ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarkonda) ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಅವರು ಈಗ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ. ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಅವರು, ರಶ್ಮಿಕಾ ಅವರನ್ನು ತಮ್ಮ 'ವದಿನಾ' (ತೆಲುಗು ಪದ) ಅತ್ತಿಗೆ ಎಂದು ಸ್ವಾಗತಿಸುವ ಮೂಲಕ ಹೃತ್ಪೂರ್ವಕ ಪೋಸ್ಟ್ ಮಾಡಿದ್ದಾರೆ, ಜೊತೆಗೆ ನವವಿವಾಹಿತ ಜೋಡಿ ಜೊತೆ ಇರೋ ಮುದ್ದಾದ ಫೋಟೋವನ್ನು (Photo) ಶೇರ್ ಮಾಡಿಕೊಂಡಿದ್ದಾರೆ.
ಪೋಷಕರ ಜೊತೆಗೂ ರಶ್ಮಿಕಾ ಮೊದಲಿನಿಂದಲೂ ಆತ್ಮೀಯ ಒಡನಾಟ
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆನಂದ್ ಮಾತ್ರವಲ್ಲ ಅವರ ಪೋಷಕರ ಜೊತೆಗೂ ರಶ್ಮಿಕಾ ಮೊದಲಿನಿಂದಲೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ "ನಾನು ನಿಮ್ಮ ಫ್ಯಾಮಿಲಿ ಕಣೋ" ಎಂದು ಆನಂದ್‌ಗೆ ಹೇಳಿದ್ದರು.
ರಶ್ಮಿಕಾಗೆ ವಿಜಯ್ ಸಹೋದರ ಹೃದಯಪೂರ್ವಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ವಿಜಯ್ ಸಹೋದರ ಪೋಸ್ಟ್
ಮದುವೆ ಅಧಿಕೃತವಾಗುವ ಮೊದಲೇ ಅಭಿಮಾನಿಗಳು "ಅತ್ತಿಗೆ, ಹೇಗಿದ್ದೀರಾ?" ಎಂದು ಕೂಗುತ್ತಿದ್ದ ಹಲವು ಸಂದರ್ಭಗಳಿದ್ದವು. ಆಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ" ಎಂದು ಅವರು ಬರೆದಿದ್ದಾರೆ.
"ಇಂದು ನನ್ನ ಸಹೋದರ ಮದುವೆ ಆಗಿದ್ದಾನೆ, ನಾನು ನನ್ನ ಅತ್ತಿಗೆಯಂತಹ ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಪಡೆದುಕೊಂಡಿದ್ದೇನೆ. ಅವರ ಜೀವನದುದ್ದಕ್ಕೂ, ಅವರು ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಇಬ್ಬರೂ ಒಟ್ಟಿಗೆ ಜೀವಮಾನವಿಡೀ" ಎಂದು ಆನಂದ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಶ್ಮಿಕಾ, ವಿಜಯ್ ಪೋಸ್ಟ್ ಮಾತ್ರವಲ್ಲ ಆನಂದ್ ಪೋಸ್ಟ್‌ಗೆ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಲಕ್ಷ ಲಕ್ಷ ಲೈಕ್ಸ್ ಗಳಿಸುತ್ತಿದೆ.
ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆದ ಈ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೈದರಾಬಾದ್ ಮತ್ತು ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜಿಸಲಾಗುತ್ತದೆ ಎನ್ನಲಾಗಿದೆ. ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆರತಕ್ಷತೆ ಆಹ್ವಾನಿಸುವ ಸಾಧ್ಯತೆ ಇದೆ.
ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ಮಾರ್ಚ್ 4ರಂದು ನಡೆದರೆ ವಿರಾಜಪೇಟೆಯಲ್ಲಿ ಯಾವ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಒಂದೇ ದಿನ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು ವಿಶೇಷ.
ಇದನ್ನೂ ಓದಿ: ನಿಜವಾದ ಪ್ರೀತಿ ತೋರಿಸಿಕೊಟ್ಟ ವ್ಯಕ್ತಿ ವಿಜಯ್; ಮದುವೆಯ ಫೋಟೊ ಹಂಚಿಕೊಂಡು ರಶ್ಮಿಕಾ ಭಾವುಕ
ಈ ಅದ್ಧೂರಿ ಮದುವೆಗಾಗಿ ಕೆಲವು ದಿನಗಳ ಹಿಂದೆಯೇ ಎರಡೂ ಕುಟುಂಬಸ್ಥರು ಉದಯಪುರಕ್ಕೆ ಆಗಿಮಿಸಿವೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತರು ಪರಸ್ಪರ ಗೇಮ್ಗಳನ್ನು ಆಡಿದ್ದಾರೆ. ಅದ್ಧೂರಿಯಾಗಿ ನಡೆದ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.