ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Arijit Singh: ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?

Arijith: ಮಂಗಳವಾರ ರಾತ್ರಿ ಅರಿಜಿತ್ ಸಿಂಗ್ ಅವರು ಪ್ಲೇಬ್ಯಾಕ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಿದ್ದಾರೆ. ಗಾಯಕ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ ಮೂಲಕ ಹೇಳಿಕೊಂಡರು. ಶೀಘ್ರದಲ್ಲೇ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಉಂಟಾಯಿತು. ಆದಾಗ್ಯೂ, ನಿರ್ದೇಶಕರಾಗಿ ತಮ್ಮ ಚೊಚ್ಚಲ ಚಿತ್ರದತ್ತ ಗಮನಹರಿಸಲು ಅರಿಜಿತ್ ಸ್ವಲ್ಪ ಸಮಯದವರೆಗೆ ದೂರ ಸರಿದಿರಬಹುದು ಎಂದು ವರದಿಯಾಗಿದೆ.

ಅರಿಜಿತ್‌ ಸಿಂಗ್‌

ಮಂಗಳವಾರ ರಾತ್ರಿ ಅರಿಜಿತ್ ಸಿಂಗ್ (Arijit Singh) ಅವರು ಪ್ಲೇಬ್ಯಾಕ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಿದ್ದಾರೆ. ಗಾಯಕ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ ಮೂಲಕ ಹೇಳಿಕೊಂಡರು. ಶೀಘ್ರದಲ್ಲೇ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಉಂಟಾಯಿತು. ಆದಾಗ್ಯೂ, ನಿರ್ದೇಶಕರಾಗಿ (Direction) ತಮ್ಮ ಚೊಚ್ಚಲ ಚಿತ್ರದತ್ತ ಗಮನಹರಿಸಲು ಅರಿಜಿತ್ ಸ್ವಲ್ಪ ಸಮಯದವರೆಗೆ ದೂರ ಸರಿದಿರಬಹುದು ಎಂದು ವರದಿಯಾಗಿದೆ.

ಸಿನಿಮಾದ ಕಥೆ ಮತ್ತು ನಿರ್ಮಾಣದ ಕೆಲಸ

ಪಿಂಕ್ವಿಲ್ಲಾ ವರದಿಯ ಪ್ರಕಾರ , ಅರಿಜಿತ್ ಸಿಂಗ್ ಸ್ವಲ್ಪ ಸಮಯದಿಂದ ನಿರ್ದೇಶಕರಾಗುವ ಆಲೋಚನೆಯ ಬಗ್ಗೆ ಯೋಚಿಸುತ್ತಿದ್ದಾರೆ. "ಅರಿಜಿತ್ ಸ್ವಲ್ಪ ಸಮಯದಿಂದ ನಿರ್ದೇಶಕರಾಗುವ ಆಲೋಚನೆಯಲ್ಲಿ ಇದ್ದಾರೆ. ಈ ಸಿನಿಮಾದ ಕಥೆ ಮತ್ತು ನಿರ್ಮಾಣದ ಕೆಲಸಗಳಿಗಾಗಿ ಅವರಿಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ.

ಈ ಕಾರಣಕ್ಕಾಗಿಯೇ ಅವರು ಹೊಸ ಪ್ಲೇಬ್ಯಾಕ್ ಸಿಂಗಿಂಗ್ ಅಸೈನ್‌ಮೆಂಟ್‌ಗಳನ್ನು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಅರಿಜಿತ್ ಸಿಂಗ್ ಕಳೆದ ಹಲವು ವರ್ಷಗಳಿಂದ ಚಿತ್ರ ನಿರ್ದೇಶನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಆದರೆ ಗಾಯಕನಾಗಿ ಸಾಲು ಸಾಲು ಆಫರ್‌ಗಳಿದ್ದ ಕಾರಣ ಅವರಿಗೆ ಸಮಯ ಸಿಗುತ್ತಿರಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: Karthi: ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

ಯಾರು ನಟಿಸಲಿದ್ದಾರೆ?

