ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramayana Movie: ಸ್ವೀಡನ್‌ನಲ್ಲೂ ಸದ್ದು ಮಾಡಿದ 'ರಾಮಾಯಣ': ಅನುಪಮ್ ಖೇರ್‌ ಭಾವುಕ ಪೋಸ್ಟ್‌!

Ramayana Movie: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಭಾರತದ ಗಡಿಯನ್ನು ದಾಟಿ ವಿದೇಶದಲ್ಲೂ 'ರಾಮಾಯಣ' ಸದ್ದು ಮಾಡುತ್ತಿದೆ.

ರಾಮಾಯಣ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ (Ranbir Kapoor), ಸಾಯಿ ಪಲ್ಲವಿ ಹಾಗೂ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ದೀಪಾವಳಿ (Deepavali) ಹಬ್ಬದ ಸಂದರ್ಭದಲ್ಲಿ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಭಾರತದ ಗಡಿಯನ್ನು ದಾಟಿ ವಿದೇಶದಲ್ಲೂ 'ರಾಮಾಯಣ' ಸದ್ದು ಮಾಡುತ್ತಿದೆ.

ಜಟಾಯು ಪಾತ್ರಕ್ಕೆ ಧ್ವನಿ

ಚಿತ್ರದಲ್ಲಿ ಜಟಾಯು ಪಾತ್ರಕ್ಕೆ ಧ್ವನಿ ನೀಡಿರುವ ಹಿರಿಯ ನಟ ಅನುಪಮ್ ಖೇರ್, ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಚಿತ್ರದ ಪ್ರೀಮಿಯರ್ ಪ್ರದರ್ಶನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ತಾವು ಭಾವುಕರಾಗಿದ್ದಾಗಿ ಅವರು ತಿಳಿಸಿದ್ದಾರೆ. ಈ ಕುರಿತ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

ಸ್ವೀಡನ್ ಪ್ರೇಕ್ಷಕರ ಪ್ರತಿಕ್ರಿಯೆಗೆ ಅನುಪಮ್ ಖೇರ್ ಭಾವುಕ

ಸ್ಟಾಕ್‌ಹೋಮ್‌ನಲ್ಲಿ ನಡೆದ 'ರಾಮಾಯಣ' ವಿಶೇಷ ಪ್ರದರ್ಶನದ ಬಳಿಕ ಪ್ರೇಕ್ಷಕರು ಅನುಪಮ್ ಖೇರ್ ಅವರನ್ನು ಭೇಟಿಯಾಗಿ ಕೈಕುಲುಕಿದ್ದಾರೆ. ಕೆಲವರು ಚಿತ್ರದ ಬಗ್ಗೆ ಮಾತನಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರ ಈ ಪ್ರೀತಿಗೆ ಮನಸೋತ ಅನುಪಮ್ ಖೇರ್, ಎಕ್ಸ್ (ಹಿಂದಿನ ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.



'ಸ್ಟಾಕ್‌ಹೋಮ್‌ನಲ್ಲಿ ನಡೆದ ರಾಮಾಯಣ: ದಿ ರೈಸ್ ಆಫ್ ಲೆಜೆಂಡ್ ಚಿತ್ರದ ಸ್ವೀಡನ್ ಪ್ರೀಮಿಯರ್‌ನ ಈ ದೃಶ್ಯಗಳನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಭಾಷಣವನ್ನು ಸ್ವೀಡಿಷ್ ಭಾಷೆಯ ಒಂದು ವಾಕ್ಯದೊಂದಿಗೆ ಆರಂಭಿಸಿದೆ. 41 ವರ್ಷಗಳ ಸಿನಿಪಯಣ ಮತ್ತು ಭಾರತದಲ್ಲಿ 556 ಸಿನಿಮಾಗಳ ನಂತರ ಇದೇ ಮೊದಲ ಬಾರಿಗೆ 'ಔಟ್ ಆಫ್ ಫ್ಯಾಷನ್' ಚಿತ್ರದ ಮೂಲಕ ಸ್ವೀಡಿಷ್ ಸಿನಿಮಾದ ಭಾಗವಾಗಿರುವುದು ಕೂಡ ವಿಶೇಷ ಅನುಭವ' ಎಂದು ಅವರು ಬರೆದುಕೊಂಡಿದ್ದಾರೆ.

