತು ಭವಿಷ್ಯ ಮುಖ್ಯ ಎಂದಿದ್ದ ಸುನಿಲ್ ಮುಂದೆ ಭೂಮಿಕಾ, ಮಲ್ಲಿಗೆ ಪಾಸ್ಟ್ ಅಲ್ಲಿ ಮೋಸ ಮಾಡಿದವರು ಇದೀಗ ಪ್ರೆಸೆಂಟ್ ನಲ್ಲೂ ಇದ್ದಾರೆ. ಅವರಿಂದ ಯಾವುದೇ ಅಪಾಯ ಉಂಟಾಗವಾರದು ಎಂದು ಸತ್ಯ ಹೇಳ್ತೀನಿ ಎನ್ನುತ್ತಾಳೆ.

ಇದನ್ನೂ ಓದಿ: Radha Bhagavati: ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌! ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ಮಲ್ಲಿ ಮಾಜಿ ಗಂಡ ಬೇರೆ ಯಾರೂ ಅಲ್ಲ, ಗೌತಮ್ ದಿವಾನ್ ಅವರ ಸ್ವಂತ ತಮ್ಮ, ಜೈದೇವ್ ಎಂದು ಭೂಮಿಕಾ ಜೈ ಹೆಸರು ಹೇಳುತ್ತಿದ್ದಂತೆ ಸುನಿಲ್ ಶಾಕ್‌ ಗೆ ಒಳಗಾಗುತ್ತಾನೆ. ಜೈ ದೇವ್ ಹಾಕಿದ ಬಲೆಯಲ್ಲಿ ತಾನು ಸಂಪೂರ್ಣವಾಗಿ ಸಿಲುಕಿ ಹಾಕಿಕೊಂಡಿರುವ ಅನ್ನೋದನ್ನು ಸುನಿ ಅರಿತುಕೊಳ್ಳುತ್ತಾನೆ.

ಜೈದೇವ್‌ ಮುಂದೆ ಸುನಿಲ್‌ ಗರಂ

ಈ ವಿಚಾರ ತಿಳಿದ ಕೂಡಲೇ ಸುನಿ ನೇರವಾಗಿ ಜೈದೇವ್‌ ಮುಂದೆ ಹೋಗುತ್ತಾನೆ. ಜೈದೇವ್ ಮುಂದೆ ಬಂದು ನಿಲ್ಲುವ ಸುನಿ, ಜೆಡಿಗೆ ಆವಾಜ್ ಹಾಕುತ್ತಾನೆ. ಬಾಸ್ ನೀವು ಈ ಥರ ಮಾಡ್ತೀರಿ ಅಂತ ನಾನು ಅಂದುಕೊಂಡಿರಲಿಲ್ಲ. ನಿಮ್ಮ ಸ್ವಂತ ಹೆಂಡ್ತಿ ಮೇಲೆ ನನ್ನ ಛೂ ಬಿಟ್ಟಿದ್ದೀರಾ? ಖಂಡಿತವಾಗಿಯೂ ನಿಮ್ಮ ಹೆಂಡ್ತಿಯನ್ನು ನಾನು ಮದುವೆಯಾಗೋದಿಲ್ಲ ಎನ್ನುತ್ತಾನೆ.

ಇದೀಗ ಮುಂದೆ ಜೈದೇವ್‌ ಏನು ಮಾಡ್ತಾನೆ? ಸುನಿಗೆ ಮತ್ತೆ ಆವಾಜ್‌ ಹಾಕಿ ಮಲ್ಲಿಗೆ ತಾಳಿ ಕಟ್ಟೋವಂತೆ ಮಾಡ್ತಾನಾ ಅನ್ನೋದೇ ವೀಕ್ಷಕರಲ್ಲಿ ಇರುವ ಕುತೂಹಲ.



ಪಾರ್ಥ ಕಣ್ಣಿಗೆ ಸುನಿ ಕೊನೆಗೂ ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡಿಲ್ಲ. ಆಫೀಸ್‌ನಿಂದ ಕಾಲ್‌ ಬಂದ ಕಾರಣ ಸುನಿ ನೋಡೋ ಮುಂಚೆಯೇ ಅಲ್ಲಿಂದ ಎದ್ದು ಹೋಗ್ತಾನೆ. ಒಂದು ವೇಳೆ ಪಾರ್ಥ ಕಣ್ಣಿಗೆ ಸುನಿ ಬಿದ್ದಿದ್ದರೆ, ಜೈದೇವ್‌ ಜೊತೆ ಸುನಿ ಕ್ಲೋಸ್‌ ಇರೋ ಬಗ್ಗೆ ಗೌತಮ್‌ಗೆ ಹೇಳಿಯೂ ಹೇಳಿರುತ್ತಿದ್ದ ಪಾರ್ಥ.

ಇದನ್ನೂ ಓದಿ: Amruthadhare Serial: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author