ಸ್ಟಾರ್ ಸಂಗೀತ ನಿರ್ದೇಶಕ, ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಲೇ ಇದೆ. ಐಪಿಎಲ್ ಫ್ರಾಂಚೈಸಿ ‘ಸನ್‌ರೈಸರ್ಸ್ ಹೈದರಾಬಾದ್’ ಸಿಇಒ ಹಾಗೂ ಸನ್ ನೆಟ್‌ವರ್ಕ್ ಉತ್ತರಾಧಿಕಾರಿ ಕಾವ್ಯಾ ಮಾರನ್ ಅವರೊಂದಿಗೆ ಅನಿರುದ್ಧ್ ವಿವಾಹವಾಗಲಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿವೆ. ಮುಂಬರುವ ನವೆಂಬರ್ ತಿಂಗಳ 2ನೇ ವಾರದಲ್ಲಿ ಇವರಿಬ್ಬರ ವಿವಾಹ ಜರುಗಲಿದೆ ಎಂಬ ವದಂತಿಗಳು ತೀವ್ರ ಕುತೂಹಲ ಕೆರಳಿಸಿವೆ.
ವೈ. ಜಿ. ಮಹೇಂದ್ರನ್ ಕಾಮೆಂಟ್‌ನಿಂದ ಹೆಚ್ಚಿದ ಚರ್ಚೆ
ಅನಿರುದ್ಧ್ ಮತ್ತು ಕಾವ್ಯಾ ಮಾರನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಈ ಹಿಂದೆಯೂ ಕೇಳಿಬಂದಿದ್ದವು. ಆದರೆ, ಅನಿರುದ್ಧ್ ಅವರ ಆಪ್ತ ಸಂಬಂಧಿ, ಹಿರಿಯ ನಟ ವೈ. ಜಿ. ಮಹೇಂದ್ರನ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಗಳು ಈ ಮದುವೆ ಸುದ್ದಿಗೆ ಮತ್ತಷ್ಟು ಬಲ ತಂದಿವೆ. ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆಯೊಂದಿಗೆ ಈ ಅದ್ಧೂರಿ ಮದುವೆ ಬಹುತೇಕ ಖಚಿತವಾಗಿದೆ ಎಂದು ಅವರು ತಿಳಿಸಿದ್ದು, ಅನಿರುದ್ಧ್-ಕಾವ್ಯಾ ಜೋಡಿ ಅದ್ಭುತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾಮೆಂಟ್‌ಗಳ ಬಳಿಕ ಅಭಿಮಾನಿಗಳು ಈ ಸುದ್ದಿಯನ್ನು ನಂಬಲು ಪ್ರಾರಂಭಿಸಿದ್ದಾರೆ.
Anirudh Ravichander : ಸಂಗೀತ ನಿರ್ದೇಶಕ ಅನಿರುದ್ದ್ ಜೊತೆಗೆ ಕಾವ್ಯಾ ಮಾರನ್ ಡೇಟಿಂಗ್? ವಿಡಿಯೊ ವೈರಲ್
‘ಜೈಲರ್ 2’ ಬಿಡುಗಡೆಯ ಬೆನ್ನಲ್ಲೇ ಮದುವೆ?
ಸನ್ ಪಿಕ್ಚರ್ಸ್ ನಿರ್ಮಿಸಿದ ‘ಬೀಸ್ಟ್’ ಮತ್ತು ‘ಜೈಲರ್’ ನಂತಹ ಭಾರಿ ಬಜೆಟ್ ಚಿತ್ರಗಳಿಗೆ ಅನಿರುದ್ಧ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗಳ ಚಿತ್ರೀಕರಣ ಹಾಗೂ ಪ್ರಮೋಷನ್ ಸಮಯದಲ್ಲಿ ಅನಿರುದ್ಧ್ ಮತ್ತು ಕಾವ್ಯಾ ನಡುವೆ ಉಂಟಾದ ಪರಿಚಯವೇ ಪ್ರೇಮಕ್ಕೆ ತಿರುಗಿದೆ ಎಂದು ಚಿತ್ರರಂಗದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.
ಇತ್ತೀಚಿನ ಗಾಸಿಪ್‌ಗಳ ಪ್ರಕಾರ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15 ರಂದು ಬಿಡುಗಡೆಯಾಗಲಿದ್ದು, ಈ ಸಿನಿಮಾದ ರಿಲೀಸ್ ಕಾರ್ಯಕ್ರಮಗಳು ಮುಗಿದ ತಕ್ಷಣ, ಅಂದರೆ ನವೆಂಬರ್ ಎರಡನೇ ವಾರದಲ್ಲಿ ಅನಿ - ಕಾವ್ಯಾ ಜೋಡಿ ಮದುವೆ ಮಂಟಪ ಏರಲು ಮುಹೂರ್ತ ನಿಗದಿಯಾಗಿದೆ ಎಂದು ಚರ್ಚಿಸಲಾಗುತ್ತಿದೆ. ಅಲ್ಲದೆ, ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿವೆಯಂತೆ.
ಅನಿರುದ್ಧ್ - ಕಾವ್ಯಾ ಮದುವೆ ಕುರಿತ ಟ್ವೀಟ್
ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳು
ವೈ.ಜಿ. ಮಹೇಂದ್ರನ್ ಅವರ ಮಾತುಗಳಿಂದ ಮದುವೆ ವಿಚಾರ ಬಹುತೇಕ ಖಚಿತ ಎಂಬಂತೆ ಪ್ರಚಾರ ನಡೆಯುತ್ತಿದ್ದರೂ, ಇತ್ತ ಮಾರನ್ ಕುಟುಂಬವಾಗಲಿ ಅಥವಾ ಅತ್ತ ಅನಿರುದ್ಧ್ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆ ಇಂತಹ ಮದುವೆಯ ವದಂತಿಗಳು ಬಂದಾಗ ಅನಿರುದ್ಧ್ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ನಿರಾಕರಿಸಿದ್ದರು.
ಆದರೆ ಈ ಬಾರಿ ಎರಡೂ ಕಡೆಯವರು ಸಂಪೂರ್ಣ ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಸಸ್ಪೆನ್ಸ್ ಮತ್ತಷ್ಟು ಹೆಚ್ಚಿಸಿದೆ. ಒಂದು ವೇಳೆ ಈ ವದಂತಿಗಳು ನಿಜವಾಗಿ ಮದುವೆ ಅಧಿಕೃತವಾದರೆ, ಟಾಪ್ ಮ್ಯೂಸಿಕ್ ಡೈರೆಕ್ಟರ್ ಮತ್ತು ಬಿಸಿನೆಸ್ ಕ್ವೀನ್ ಜೋಡಿಯಾಗುವುದು ಈ ದಶಕದ ಅತ್ಯಂತ ಅದ್ಧೂರಿ ವಿವಾಹವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.