ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಎದುರಿರೋದು ದೀಪಿಕಾ ಅಲ್ಲ ಭೂಮಿಕಾ ಅನ್ನೋ ಸತ್ಯ ಜೇಡಿಗೆ ಅರಿವಾಗುತ್ತಾ? ವಿಲನ್​ಗಳು ತತ್ತರ

Amruthadhaare Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare serial)ಇದೀಗ ಅಂತಿಮ ಘಟ್ಟ ತಲುಪುತ್ತಿದೆ. ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ತಿರುವುಗಳು ಎದುರಾಗುತ್ತಿದ್ದು, ಗೌತಮ್ ಮತ್ತು ಭೂಮಿಕಾ (Gowtham Bhoomika) ಸೇರಿಕೊಂಡು ಶಕುಂತಲಾ ಹಾಗೂ ಜೈದೇವ್‌ಗೆ ಬುದ್ಧಿ ಕಲಿಸಲು ಹೊಸ ತಂತ್ರ ರೂಪಿಸಿದ್ದಾರೆ. ಇಷ್ಟು ದಿನ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸುತ್ತಿದ್ದ ಕಳ್ಳರ ಆಟಕ್ಕೆ ಇದೀಗ ಗೌತಮ್ ಬ್ರೇಕ್ ಹಾಕಲು ಮುಂದಾಗಿದ್ದಾನೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare serial)ಇದೀಗ ಅಂತಿಮ ಘಟ್ಟ ತಲುಪುತ್ತಿದೆ. ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ತಿರುವುಗಳು ಎದುರಾಗುತ್ತಿದ್ದು, ಗೌತಮ್ ಮತ್ತು ಭೂಮಿಕಾ (Gowtham Bhoomika) ಸೇರಿಕೊಂಡು ಶಕುಂತಲಾ ಹಾಗೂ ಜೈದೇವ್‌ಗೆ ಬುದ್ಧಿ ಕಲಿಸಲು ಹೊಸ ತಂತ್ರ ರೂಪಿಸಿದ್ದಾರೆ. ಇಷ್ಟು ದಿನ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸುತ್ತಿದ್ದ ಕಳ್ಳರ ಆಟಕ್ಕೆ ಇದೀಗ ಗೌತಮ್ ಬ್ರೇಕ್ ಹಾಕಲು ಮುಂದಾಗಿದ್ದಾನೆ. ಈಗ ಎದುರಿರೋದು ದೀಪಿಕಾ (Deepika Bhoomika) ಅಲ್ಲ ಭೂಮಿಕಾ ಅನ್ನೋ ಸತ್ಯ ಕೇಡಿ ಜೇಡಿಗೆ ಅರಿವಾಗುತ್ತಾ? ಅನ್ನೋದು ಕುತೂಹಲ.

ಒಂದೆಡೆ ಶಕುಂತಲಾ ಮತ್ತು ಜೈದೇವ್ ಸೇರಿಕೊಂಡು ಎಲ್ಲಾ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದರೆ, ಮತ್ತೊಂದೆಡೆ ಗೌತಮ್ ಈಗಾಗಲೇ ಜೈದೇವ್‌ನನ್ನು ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ಜೈದೇವ್ ಯಾರ ಕಣ್ಣಿಗೂ ಬೀಳದಂತೆ ಅಡಗಿ ಕುಳಿತು ತನ್ನ ಮುಂದಿನ ಆಟಕ್ಕೆ ಸಿದ್ಧತೆ ನಡೆಸುತ್ತಿದ್ದಾನೆ. ಆದರೆ ಗೌತಮ್ ಮಾತ್ರ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಶತ್ರುಗಳನ್ನೇ ಅವರ ಬಲೆಯಲ್ಲಿ ಬೀಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.

ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!

ಭೂಮಿಕಾ ಆಸ್ತಿಯ ಪವರ್ ಕಿತ್ತುಕೊಳ್ಳಲು ಗೌತಮ್ ನಾಟಕ!

ಭೂಮಿಕಾ ಹೆಸರಿನಲ್ಲಿರುವ ಆಸ್ತಿಯನ್ನು ಹೇಗಾದರೂ ಮಾಡಿ ಕಬಳಿಸಬೇಕೆಂಬುದು ಶಕುಂತಲಾ ಮತ್ತು ಜೈದೇವ್‌ನ ಉದ್ದೇಶ. ಇದನ್ನು ಅರಿತಿರುವ ಗೌತಮ್, ಅವರ ಸಂಚಿಗೆ ತಿರುಗೇಟು ನೀಡಲು ಹೊಸ ಉಪಾಯ ಕಂಡುಕೊಂಡಿದ್ದಾನೆ.

