ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಅವರ ವಿವಾಹದ ಕುರಿತ ವದಂತಿಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದರ ನಡುವೆಯೇ, ಗ್ರೀಸ್‌ನ ಸುಂದರ ತಾಣವೊಂದರಲ್ಲಿ ಅನಿರುದ್ಧ್ ಅವರು ಕಾವ್ಯ ಮಾರನ್ ಅವರಿಗೆ ವಜ್ರದ ಉಂಗುರದೊಂದಿಗೆ ಪ್ರಪೋಸ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್
ವೈರಲ್ ಆಗಿರುವ ಈ ವಿಡಿಯೋ ತುಣುಕಿನಲ್ಲಿ, ಅನಿರುದ್ಧ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾವ್ಯ ಮಾರನ್ ಅವರನ್ನು ಹೋಲುವ ಮಹಿಳೆಯ ಕೈಹಿಡಿದು ಸುಂದರ ಪ್ರಕೃತಿಯ ನಡುವೆ ಸಾಗುವುದು ಕಾಣಿಸುತ್ತದೆ. ಬಳಿಕ ಆಕೆಯ ಕೈಹಿಡಿದು ಸುತ್ತುತಿರುಗಿಸಿ, ಅತ್ಯಂತ ಪ್ರೀತಿಯಿಂದ ವಜ್ರದ ಉಂಗುರವನ್ನು ತೋರಿಸಿ ಆಕೆಯ ಬೆರಳಿಗೆ ತೊಡಿಸುವ ಆತ್ಮೀಯ ದೃಶ್ಯಗಳು ಅದರಲ್ಲಿವೆ.
ಇದಲ್ಲದೆ, ಮತ್ತೊಂದು ಪ್ರತ್ಯೇಕ ವಿಡಿಯೋದಲ್ಲಿ ಇಬ್ಬರೂ ಮದುವೆಯ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದು, ಅನಿರುದ್ಧ್ ಕಪ್ಪು ಟುಕ್ಸೆಡೋ ಹಾಗೂ ಕಾವ್ಯ ಕೆಂಪು-ಚಿನ್ನದ ಬಣ್ಣದ ಭವ್ಯ ಲೆಹೆಂಗಾ ಧರಿಸಿ ಸಮುದ್ರ ತೀರದಲ್ಲಿ ಕೈ ಕೈ ಹಿಡಿದು ನಿಂತಿರುವಂತೆ ತೋರಿಸಲಾಗಿದೆ. ಈ ದೃಶ್ಯಗಳನ್ನು ಕಂಡು ಹಲವು ಅಭಿಮಾನಿಗಳು ಹಾಗೂ ಫ್ಯಾನ್ ಪೇಜ್‌ಗಳು ಇದು ಅವರ ಮದುವೆಯ ಅಧಿಕೃತ ಕ್ಷಣಗಳಿರಬಹುದು ಎಂದು ನಂಬಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋ ಇದೆ!
ಇದು ನಕಲಿ ವಿಡಿಯೋ!
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಎಲ್ಲಾ ವಿಡಿಯೋಗಳೂ ಸಂಪೂರ್ಣ ನಕಲಿ ಎಂಬುದು ಸ್ಪಷ್ಟವಾಗಿದೆ. ಇವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ‘ಡೀಪ್‌ಫೇಕ್’ ದೃಶ್ಯಗಳಾಗಿವೆ. ಸ್ವತಃ ಅನಿರುದ್ಧ್ ಅವರ ಅಧಿಕೃತ ಫ್ಯಾನ್ ಪೇಜ್‌ಗಳೇ ಈ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ. ಅಲ್ಲದೆ, ಅನಿರುದ್ಧ್ ಅಥವಾ ಕಾವ್ಯ ಮಾರನ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಂತಹ ಯಾವುದೇ ವಿಡಿಯೋಗಳನ್ನು ಹಂಚಿಕೊಂಡಿಲ್ಲ ಮತ್ತು ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವನ್ನೂ ನೀಡಿಲ್ಲ.
Anirudh Ravichander: ಅನಿರುದ್ಧ್-ಕಾವ್ಯಾ ಮಾರನ್ ವಿವಾಹ; ಚೆನ್ನೈನಲ್ಲಿ ಅದ್ಧೂರಿ ಸಮಾರಂಭ!
ಗ್ರೀಸ್‌ಗೆ ಹೋಗಿರುವ ತಲೈವಾ
ಇನ್ನೊಂದೆಡೆ, ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ಇವರಿಬ್ಬರ ವಿವಾಹವು ಕುಟುಂಬದ ಅತ್ಯಂತ ಆಪ್ತಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾದರಿಯಲ್ಲಿ ಖಾಸಗಿಯಾಗಿ ನೆರವೇರಲಿದೆ ಎಂಬ ವರದಿಗಳ ನಡುವೆಯೇ ಈ ಎಐ ವಿಡಿಯೋಗಳು ಸದ್ದು ಮಾಡಿವೆ. ಈ ಸಮಾರಂಭದಲ್ಲಿ ಭಾಗವಹಿಸಲು ತಮಿಳುನಾಡಿನ ಪ್ರಮುಖ ಗಣ್ಯರಾದ ಸೂಪರ್‌ಸ್ಟಾರ್ ರಜನಿಕಾಂತ್, ಐಶ್ವರ್ಯಾ ರಜನಿಕಾಂತ್ ಹಾಗೂ ರಾಜಕೀಯ ಮುಖಂಡರು ಈಗಾಗಲೇ ತೆರಳಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಅಲ್ಲದೆ, ನವೆಂಬರ್ 21 ರಂದು ಚೆನ್ನೈನ ಐಟಿಸಿ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ ಎಂದೂ ಹೇಳಲಾಗುತ್ತಿದೆ.
36 ವರ್ಷದ ಅನಿರುದ್ಧ್ ರವಿಚಂದರ್ ಭಾರತೀಯ ಚಿತ್ರರಂಗದ ಟಾಪ್ ಸಂಗೀತ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದರೆ, 34 ವರ್ಷದ ಕಾವ್ಯ ಮಾರನ್ ಅವರು ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಹಾಗೂ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.