ಕೆಲ ದಿನಗಳ ಹಿಂದಷ್ಟೆ ರಜತ್ (Rajath) ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್ ಒಂದನ್ನು ಅಪ್ಲೋಡ್ ಮಾಡಿದ್ದರು. ಬೈಕ್ನಲ್ಲಿ ಸ್ಟೈಲ್ (Bike Style) ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್ ಬ್ಲಾಸ್ಟ್ ಆಗುವ ದೃಶ್ಯ ಆ ರೀಲ್ಸ್ನಲ್ಲಿತ್ತು. ಇದೀಗ ನಟನ ವಿರುದ್ಧ (Case) ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ ಕ್ಷಮೆ ಕೂಡ ಕೇಳಿದ್ದಾರೆ.
ಮಚ್ಚು ಹಿಡಿದು ರೀಲ್ಸ್
ಈ ಹಿಂದೆ ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಶೂಟಿಂಗ್ ಮಧ್ಯೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ವಿರುದ್ಧ ಕೇಸ್ ದಾಖಲಾಗಿ, ಇಬ್ಬರೂ ಪರಪ್ಪನ ಅಗ್ರಹಾರ ಜೈಲು ಹಫಗಿ ಬಂದಿದ್ದರು. ಇದಾದ ಬಳಿಕ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿಸಿ ರಜತ್ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಇನ್ನೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: Ranveer Singh: ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ‘ಧುರಂಧರ್’ ಸಿನಿಮಾ; ಯಾವಾಗ?
ಬೆಂಗಳೂರು ದಕ್ಷಿಣ ತಾಲ್ಲೂಕು, ಕನಕಪುರ ರಸ್ತೆಯ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರಜತ್ ಹಾಗೂ ತಂಡ ರೀಲ್ಸ್ ಶೂಟ್ ಮಾಡಿದ್ದರು. ಪೆಟ್ರೋಲ್ ಬಾಂಬ್ ಬಳಸಿ ಬ್ಲಾಸ್ಟ್ ಸಹ ಮಾಡಲಾಗಿತ್ತು. ಕಗ್ಗಲಿಪುರ ಪೊಲೀಸರು ಈ ಘಟನೆಗೆ ಸಂಬಂಧಿಸದಂತೆ ರಜತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ಡಿವೈಎಸ್ಪಿ ಶ್ರೀನಿವಾಸ್, ‘ರಜತ್ ಅವರು ಸಾರ್ವಜನಿಕ ಶಾಂತಿಗೆ ಭಂಗ, ಅನುಚಿತ ವರ್ತನೆ, ರಸ್ತೆ ನಿಯಮ ಉಲ್ಲಂಘನೆ, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದ್ದಾರೆ. ರಜತ್ ಅವರಿಗೆ ನೊಟೀಸ್ ನೀಡಿ, ವಿಚಾರಣೆ ಮಾಡಲಾಗುವುದು’ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೀಲ್ಸ್ ಡಿಲೀಟ್ ಮಾಡಿದ್ದ ರಜತ್, ನಿನ್ನೆಯೇ ಈ ಬಗ್ಗೆ ಕ್ಷಮೆ ಕೇಳಿ ವಿಡಿಯೋ ಒಂದನ್ನು ಸಹ ಅಪ್ಲೋಡ್ ಮಾಡಿದ್ದರು. ಸುರಕ್ಷತಾ ಕ್ರಮಗಳನ್ನು ಬಳಸಿಯೇ ಆ ಬ್ಲಾಸ್ಟ್ ಮಾಡಿದ್ದಾಗಿ, ಹಾಗೂ ಸ್ಥಳೀಯರ ಅನುಮತಿ ಪಡೆದೇ ಬ್ಲಾಸ್ಟ್ ಮಾಡಿದ್ದಾಗಿ ಹೇಳಿದ್ದರು.
ಇದನ್ನೂ ಓದಿ: KD The Devil: ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?
ಇನ್ನು ರಜತ್ ತನ್ನ ರೀಲ್ಸ್‌ನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ ಎಂಬ ಡಿಸ್‌ಕ್ಲೈಮರ್‌ನ ತಮ್ಮ ರೀಲ್ಸ್ ಜೊತೆಗೆ ಹಾಕಿದ್ದಾರೆ.