ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: ಕಾಂತಾರದ ಕಂಬಳದಲ್ಲಿ ಮಿಂಚಿದ್ದ ಅಪ್ಪು ಇನ್ನಿಲ್ಲ

ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ತೆರೆ ಕಂಡು ಸೂಪರ್‌ ಹಿಟ್‌ ಆಗಿದ್ದ ಚಿತ್ರ ಕಾಂತಾರ. ಈ ಚಿತ್ರದ ಮೂಲಕ ಅನೇಕ ಕಲಾವಿದರು ಜನಪ್ರಿಯತೆ ಪಡೆದರು. ಕಾಂತಾರದ ಕಂಬಳದಲ್ಲಿ ನಟಿಸಿದ್ದ ಅಪ್ಪು ಕೋಣ ಇದೀಗ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಈ ವಿಷಯವನ್ನು ತಿಳಿಸಿದ್ದಾರೆ.

ಉಡುಪಿ: ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ತೆರೆ ಕಂಡು ಸೂಪರ್‌ ಹಿಟ್‌ ಆಗಿದ್ದ ಚಿತ್ರ (Kantara) ಕಾಂತಾರ. ಈ ಚಿತ್ರದ ಮೂಲಕ ಅನೇಕ ಕಲಾವಿದರು ಜನಪ್ರಿಯತೆ ಪಡೆದರು. ಸಿನಿಮಾದ ಮೂಲಕ ಕರಾವಳಿ ಸಂಪ್ರದಾಯ, ಸಂಸ್ಕೃತಿಯನ್ನು ತೆರೆ ಮೇಲೆ ಕಾಣಿಸಲಾಗಿತ್ತು. ಕಂಬಳ, ಕೋಲ ಹೀಗೆ ಹಲವು ಸಂಪ್ರದಾಯಗಳು ಸಿನಿಮಾದ ಜೀವಾಳವಾಗಿದ್ದವು. ಕಾಂತಾರದ ಕಂಬಳದಲ್ಲಿ ನಟಿಸಿದ್ದ ಅಪ್ಪು ಕೋಣ ಇದೀಗ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಈ ವಿಷಯವನ್ನು ತಿಳಿಸಿದ್ದಾರೆ. ಕಂಬಳ ಪ್ರಿಯರು ಹಾಗೂ ಸಿನಿಮಾ ನೋಡಿದವರು ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

2022 ರಲ್ಲಿ ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ (Rishabh Shetty) ನಿರ್ದೇಶನ ಹಾಗೂ ನಟನೆಯ ಕಾಂತಾರ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಚಿತ್ರಕ್ಕಾಗಿಯೇ ರಿಷಬ್‌ ಶೆಟ್ಟಿ ಕೋಣಗಳನ್ನು ಓಡಿಸುವುದನ್ನು ಕಲಿತಿದ್ದರು. ಕಂಬಳದ ದೃಶ್ಯದ ಚಿತ್ರೀಕರಣಕ್ಕಾಗಿ ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಅಪ್ಪು ಹಾಗೂ ಕಾಲಾಗಳನ್ನು ಬಳಕೆ ಮಾಡಲಾಗಿತ್ತು. ಈ ಪೈಕಿ ಅಪ್ಪು ಕೋಣ ನಿಧನ ಹೊಂದಿದೆ. ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತರಬೇತಿ ಪಡೆದಿದ್ದರು. ಅಪ್ಪು ನಿಧನಕ್ಕೆ ಕಂಬಳ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಜ ಜೀವನದಲ್ಲಿಯೂ ಅಪ್ಪು ಹಿರೋ

ಸಿನಿಮಾದಲ್ಲಿ ಮಾತ್ರವಲ್ಲದೇ ನಿಜವಾದ ಚಾಂಪಿಯನ್‌ಶಿಪ್‌ಗಳಲ್ಲಿ ಅಪ್ಪು ಹೀರೊ ಆಗಿದ್ದ. ಅಪ್ಪು ಹಾಗೂ ಕಾಲಾ ಕೋಣಗಳು ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಪಡೆದಿದ್ದವು.

ಕಾಂತಾರದ ಸಹನಟ ಸಾವು

ಕಾಂತಾರ ಚಿತ್ರತಂಡದಲ್ಲಿ ಗುರುತಿಸಿಕೊಂಡ ಮತ್ತೋರ್ವ ಸಹಕಲಾವಿದ ಮೃತಪಟ್ಟಿದ್ದಾರೆ. ಟಿ. ಪ್ರಭಾಕರ ಕಲ್ಯಾಣಿ ಮೃತ ದುರ್ದೈವಿ. ಟಿ.ಪ್ರಭಾಕರ ಕಲ್ಯಾಣಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದವರು. ಕಾಂತಾರ ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಪ್ ಬರೋಡಾದ ನಿವೃತ್ತ ಉದ್ಯೋಗಿಯಾದ್ದರು.