ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare serial) ರೋಚಕ ಟ್ವೀಸ್ಟ್ ಪಡೆದುಕೊಂಡಿದೆ. ಮಧುರಾ ಮತ್ತು ಮಿಂಚುವನ್ನು ಕಿಡ್ನ್ಯಾಪ್ ಮಾಡಿದ್ದ ಜೈದೇವ, ಮಿಂಚುವನ್ನು ಕೊಲ್ಲಲು ಬಂದ ಕಾರಣದಿಂದ ಜೈದೇವ್, ಭೂಮಿಕಾಳ (Bhoomika) ಹೊಡೆತಕ್ಕೆ ಬಲಿಯಾಗಿದ್ದಾನೆ. ಜೈದೇವ್ ಸಾವಿನ ವಿಷಯವನ್ನು ಯಾರಿಗೂ ಹೇಳದೇ ಹೆಣವನ್ನು ಮುಚ್ಚಿದ್ದಾರೆ. ಜೊತೆಯಲ್ಲಿಯೇ ಪೊಲೀಸ್ ಅಧಿಕಾರಿ ಮಧುರಾ ಇದ್ರೂ ಕಾನೂನು ಬ್ರೇಕ್ ಮಾಡಿದ್ದಾರೆ.
ಹನಿಟ್ರ್ಯಾಪ್ ಫೇಲ್
ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ (Bhoomika) ಹೂಡಿದ ಹನಿಟ್ರ್ಯಾಪ್ ಫೇಲ್ ಆಗಿತ್ತು. ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದರು. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಜೀವಾ ಕೂಡ ಇದಕ್ಕೆ ಸಾಥ್ ಕೂಡ ಕೊಟ್ಟಿದ್ದ. ಮಧುರಾ, ಜೈದೇವ್ ಬಲೆಗೆ ಬಿದ್ದಳು. ಜೀವಾ ಮತ್ತು ಭೂಮಿಕಾಗೆ ಕಾಲ್ ಮಾಡಿ, ತನ್ನನ್ನು ಹಿಡಿಯಲು ಬಂದಿರೋ ಮಧುರಾಳನ್ನು ಕಟ್ಟಿ ಹಾಕಿದ್ದ.
ಇದನ್ನೂ ಓದಿ: Shine Shetty: ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್
ಮಧುರಾ ಸಂಗ್ರಹಿಸಿದ್ದ ಎಲ್ಲಾ ಆಡಿಯೋ ರೆಕಾರ್ಡ್ ತನಗೆ ನೀಡುವಂತೆ ವಾರ್ನ್ ಮಾಡಿದ್ದನು. ಜೈದೇವ್ ಮಾತು ಕೇಳುತ್ತಿದ್ದಂತೆ ಆತಂಕಕ್ಕೊಳಗಾದ ಭೂಮಿಕಾ,ಜೈದೇವ್ ಬಳಿಗೆ ಓಡಿ ಬಂದು ದಾಖಲೆಗಳನ್ನು ನೀಡಿ ಮಧುರಾಳನ್ನು ಕಾಪಾಡಿದ್ದರು.
ಜೈದೇವ್ ತಮ್ಮನ್ನು ಹೋಗಲು ಬಿಟ್ಟಿದ್ದು ಹೇಗೆ ಎಂಬ ಅನುಮಾನ ಭೂಮಿಕಾಗೆ ಬಂದಿತ್ತು. ಕೂಡಲೇ ಹಿಂದೆಯಿಂದ ಬಂದ ಜೈದೇವ್, ಕಾರ್ ಡಿಕ್ಕಿ ಓಪನ್ ಮಾಡುತ್ತಾನೆ. ಕಾರ್ ಡಿಕ್ಕಿಯಲ್ಲಿ ಭೂಮಿಕಾಳ ಮಗಳನ್ನ ಕಟ್ಟಿ ಹಾಕಿದ್ದ.
ಮಿಂಚುಳನ್ನು ತೋರಿಸಿ, ನಿಮ್ಮ ಬಳಿಯಲ್ಲಿರೋ ಒರಿಜಿನಲ್ ರೆಕಾರ್ಡ್ ಕಾಪಿ ತಂದುಕೊಡುವಂತೆ ಎಚ್ಚರಿಸಿದ್ದ. ಈ ವೇಳೆ ಜೈದೇವ್ ಗನ್ ಹಿಡಿದು ಶೂಟ್ ಮಾಡುವಾಗ ಹಿಂದಿನಿಂದ ಬಂದು ಭೂಮಿಕಾ ಕಟ್ಟಿಗೆಯಿಂದ ಹಲ್ಲೆ ನಡೆಸುತ್ತಾಳೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಜೈದೇವ್ ಸಾಯುತ್ತಾನೆ.
ಈಗ ಜೈದೇವ್ ಸಾವಿನ ವಿಷಯವನ್ನು ಯಾರಿಗೂ ಹೇಳದೇ ಹೆಣವನ್ನು ಮುಚ್ಚಿದ್ದಾರೆ. ಜೈದೇವ್ ಕಾಲ್‌ಗೆ ಸಿಗುತ್ತಿಲ್ಲ ಎಂದು ಶಕುಂತಲಾ ಗಾಬರಿ ಆಗಿದ್ದಾಳೆ. ಭೂಮಿಕಾ ಜೈಲುಪಾಲಾಗ್ತಾಳಾ? ಜೀವ ಹೋಗ್ತಾನಾ? ಮಲ್ಲಿ ಮುಂದಿನ ನಡೆಯೇನು? ಶಕುಂತಲಾಗೂ ಭೂಮಿ-ಮಲ್ಲಿ ರೆಕಾರ್ಡ್ ಮಾಡಿರೋ ವಿಚಾರ ಗೊತ್ತಾಗಿದೆ. . ಶಕುಂತಲಾ ಈ ವಿಚಾರ ಮಗನಲ್ಲಿ ಪ್ರಸ್ತಾಪಿಸುತ್ತಿದ್ದಾಗ, ಇನ್ನು ನನ್ನ ತಂಟೆಗೆ ಬರಬಾರದು ಹಾಗೇ ಮಾಡ್ತೀನಿ ಅಂತ ಜೈದೇವ್ ಪಣ ತೊಟ್ಟಿದ್ದ. ಹೀಗಾಗಿ ಜೀವಾ, ಭೂಮಿಗೆ ಶಕುಂತಲಾಳಿಂದ ಎದುರಾಗೋ ತೊಂದರೆ ಏನು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಜೈದೇವ್ ಪಾತ್ರಧಾರಿ ರಾಣವ್ ಗೌಡ ಮದುವೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ರಾಧಾ ಭಗವತಿ ಅವರ ಜೊತೆ ಫಿಕ್ಸ್ ಆಗಿದೆ. ಇನ್ನೊಂದೆಡೆ, ಬಿಗ್ಬಾಸ್ ಸೀಸನ್ 13 ಆರಂಭ ಆಗುತ್ತಿದೆ. ಹೀಗಾಗಿ ಜೈದೇವ್ ಪಾತ್ರ ಅಂತ್ಯ ಆಯ್ತಾ ಅನ್ನೋದು ವೀಕ್ಷರಲ್ಲಿದೆ ಕುತೂಹಲ.
ಇದನ್ನೂ ಓದಿ: Amruthadhaare serial: ಭೂಮಿ - ಮಲ್ಲಿ ಮಾಡಿರೋ ಪ್ಲ್ಯಾನ್ ಶಕುಂತಲಾಗೆ ಗೊತ್ತಾಗೇ ಹೋಯ್ತು!
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.