ಶಕುಂತಲಾಗೆ ಕೇಳಿಸುವಂತೆ ಗೌತಮ್ ಒಂದು ನಕಲಿ ಫೋನ್ ಕರೆಯನ್ನು ಮಾಡಿದ್ದಾನೆ. ಇನ್ನು ಮುಂದೆ ಭೂಮಿಕಾ ಹೆಸರಿನಲ್ಲಿ ಆಸ್ತಿಯ ಪವರ್ ಆಫ್ ಅಟಾರ್ನಿ ಇರುವುದು ಬೇಡ. ಆಕೆಯ ಹೆಸರಿನಿಂದ ಆಸ್ತಿ ಹಕ್ಕನ್ನು ತೆಗೆದುಹಾಕಬೇಕು ಎಂಬಂತೆ ಮಾತನಾಡಿದ್ದಾನೆ.



ಆದರೆ ಗೌತಮ್ ನಿಜವಾಗಿಯೂ ಭೂಮಿಕಾಳ ಆಸ್ತಿ ಹಕ್ಕನ್ನು ಕಿತ್ತುಕೊಳ್ಳುವ ಉದ್ದೇಶ ಹೊಂದಿಲ್ಲ. ಬದಲಿಗೆ ಈ ಮಾತು ಶಕುಂತಲಾಳ ಕಿವಿಗೆ ಬೀಳುವಂತೆ ಮಾಡಿ, ಆಕೆಯ ಮುಂದಿನ ನಡೆ ಏನು ಎಂಬುದನ್ನು ತಿಳಿದುಕೊಳ್ಳುವುದೇ ಗೌತಮ್‌ನ ನಿಜವಾದ ಉದ್ದೇಶವಾಗಿದೆ.

ಗೌತಮ್ ಬಲೆಗೆ ಬಿದ್ದ ಶಕುಂತಲಾ!

ಗೌತಮ್ ಆಡಿದ ನಾಟಕವನ್ನು ಕೇಳಿಸಿಕೊಂಡ ಶಕುಂತಲಾಳಿಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿದೆ. ಏಕೆಂದರೆ ಆಕೆ ರೂಪಿಸಿದ್ದ ಸಂಚು ಈಗ ತಲೆಕೆಳಗಾಗುವ ಭೀತಿ ಎದುರಾಗಿದೆ.

ಅಸಲಿಗೆ ನಕಲಿ ಭೂಮಿಕಾಳನ್ನು ಕರೆತಂದಿದ್ದೇ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ. ಆಕೆಯಿಂದ ನಿಜವಾದ ಭೂಮಿಕಾಳ ರೀತಿಯಲ್ಲೇ ಸಹಿ ಹಾಕಿಸಿ, ಎಲ್ಲಾ ಆಸ್ತಿಯನ್ನು ತಮ್ಮದಾಗಿಸಿಕೊಂಡು ಅಲ್ಲಿಂದ ಪರಾರಿಯಾಗಬೇಕು ಎಂಬುದು ಶಕುಂತಲಾ ಮತ್ತು ಜೈದೇವ್‌ನ ಸಂಚಾಗಿತ್ತು.ಆದರೆ ಇದೀಗ ಭೂಮಿಕಾ ಹೆಸರಿನಲ್ಲೇ ಆಸ್ತಿ ಇಲ್ಲದಿದ್ದರೆ ತಮ್ಮ ಯೋಜನೆ ಏನಾಗಬೇಕು ಎಂಬ ಚಿಂತೆ ಶಕುಂತಲಾಳನ್ನು ಕಾಡಿದೆ. ಹೀಗಾಗಿ ತಡಮಾಡದೆ ಜೈದೇವ್‌ಗೆ ಕರೆ ಮಾಡಿದ್ದಾಳೆ.

ಜೈದೇವ್‌ಗೆ ಕರೆ ಮಾಡಿದ ಶಕುಂತಲಾ!

ಗೌತಮ್ ಭೂಮಿಕಾಳ ಹೆಸರಿನಲ್ಲಿರುವ ಆಸ್ತಿ ಹಕ್ಕನ್ನು ತೆಗೆದುಹಾಕಲು ಮುಂದಾಗಿದ್ದಾನೆ ಎಂದು ಶಕುಂತಲಾ ಜೈದೇವ್‌ಗೆ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ಗೌತಮ್ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಮೊದಲೇ ನೀನು ಇಲ್ಲಿಗೆ ಬರಬೇಕು. ಅದಕ್ಕೂ ಮುನ್ನ ಎಲ್ಲಾ ಆಸ್ತಿಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಆತುರದಿಂದ ಹೇಳಿದ್ದಾಳೆ.

