ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushree: ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ

2025 ರಲ್ಲಿ ಮದುವೆಯಾಗುತ್ತೇನೆ ಎಂದು ಅನುಶ್ರೀ ಹೇಳಿದ್ದಾರೆ. ಇದರ ಮಧ್ಯೆ ಅನುಶ್ರೀ ದುಬಾರಿ ಕಾರೊಂದನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು, ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ.

ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ

Anushree New Car

Profile Vinay Bhat Jun 16, 2025 3:05 PM

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anushree) ಇಂದು ಬಹಳ ಬ್ಯುಸಿ ಆಗಿರುವ ಹಾಗೂ ಬಹು ಬೇಡಿಕೆಯ ನಿರೂಪಕಿ ಸಹ ಹೌದು. ಹಲವು ಸಿನಿಮಾ ನಟಿಯರಿಗಿಂತಲೂ ಹೆಚ್ಚಿನ ಗಳಿಕೆಯನ್ನು ಅನುಶ್ರೀ ಮಾಡುತ್ತಿದ್ದಾರೆ. ವೇದಿಕೆ ಕಾರ್ಯಕ್ರಮ ಅಂತ ಒಂದಲ್ಲ ಒಂದು ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅನುಶ್ರೀ ಸಖತ್‌ ಬ್ಯುಸಿಯಾಗಿರುತ್ತಾರೆ. ಝೀ ಕನ್ನಡದ ಯಾವುದೇ ಶೋಗಳಿಗೆ ಇವರೇ ಆಂಕರ್. ಇವರ ಮದುವೆ ಬಗ್ಗೆ ಕೂಡ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಚರ್ಚೆಯಾಗುತ್ತಲೇ ಇದೆ. 2025 ರಲ್ಲಿ ಮದುವೆಯಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಇದರ ಮಧ್ಯೆ ಅನುಶ್ರೀ ದುಬಾರಿ ಕಾರೊಂದನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಹೌದು, ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿಗಳು. ಕಾರಿನ ಟಾಪ್ ಎಂಡ್ ಮಾಡೆಲ್ಲಿನ ಬೆಲೆ 40 ಲಕ್ಷ ರೂಪಾಯಿಗಳು. ಅನುಶ್ರೀ ಯಾವ ಮಾಡೆಲ್ ಅನ್ನು ಖರೀದಿ ಮಾಡಿದ್ದಾರೆ ಎಂಬುದು ಖಾತ್ರಿ ಇಲ್ಲ. ಆದರೆ ಈ ಕಾರಿನ ಮಿಡಲ್ ವೇರಿಯೆಂಟ್ ಹೆಚ್ಚು ಪ್ರಚಲಿತದಲ್ಲಿದೆ. ಹಾಗಾಗಿ ಅನುಶ್ರೀ ಸಹ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಬೆಲೆ ನೀಡಿ ಮಿಡಲ್ ವೇರಿಯೆಂಟ್ ಅನ್ನೇ ಖರೀದಿ ಮಾಡಿರುವ ಸಾಧ್ಯತೆ ಇದೆ.

Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್ ಕ್ಯಾನ್ಸಲ್?: ಸಕ್ಸಸ್ ಆಯ್ತು ಆದೀ-ಕನ್ನಿಕಾ ಪ್ಲ್ಯಾನ್?

ಒಂದು ಲೀಟರ್‌ ಪೆಟ್ರೋಲ್‌ಗೆ 23.24 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ ಈ ಕಾರು. ಈ ದುಬಾರಿ ಬೆಲೆಯ ಕಾರನ್ನು ನಿರೂಪಕಿ ಅನುಶ್ರೀ ಈಗ ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತು ಅನುಶ್ರೀ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸೋರಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅನುಶ್ರೀ ಖರೀದಿ ಮಾಡಿರುವ ಕಾರಿನಲ್ಲಿ ಏಳು ಎಂಟು ಜನ ಆರಾಮವಾಗಿ ಕೂತು ಪ್ರಯಾಣ ಮಾಡಬಹುದಾಗಿದೆ. ಈ ಕಾರು ಕಂಪರ್ಟ್ ಜೊತೆಗೆ ಸಖತ್ ಪವರ್ ಅನ್ನು ಸಹ ಹೊಂದಿದೆ.

ಟೊಯೋಟಾ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌ ಸನ್​ರೂಫ್ ಅನ್ನು ಸಹ ಹೊಂದಿದೆ. ಇದು 2.0 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. 185 ಪಿಎಸ್‌ ಪವರ್‌ ಹಾಗೂ 188 ಎನ್‌ಎಂ, 206 ಎನ್‌ಎಂ ಟಾರ್ಕ್‌ ಸಾಮರ್ಥ್ಯ ಹೊಂದಿದೆ. ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಟೋಯೋಟಾ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌ ಕಾರನ್ನು ಅನುಶ್ರೀ ಖರೀದಿಸಿ ಸಂಚಲನ ಮೂಡಿಸಿದ್ದಾರೆ.