ಆಂಕರ್ ಅನುಶ್ರೀ (Anchor Anushree) ಅವರನ್ನ ಕನ್ನಡಿಗರ ಮನೆಮಗಳು ಅಂತಾ ಕೂಡ ಕರೆಯುವುದುಂಟು. ಕಿರುತೆರೆ ಲೋಕದ ಸೂಪರ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ಆಂಕರ್ ಅನುಶ್ರೀ (Anchor Anushree) ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೆಲಸದ ಜೊತೆಗೆ ಆಂಕರ್ ಅನುಶ್ರೀ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಕಮೆಂಟ್ ಹಾಕಿ ಸರಿಯಾಗಿ ಉತ್ತರ ಪಡೆದ ವಿರೋಧಿಗಳು ಕೂಡ ಇದ್ದಾರೆ.
ಈಗ ಸಂದರ್ಶನ ಒಂದರಲ್ಲಿ ಅವರು ನೇರ ಮಾತುಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅಶ್ಲೀಲ ಕಮೆಂಟ್‌ಗಳ ಬಗ್ಗೆ ನೇರವಾಗಿಯೇ ಧ್ವನಿ ಎತ್ತಿದ್ದಾರೆ. ಸಂದರ್ಶನದಲ್ಲಿ ಡಗಾರ್ ಎಂಬ ಪದ ಚರ್ಚೆಗೆ ಬಂದಿದೆ. ಈ ಪದ ಹೇಳಲು ಮಯೂರ್ ಅವರು ಮುಜುಗರ ಮಾಡಿಕೊಂಡಿದರು. ಆಗ ಮಾತನಾಡಿದ ಅನುಶ್ರೀ, ‘ನೋಡಿ ನಿಮಗೆ ಅದನ್ನು ಹೇಳಲೇ ಅಷ್ಟು ಮುಜುಗರ ಆಗುತ್ತಿದೆ ಎಂದರೆ ನಮಗೆ ಹಾಗೆ ಕರೆದಾಗ ಹೇಗನಿಸಬೇಡಿ’ ಎಂದು ಅನುಶ್ರೀ ಕೇಳಿದರು.
ಇದನ್ನೂ ಓದಿ: Ramayana Teaser: ರಣಬೀರ್ ಮುಖದಲ್ಲಿ ಮುಗ್ಧತೆ ಇಲ್ಲ ಎಂದ 'ರಾಮಾಯಣ' ನಟ
ಅನುಶ್ರೀ ಅವರು ಅತ್ಯಂತ ಬೇಸರದಲ್ಲಿ ಈ ಮಾತನ್ನು ಹೇಳಿದ್ದಾರೆ. ಸಾರ್ವಜನಿಕ ಖಾತೆಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇಂತಹ ಕಮೆಂಟ್‌ಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಹೆಣ್ಣುಮಕ್ಕಳಿಗೆ ಎಷ್ಟು ನೋವುಂಟು ಮಾಡುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇಷ್ಟು ದಿನಗಳ ಕಾಲ ಖುದ್ದು ಆಂಕರ್ ಅನುಶ್ರೀ ಅವರ ಅಭಿಮಾನಿಗಳೇ ಇದಕ್ಕೆಲ್ಲಾ ತಕ್ಕ ಉತ್ತರವನ್ನು ನೀಡುತ್ತಿದ್ದರು. ಆದರೆ ಈಗ ನೇರವಾಗಿ ಅನುಶ್ರೀ ಅವರೇ ಅಖಾಡ ಪ್ರವೇಶ ಮಾಡಿ ಉತ್ತರಗಳನ್ನು ನೀಡುತ್ತಿದ್ದಾರೆ.
ಅನುಶ್ರೀ ನಿರೂಪಕಿ ಆಗಿಯೇ ಗುರುತಿಸಿಕೊಂಡಿದ್ದಾರೆ. ಆದರೆ, ನಟನೆಯ ಆಸಕ್ತಿ ಇದ್ದ ಕಾರಣ, ಸಿನಿಮಾ ಕೂಡ ಮಾಡಿದ್ದಾರೆ. ಬೆಂಕಿಪಟ್ನ ಚಿತ್ರದಲ್ಲಿ ಹೀರೊಯಿನ್ ಆಗಿಯೂ ಗಮನ ಸೆಳೆದಿದ್ದರು. ಕಮಲ್ ಹಾಸನ್ ಅಭಿನಯದ ಉತ್ತಮ್ ವಿಲನ್ ಚಿತ್ರದಲ್ಲೂ ಅನುಶ್ರೀ ಗೆಸ್ಟ್ ರೋಲ್ ಮಾಡಿದ್ದಾರೆ.ಮಾದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಚಿತ್ರದಲ್ಲೂ ಅನುಶ್ರೀ ಗೆಸ್ಟ್ ರೋಲ್ ಮಾಡಿದ್ದಾರೆ.
ಆದರೆ, ಈ ಎಲ್ಲ ಚಿತ್ರಗಳ ಮುಂಚೆ 2011 ರಲ್ಲಿಯೇ ನಟನೆ ಶುರು ಮಾಡಿದ್ದರು. ಭೂಮಿತಾಯಿ, ಮುರಳಿ ಮೀಟ್ಸ್ ಮೀರಾ, ಬೆಳ್ಳಿ ಕಿರಣ, ಟ್ಯೂಬ್‌ಲೈಟ್ ಚಿತ್ರದಲ್ಲೂ ಅನುಶ್ರೀ ಅಭಿನಯಿಸಿದ್ದಾರೆ ಅನುಶ್ರೀ ಸಾಧನೆಯ ಹಾದಿ ಸ್ಪೂರ್ತಿದಾಯಕವೇ ಆಗಿದೆ.
ಇದನ್ನೂ ಓದಿ: Amruthadhaare Serial: ಸುನಿ ಕಥೆ ಮುಗಿಸಲು ಸಂಚು ಹೂಡಿದ ಜೈದೇವ್! ಆನಂದ್ ಶಾಕ್
ಆ್ಯಂಕರ್ ಆಗ್ಬೇಕು ಅಂತ ಬರೋರಿಗೆ ಅನುಶ್ರೀ ದಿ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. ಇವರ ಸಾಧನೆಯ ಹಾದಿಯಲ್ಲಿ ಸದಾ ಸ್ಪೂರ್ತಿ ನೀಡುವ ಒಬ್ವ ವ್ಯಕ್ತಿ ಕೂಡ ಇದ್ದಾರೆ.