ಇದರೊಂದಿಗೆ ಗೌತಮ್ ಹಾಕಿದ ಬಲೆ ಯಶಸ್ವಿಯಾಗಿದೆ. ಅಡಗಿ ಕುಳಿತಿದ್ದ ಜೈದೇವ್ ಈಗ ಅನಿವಾರ್ಯವಾಗಿ ಹೊರಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಕುಂತಲಾಳ ಆತಂಕದ ಮಾತುಗಳೇ ಗೌತಮ್‌ನ ಪ್ಲ್ಯಾನ್ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.

ಶಕುಂತಲಾ ಮತ್ತು ಜೈದೇವ್ ಆಟಕ್ಕೆ ಬೀಳುತ್ತಾ ಫುಲ್ ಸ್ಟಾಪ್?

ಇದೀಗ ಗೌತಮ್ ಇಬ್ಬರನ್ನೂ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಶಕುಂತಲಾ ಮತ್ತು ಜೈದೇವ್‌ನ ನಿಜವಾದ ಉದ್ದೇಶವನ್ನು ಬಯಲು ಮಾಡಲು ಗೌತಮ್ ಸಿದ್ಧತೆ ನಡೆಸಿದ್ದಾನೆ. ಅಷ್ಟೇ ಅಲ್ಲ, ಇಬ್ಬರನ್ನೂ ಮನೆಯಿಂದ ಹೊರಹಾಕಲು ಸೂಕ್ತ ಸಮಯವನ್ನೂ ಕಾಯುತ್ತಿದ್ದಾನೆ. ಈಗ ಭೂಮಿಗೆ ಒಂದು ಸರದಲ್ಲಿ ಕ್ಯಾಮೆರಾ ಫಿಕ್ಸ್‌ ಮಾಡಿ ಕಳಿಸಿದ್ದಾನೆ ಗೌತಮ್.‌ ಮನೆ ಪಕ್ಕ ಇರೋ ಮಾಲ್‌ ಹೋಗಿದ್ದಾಳೆ. ಅಲ್ಲಿ ದೀಪಿಕಾ ಭೂಮಿಕಾ ಇಬ್ಬರೂ ಬಂದಿದ್ದಾರೆ. ಇದನ್ನು ಅರಿಯದ ಜೈದೇವ್‌ ದೀಪಿಕಾ ಅಂತ ತಿಳಿದು ಭೂಮಿಕಾಗೆ ಅವಾಜ್‌ ಹಾಕಿದ್ದಾನೆ.

ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!

ನಾನೇನು ಆಗ್ರೀಮೆಂಟ್‌ ಬರೆದು ಕೊಟ್ಟಿದ್ದೇನಾ ಅಂತ ಭೂಮಿಕಾ ಹೇಳಿದ್ದಾಳೆ. ಅವಳ ನಡೆ ಕಂಡು ಜೈದೇವ್‌ಗೆ ಅನುಮಾನ ಬಂದಿದೆಯಾ ಅಂತ ತಿಳಿಯಲು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಮುಂದಿನ ಸಂಚಿಕೆಗಳಲ್ಲಿ ಗೌತಮ್ ತನ್ನ ಯೋಜನೆಯನ್ನು ಹೇಗೆ ಕಾರ್ಯರೂಪಕ್ಕೆ ತರುತ್ತಾನೆ? ಜೈದೇವ್ ಮತ್ತೆ ಗೌತಮ್ ಎದುರು ಬರುತ್ತಾನಾ? ಶಕುಂತಲಾಳ ನಿಜವಾದ ಮುಖವಾಡ ಎಲ್ಲರ ಮುಂದೆ ಕಳಚುತ್ತದೆಯೇ? ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಇಷ್ಟು ದಿನ ಆಟ ಆಡುತ್ತಿದ್ದ ಶಕುಂತಲಾ ಮತ್ತು ಜೈದೇವ್‌ಗೆ ಈಗ ಗೌತಮ್ ತಕ್ಕ ಪಾಠ ಕಲಿಸುತ್ತಾನಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಗಲಿದೆ.

Yashaswi Devadiga

View all posts by this author