ಹಿಂದೂಸ್ತಾನ್ ಟೈಮ್ಸ್‌ನ ಮತ್ತೊಂದು ವರದಿಯ ಪ್ರಕಾರ, ಈ ವಿರಾಮವು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ, "ಅರಿಜಿತ್ ನಿರ್ದೇಶಕರಾಗಿ ತಮ್ಮ ಚೊಚ್ಚಲ ಚಿತ್ರದಲ್ಲಿ ನಿರತರಾಗಲಿದ್ದಾರೆ. ಅವರು ಬಹಳ ಸಮಯದಿಂದ ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಮತ್ತು ಅದಕ್ಕೆ ಅವರ ಸಮಯ ಮತ್ತು ಶ್ರಮ ಬೇಕಾಯಿತು. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರ ಪುತ್ರಿ ಶೋರಾ ನಟಿಸಲಿದ್ದಾರೆ ಎಂದು ವರದಿಯಾಗಿದೆ .



ತಮ್ಮ ನಿವೃತ್ತಿ ಪೋಸ್ಟ್‌ನಲ್ಲಿ ಅರಿಜಿತ್, "ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಈ ವರ್ಷಗಳಲ್ಲಿ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಹುದ್ದೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಅದನ್ನು ರದ್ದುಗೊಳಿಸುತ್ತಿದ್ದೇನೆ. ಇದು ಅದ್ಭುತ ಪ್ರಯಾಣವಾಗಿತ್ತು" ಎಂದು ಬರೆದಿದ್ದಾರೆ.

700ಕ್ಕೂ ಅಧಿಕ ಹಾಡುಗಳಲ್ಲಿ ಬ್ಯುಸಿ

38 ವರ್ಷ ವಯಸ್ಸಿನ ಅರಿಜಿತ್‌ ಸಿಂಗ್‌ ಅವರು 2005ರಲ್ಲಿ ಮೊದಲ ಬಾರಿಗೆ ಗಾಯಕರಾಗಿ ಪರಿಚಿತಗೊಂಡರು. ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 700ಕ್ಕೂ ಅಧಿಕ ಹಾಡುಗಳನ್ನು ಅರಿಜಿತ್‌ ಹಾಡಿದ್ದಾರೆ. 2012ರ 'ಆಶಿಕಿ 2' ಚಿತ್ರದ "ತುಮ್ ಹಿ ಹೋ" ಹಾಡಿನ ಮೂಲಕ ಅವರು ರಾತ್ರೋರಾತ್ರಿ ಸ್ಟಾರ್ ಆದರು. ಹಿಂದಿ ಬಿಟ್ಟರೆ ಬೆಂಗಾಲಿಯಲ್ಲಿ ಹೆಚ್ಚು ಹಾಡುಗಳನ್ನು ಅರಿಜಿತ್‌ ಸಿಂಗ್ ಹಾಡಿದ್ದು‌, ಉಳಿದಂತೆ ಕನ್ನಡ, ತೆಲುಗು, ತಮಿಳು, ಅಸ್ಸಾಮಿ, ಗುಜರಾತಿ ಮುಂತಾದ ಭಾಷೆಗಳಲ್ಲಿ ಅವರು ಹಾಡಿರುವ ಹಾಡುಗಳ ಸಂಖ್ಯೆಯು 10 ಕೂಡ ದಾಟಿಲ್ಲ.

ಇನ್ನು, ಸಂಭಾವನೆ ವಿಚಾರಕ್ಕೆ ಬಂದರೆ, ಭಾರತದಲ್ಲೇ ಟಾಪ್‌ ಸಿಂಗರ್‌ ಆಗಿದ್ದರು ಅರಿಜಿತ್‌. ಒಂದು ಸಿನಿಮಾ ಹಾಡಿಗೆ ಅವರು ಸುಮಾರು 8 ಲಕ್ಷದಿಂದ 10 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದರಂತೆ. ಕೆಲವು ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಅಥವಾ ವಿಶೇಷ ಹಾಡುಗಳಿಗೆ ಈ ಮೊತ್ತ 15ರಿಂದ 20 ಲಕ್ಷದವರೆಗೂ ಇರುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: L R Shivaramegowda: ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

ಇನ್ನು, ಕನ್ಸರ್ಟ್ ಅಥವಾ ಲೈವ್ ಶೋಗಳು ಅರಿಜಿತ್ ಸಿಂಗ್ ಅವರ ಮುಖ್ಯ ಆದಾಯದ ಮೂಲವಾಗಿತ್ತು. ಒಂದು ಲೈವ್ ಕನ್ಸರ್ಟ್‌ಗೆ ಅವರು 2 ಕೋಟಿಯಿಂದ 5 ಕೋಟಿಯವರೆಗೆ ಸಂಭಾವನೆ ಪಡೆಯುವ ಅರಿಜಿತ್‌, ಇನ್ಮುಂದೆ ಆ ಕಡೆಗೆ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ.

Yashaswi Devadiga

View all posts by this author