ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhare Serial) ಮಲ್ಲಿ ನಿಶ್ಚಿತಾರ್ಥ ನೆರವೇರುತ್ತಿದೆ. ಪಾರ್ಥ, ಅಪ್ಪಿ ಜೊತೆಗೆ ಭೂಮಿಕಾ ತಂದೆ ತಾಯಿ ಕೂಡ ಬಂದಿದ್ದಾರೆ. ಲಕ್ಷ್ಮೀಕಾಂತ ಮಾವ ಈ ಮುಂಚೆ ಸುನಿ (Suni) ಮೇಲೆ ಕಣ್ಣಿಟ್ಟಿರು ಅಂತ ಪಾರ್ಥಗೆ ಎಚ್ಚರಿಕೆಯನ್ನೂ ನೀಡಿದ್ದ. ಆದtರೀಗ ಇದೇ ಸುನಿ, ಪಾರ್ಥನ ಮುಖಾಮುಖಿ ಆಗಲಿದ್ದಾನೆ. ಜೈದೇವ್ ಕುತಂತ್ರ ಗೌತಮ್ (Gowham) ಮುಂದೆ ರಿವೀಲ್ ಆಗತ್ತಾ? ಅಥವಾ ಸುನಿ ನಿಜವಾಗಲೂ ಪ್ರೀತಿ ಬಗ್ಗೆ ರಿವೀಲ್ ಮಾಡ್ತಾನಾ? ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮಲ್ಲಿ ಜೀವನ ಹಾಳಾಗುತ್ತಾ?
ಸುನಿಲ್ ಕೆಡಿ ಜೈದೇವ್ ಕಳುಹಿಸಿರುವ ವ್ಯಕ್ತಿ, ಅವನಿಂದ ಮಲ್ಲಿ ಜೀವನ ಹಾಳಾಗುತ್ತದೆ ಅನ್ನೋದೇ ಗೊತ್ತಿಲ್ಲದ ಭೂಮಿ, ಗೌತಮ್ ಸೇರಿ ಮಲ್ಲಿ ಮತ್ತು ಸುನಿಲ್ ನಿಶ್ಚಿತಾರ್ಥ ಮಾಡಲು ಹೊರಟಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಸಹ ನಿಶ್ಚಿತಾರ್ಥದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Rashmika Vijay Wedding: ಅದ್ಭುತ ವ್ಯಕ್ತಿ ಅತ್ತಿಗೆ; ವಿಜಯ್ ದೇವರಕೊಂಡ ಸಹೋದರನ ಸ್ಪೆಷಲ್ ಪೋಸ್ಟ್
ಸುನಿಲ್ ಮತ್ತು ಜೈ ದೇವ್ ಒಡನಾಟ ಕಂಡು, ಇಬ್ಬರು ಏನೋ ನಡೆಸುತ್ತಿದ್ದಾರೆ ಎಂದು ಈಗಾಗಲೇ ಚಂದ್ರಕಾಂತ್ ಪಾರ್ಥ ಮುಂದೆ ಹೇಳಿದ್ದರು.ನಿಶ್ಚಿತಾರ್ಥಕ್ಕೆ ಬಂದಿರುವ ಪಾರ್ಥ, ಹುಡುಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಸುನಿ ಈಗ ಪಾರ್ಥನ ಮುಂದೆ ಬಂದಿದ್ದಾನೆ. ಸುನಿ ಮುಖವಾದ ಕಳಚಿ ಬೀಳೋದು ಗ್ಯಾರಂಟಿ ಆದಂತಿದೆ.
ಗೌತಮ್ ಕೈಯಿಂದ ಮುಂದೊಂದು ದಿನ ಸುನಿಗೆ ಪೆಟ್ಟು ಬೀಳಬಹುದು. ರೋಲ್ ಮಾಡೆಲ್ ಅಂದುಕೊಂಡಿರುವ ಗೌತಮ್ ಗೆ ಮೋಸ ಮಾಡಲು ಸುನಿಲ್ ಗೆ ಮನಸು ಬಾರದೆ, ಆತನೇ ನಿಜ ಹೇಳಬಹುದು.
ಜೈದೇವ್‌ಗೆ ಶಕುಂತಲಾ ಭರ್ಜರಿ ಕ್ಲಾಸ್
ಮತ್ತೊಂದು ಕಡೆ ಜೈದೇವ್‌ಗೆ ಗೌತಮ್ ಪರ ಶಕುಂತಲಾ ಮಾತನಾಡಿ, ಮಗನಿಗೆ ಆವಾಜ್ ಹಾಕಿದ್ದಾಳೆ. ತಂದೆಯ ಕಾರ್ಯಕ್ಕೆ ಜೈದೇವ್ ಕೂಗಾಡಿರೋದರ ಬಗ್ಗೆ ಶಕುಂತಲಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಗೌತಮ್ ಕೊಟ್ಟ ಭಿಕ್ಷೆಯಲ್ಲಿ ನಾವಿರೋದು, ಅವನು ಮನಸ್ಸು ಮಾಡಿದ್ರೆ ಇಂಥ 100 ಸಾಮ್ರಾಜ್ಯ ಕಟ್ಟಬಹುದು ಅಂತ ಜೈದೇವ್‌ಗೆ ನೇರವಾಗಿ ಹೇಳಿದ್ದಾಳೆ.
ಇದಕ್ಕೂ ಮುಂಚೆ ಗೌತಮ್ ಹಾಗೂ ಶಕುಂತಲಾ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್ ಕುಟುಂಬ ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್ ಕೂಡ ಜೈದೇವ್ ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ. ಜೈದೇವ್ ಕೆನ್ನೆಗೆ ಬಾರಿಸಿದ್ದೂ ಆಗಿದೆ. ಅಲ್ಲಿಂದ ಮಧ್ಯದಲ್ಲೇ ಎದ್ದು ಹೋಗಿದ್ದಾನೆ ಜೈದೇವ್.
ಇದನ್ನೂ ಓದಿ: Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ; ಸುನಿಲ್ ಮುಖವಾಡ ಕಳಚಿಬಿದ್ರೆ?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