ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

8 Kannada Movie: ಬಾಲಿವುಡ್‌ನ ಅನುರಾಗ್‌ ಕಶ್ಯಪ್‌ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್‌ ರಿಲೀಸ್

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಚೊಚ್ಚಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ‘8’ (ಎಂಟು) ಚಿತ್ರದ ಸಸ್ಪೆನ್ಸ್ ಹಾಗೂ ಎಮೋಷನಲ್ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು ಮನುಷ್ಯನ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕಥಾಹಂದರವನ್ನು ಹೊಂದಿದೆ.

ಬಾಲಿವುಡ್‌ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಚೊಚ್ಚಲ ಬಾರಿಗೆ ಕನ್ನಡದಲ್ಲಿ ಅತ್ಯಂತ ವಿಭಿನ್ನ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿರುವ ʻ8ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಈ ಸಸ್ಪೆನ್ಸ್ ಹಾಗೂ ಎಮೋಷನಲ್ ಗ್ಲಿಂಪ್ಸ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಜನ್ಮದಿನದ ವಿಶೇಷ ಅಂಗವಾಗಿ, ಅವರದೇ ಒಡೆತನದ ಪ್ರತಿಷ್ಠಿತ ಎವಿಆರ್‌ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಬಹುನಿರೀಕ್ಷಿತ ಸಿನಿಮಾ ನಿರ್ಮಾಣವಾಗುತ್ತಿದೆ.

ಈ ಹಿಂದೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಮೂಲಕ ಸಿನಿರಸಿಕರನ್ನು ರಂಜಿಸಿದ್ದ ಪ್ರತಿಭಾವಂತ ನಟ, ನಿರ್ದೇಶಕ ಸುಜಯ್ ಶಾಸ್ತ್ರಿ 8 ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಅನುರಾಗ್‌ ಕಶ್ಯಪ್‌ ಅವರ ಗಂಭೀರ ಲುಕ್ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

Yash: ʻಅಡಲ್ಟ್‌ ಕಂಟೆಂಟ್‌ ಅಂದ್ರೆ ಬರೀ ಅದೇ ಅಲ್ಲ..ʼ; ʻಟಾಕ್ಸಿಕ್‌ʼ ಕಥೆ ಬಗ್ಗೆ ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಅನುರಾಗ್‌ ಕಶ್ಯಪ್‌

8 (ಎಂಟು) ಸಿನಿಮಾದ ಕಥಾವಸ್ತು ಏನು?

ಮನುಷ್ಯನ ಜೀವನದಲ್ಲಿ ದೊರೆಯುವ ‘ಎರಡನೇ ಅವಕಾಶ’ ಎಂಬ ಅತ್ಯಂತ ಗಂಭೀರ ಹಾಗೂ ಆಳವಾದ ವಿಷಯವನ್ನು ಇಟ್ಟುಕೂಂಡು ಈ ಚಿತ್ರದ ಕಥಾಹಂದರವನ್ನು ಹೆಣೆಯಲಾಗಿದೆಯಂತೆ. ನಾವೆಲ್ಲರೂ ಬದುಕಿನಲ್ಲಿ ತಪ್ಪುಗಳನ್ನು ಮಾಡುತ್ತೇವೆ, ಆದರೆ ಕಾಲ ನಮಗೆ ಮತ್ತೊಂದು ಅಪರೂಪದ ಅವಕಾಶ ನೀಡಿದಾಗ, ಒಬ್ಬ ವ್ಯಕ್ತಿ ತನ್ನ ಹಳೆಯ ಕಹಿ ನೆನಪುಗಳನ್ನು ಮರೆತು, ತನ್ನ ಜೀವನವನ್ನು ಹೊಸದಾಗಿ ಮರುನಿರ್ಮಿಸಲು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ಮತ್ತು ರೋಮಾಂಚನಕಾರಿಯಾಗಿ ಹೇಳಿದ್ದಾರಂತೆ.‌

Aaliyah Kashyap: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿಯ ಬಿಕಿನಿ ಲುಕ್ ಗೆ ಪಡ್ಡೆಹುಡುಗರು ಫುಲ್ ಫಿದಾ!

ಶೂಟಿಂಗ್‌ ಮುಕ್ತಾಯ

8 ಚಿತ್ರದ ಚಿತ್ರೀಕರಣವು ಈಗಾಗಲೇ ವಿವಿಧ ಸುಂದರ ತಾಣಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡವು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ದೃಶ್ಯಗಳಿಗೆ ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣವಿದ್ದು, ಪ್ರತಿಕ್ ಶೆಟ್ಟಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಈಚೆಗೆ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಜನ್ಮದಿನದ ಸಂಭ್ರಮದ ಉಡುಗೊರೆಯಾಗಿ ಈ ವಿಶೇಷ ಗ್ಲಿಂಪ್ಸ್ ಬಿಡುಗಡೆಗೊಂಡಿದೆ. ಟೀಸರ್‌ಗೆ ಚಿತ್ರಪ್ರೇಮಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಟ್ರೈಲರ್ ಹಾಗೂ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಚಿತ್ರತಂಡ ಪ್ರಕಟಿಸಲಿದೆ.