ರಾಮಾಯಣದ ಭಾಗವಾಗಿರುವುದಕ್ಕೆ ಹೆಮ್ಮೆ ಎಂದ ನಟ

ಸ್ವೀಡನ್‌ನಲ್ಲಿರುವ ಭಾರತದ ರಾಯಭಾರಿ ಅನುರಾಗ್ ಭೂಷಣ್ ಅವರಿಗೆ ಧನ್ಯವಾದ ತಿಳಿಸಿರುವ ಅನುಪಮ್ ಖೇರ್, ಜಟಾಯು ಪಾತ್ರಕ್ಕೆ ಧ್ವನಿ ನೀಡುವ ಮೂಲಕ ರಾಮಾಯಣದ ಪಯಣದ ಭಾಗವಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

'ರಾಮಾಯಣ ಕೇವಲ ಭಾರತದ ಕಥೆಯಲ್ಲ. ಪ್ರೀತಿ, ತ್ಯಾಗ, ಕುಟುಂಬ, ಕರ್ತವ್ಯ ಹಾಗೂ ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸಂದೇಶವನ್ನು ಸಾರುವ ಈ ಮಹಾಕಾವ್ಯ ಭಾಷೆ, ಗಡಿ ಮತ್ತು ತಲೆಮಾರುಗಳನ್ನು ಮೀರಿ ಎಲ್ಲರನ್ನೂ ತಲುಪುತ್ತದೆ. ಇಂತಹ ಕಾಲಾತೀತ ಭಾರತೀಯ ಮಹಾಕಾವ್ಯವನ್ನು ಸ್ವೀಡನ್‌ನಲ್ಲಿ ಸಂಭ್ರಮಿಸುತ್ತಿರುವುದನ್ನು ನೋಡುವುದು ನಿಜಕ್ಕೂ ಭಾವುಕ ಕ್ಷಣವಾಗಿತ್ತು' ಎಂದು ಹೇಳಿದ್ದಾರೆ.

ಕಣ್ಣೀರಿನೊಂದಿಗೆ ಬಂದು ಕೈಕುಲುಕಿದ ಪ್ರೇಕ್ಷಕರು!

ಚಿತ್ರ ಪ್ರದರ್ಶನ ಮುಗಿದ ಬಳಿಕ ಪ್ರೇಕ್ಷಕರು ತಮ್ಮನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಅನುಪಮ್ ಖೇರ್, 'ಚಿತ್ರ ಮುಗಿದ ನಂತರ ಹಲವರು ಕಣ್ಣಿನಲ್ಲಿ ನೀರು ತುಂಬಿಕೊಂಡು ನನ್ನ ಬಳಿ ಬಂದರು. ಕೈಕುಲುಕಿ ರಾಮಾಯಣದ ಕಥೆಯನ್ನು ಹೇಳಿದ್ದಕ್ಕಾಗಿ ಹಾಗೂ ಜಟಾಯು ಪಾತ್ರದಲ್ಲಿ ಧ್ವನಿ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಅವರ ಪ್ರತಿಕ್ರಿಯೆ ಕಂಡು ನಾನು ಸಂಪೂರ್ಣ ಭಾವುಕನಾದೆ. ಭಾರತದಿಂದ ಇಂತಹ ಅದ್ಭುತ ಸಿನಿಮಾ ಹೊರಬಂದು ಇಲ್ಲಿನ ಪ್ರೇಕ್ಷಕರ ಮನಸ್ಸನ್ನೂ ಮುಟ್ಟಿರುವುದನ್ನು ಕಂಡು ಅಪಾರ ಹೆಮ್ಮೆಯಾಯಿತು' ಎಂದು ಬರೆದುಕೊಂಡಿದ್ದಾರೆ.

ಅಂತಿಮವಾಗಿ ಚಿತ್ರದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, 'ಭಾರತೀಯನಾಗಿರುವುದಕ್ಕೆ ಹೆಮ್ಮೆ. ಜೈ ಶ್ರೀರಾಮ್!' ಎಂದು ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಬೃಹತ್ ಬಜೆಟ್ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸೌಂದರ್ಯಾ-ಕಿರಣ್ ನಡುವೆ ನೇರ ವಾಗ್ದಾಳಿ; ಅಧ್ಯಕ್ಷ ಮಂಜು ಕಠಿಣ ನಿರ್ಧಾರ

ಮೊದಲ ಭಾಗದಲ್ಲಿ ಶ್ರೀರಾಮನ ಜನನ, ಬಾಲ್ಯ, ಸೀತೆಯೊಂದಿಗಿನ ವಿವಾಹ ಹಾಗೂ ವನವಾಸದ ಕಥೆಯನ್ನು ತೋರಿಸಲಾಗಿದೆ. ಕೊನೆಯಲ್ಲಿ ರಾವಣ ಸೀತೆಯನ್ನು ಅಪಹರಿಸುವುದು ಮತ್ತು ಆತನನ್ನು ಸಂಹರಿಸುವುದಾಗಿ ಶ್ರೀರಾಮ ಪ್ರತಿಜ್ಞೆ ಮಾಡುವ ಮೂಲಕ ಕಥೆ ಮುಕ್ತಾಯವಾಗುತ್ತದೆ. ಚಿತ್ರದ ಎರಡನೇ ಭಾಗ 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

Yashaswi Devadiga

View all posts by this author