ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhare Serial: ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ! ಅನಿರೀಕ್ಷಿತ ತಿರುವಿನಲ್ಲಿ ಅಮೃತಧಾರೆ

Amruthadhare Serial: ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಅವಳನ್ನು ಕಿಡ್ನಾಪ್‌ ಮಾಡಿರೋದು ಭೂಮಿಕಾ ಗೊತ್ತಾಗಿದೆ. ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ ಸಹಾಯದೊಂದಿಗೆ ಸಹಾಯ ಪಡೆಯುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್‌ಗಳು ಮಿಂಚನ್ನು ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಭೂಮಿ ಈಗ ಭದ್ರಕಾಳಿ ಆಗಿದ್ದಾಳೆ. ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಅವಳನ್ನು ಕಿಡ್ನಾಪ್‌ ಮಾಡಿರೋದು ಭೂಮಿಕಾ ಗೊತ್ತಾಗಿದೆ. ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ (Bhoomika) ಹಳೆ ರೌಡಿಗಳ ಸಹಾಯದೊಂದಿಗೆ ಸಹಾಯ ಪಡೆಯುತ್ತಾಳೆ. ಆದರೆ, ಪೊಲೀಸರು ಮತ್ತು ಭೂಮಿಕಾ ಕಣ್ಣು ತಪ್ಪಿಸಿ ಕಿಡ್ನ್ಯಾಪರ್‌ಗಳು ಮಿಂಚನ್ನು (minchu) ಮತ್ತೊಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಾರೆ.

ಭೂಮಿ ಉಗ್ರಾವತಾರ

ಮಗಳನ್ನು ಕಾಪಾಡಲು ಮುಂದಾಗುವ ಭೂಮಿಕಾ ಎದುರು ಬರುವ ಪ್ರತಿಯೊಬ್ಬ ಗೂಂಡಾಗೂ ತಕ್ಕ ಶಾಸ್ತಿ ಮಾಡುತ್ತಾಳೆ. ಅಷ್ಟೇ ಅಲ್ಲ ಫೈಟ್‌ ಕೂಡ ಮಾಡುತ್ತಾಳೆ. ಭೂಮಿಕಾ ತನ್ನ ಮಗಳು ಮಿಂಚನ್ನು ಕಿಡ್ನ್ಯಾಪರ್‌ಗಳಿಂದ ಸುರಕ್ಷಿತವಾಗಿ ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಅಖಾಡಕ್ಕೆ ಇಳಿದೇ ಬಿಟ್ಲು ಭೂಮಿ! ಮಿಂಚು ಸುಳಿವು ಸಿಕ್ಕೇ ಬಿಡ್ತಾ?

ಮತ್ತೊಂದು ಕಡೆ ಗೌತಮ್‌ ದಿವಾನ್‌ ತಂಗಿ ಮಹಿಮಾಗೆ ಮತ್ತೆ ಗರ್ಭಪಾತ ಆಗಿದೆ. ಈ ಹಿಂದೆ ಅವಳೇ ಗರ್ಭಪಾತ ಮಾಡಿಸಿಕೊಂಡಿದ್ದಳು. ಈಗ ಅವಳು ಬಯಸಿದರೂ ಕೂಡ ತಾಯಿ ಆಗೋಕೆ ಆಗ್ತಿಲ್ಲ. ತಾಯಿ ಆಗೋಕೆ ಆಗ್ತಿಲ್ಲ ಅನ್ನೋ ವಿಚಾರದಿಂದ ಮಹಿಮಾ ಕುಗ್ಗಿ ಹೋಗಿದ್ದಾಳೆ.

ಎಲ್ಲವೂ ಜೈದೇವ್‌ ಪ್ಲ್ಯಾನ್‌

ಜೈದೇವ್‌ ಬಳಿ ಮಿಂಚು ಇದ್ದಾಳೆ. ಮಹಿಮಾ ಜೊತೆ ಇರಲು ಇಷ್ಟ ಪಡದ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಳು. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿತ್ತು. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದರು.



ನಾನು ಮಗು ಕೇಳಿಕೊಂಡು ಬರ್ತೇವೆ ಅಂತ ಮಗುವನ್ನು ಅಡಗಿಸಿ ಇಟ್ಟಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಇಷ್ಟು ವರ್ಷ ಯಾರೂ ಮಗಳನ್ನು ಹುಡುಕಿಕೊಂಡು ಬಂದಿಲ್ಲ. ನಮ್ಮ ಜೊತೆ ಬೆಳೆದಳು ಅಂತ ಗೌತಮ್‌ ಹೇಳಿದ್ದಾನೆ. ಆದರೆ ಕಾನೂನು ಪ್ರಕಾರ ತಪ್ಪಾಗಿದ್ದರಿಂದ ಮಗು ಸಿಗೋ ತನಕ ಗೌತಮ್‌ ಪೊಲೀಸ್‌ ಕಸ್ಟಡಿಗೆ ಇರಬೇಕಾಗಿದೆ.

ಜ್ಯೋತಿಷ್ಯರು ನುಡಿದಂತೆ ಮಗಳಿಂದ ಗೌತಮ್‌ಗೆ ಕಂಟಕ ಎದುರಾಗಿದೆ. ಗೌತಮ್‌ ಈಗ ಪೊಲೀಸರ ಬಳಿ ಇದ್ದು, ಮಗಳನ್ನು ಹೇಗೆ ರಕ್ಷಿಸಿಕೊಳ್ತಾನೆ? ಭೂಮಿಕಾ ಮುಂದೆ ಏನು ಮಾಡ್ತಾಳೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಅಖಾಡಕ್ಕೆ ಇಳಿದೇ ಬಿಟ್ಲು ಭೂಮಿ! ಮಿಂಚು ಸುಳಿವು ಸಿಕ್ಕೇ ಬಿಡ್ತಾ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author