ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anchor Anushree: ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್‌, ಉದ್ಯಮಿ ಜೊತೆ ಹಸೆಮಣೆ ಏರಲಿರುವ ನಿರೂಪಕಿ

Anchor Anushree: ಮಂಗಳೂರು ಮೂಲದ ಅನುಶ್ರೀ ಅವರ ಭಾವಿ ವರ ಯಾರು ಎಂಬ ಬಗ್ಗೆ ಹೆಚ್ಚಿನ ವಿವರಗಳು ಇದೀಗ ದೊರೆಯಲಿವೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದೆ ಎನ್ನಲಾಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್‌, ಉದ್ಯಮಿ ಜೊತೆ ಹಸೆಮಣೆ ಏರಲಿರುವ ನಿರೂಪಕಿ

ಆಂಕರ್‌ ಅನುಶ್ರೀ

ಹರೀಶ್‌ ಕೇರ ಹರೀಶ್‌ ಕೇರ Jul 17, 2025 1:56 PM

ಬೆಂಗಳೂರು: ಆ್ಯಂಕರ್ ಅನುಶ್ರೀ ಅವರ ಕಂಕಣಭಾಗ್ಯದ (Marriage) ಬಗ್ಗೆ ಕಳೆದೆರಡು ವರ್ಷಗಳಿಂದಲೂ ಊಹಪೋಹಗಳು ಹರಿದಾಡುತ್ತಿದ್ದವು. ಇದೀಗ ಅವುಗಳಿಗೆಲ್ಲ ತೆರೆ ಬೀಳುತ್ತಿದೆ. ಇದೇ ಆಗಸ್ಟ್ ತಿಂಗಳಲ್ಲಿ ಅನುಶ್ರೀ (Anchor Anushree) ಅವರ ವಿವಾಹ ಅವರ ಕುಟುಂಬದವರೇ ನೋಡಿ ಫಿಕ್ಸ್‌ ಮಾಡಿದ ಯುವ ಉದ್ಯಮಿ ಜೊತೆಗೆ ನಡೆಯಲಿದೆ ಎಂದು ಗೊತ್ತಾಗಿದೆ.

ಅನುಶ್ರೀ ಅವರು ಆ್ಯಂಕರ್ ಆಗಿ, ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಅವರು ಖ್ಯಾತಿ ಗಳಿಸಿದ್ದಾರೆ. ಮಂಗಳೂರು ಮೂಲದ ಅನುಶ್ರೀ ಅವರ ಭಾವಿ ವರ ಯಾರು ಎಂಬ ಬಗ್ಗೆ ಹೆಚ್ಚಿನ ವಿವರಗಳು ಇದೀಗ ದೊರೆಯಲಿವೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದೆ ಎನ್ನಲಾಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

ತಮ್ಮ ಫ್ಯಾಮಿಲಿ ನೋಡಿದ ಹುಡುಗನನ್ನೇ ಅನುಶ್ರೀ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನಿರೂಪಕಿ ಅನುಶ್ರೀ ವಿವಾಹ ನಡೆಯಲಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಅನುಶ್ರೀ ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಾಕಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮಾಹಿತಿ ಪ್ರಕಟಿಸಬಹುದು. ಅನುಶ್ರೀ ವಿವಾಹದ ಕುರಿತು ಈ ಮೊದಲು ಸಾಕಷ್ಟು ವರದಿಗಳು ಹರಿದಾಡಿದ್ದವು. ಆದರೆ ಅವು ನಿಜವಾಗಿರಲಿಲ್ಲ.

ಇದನ್ನೂ ಓದಿ: Anushree: ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