ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Singer Zubeen Garg: ಖ್ಯಾತ ಗಾಯಕ ಜುಬೀನ್ ಗರ್ಗ್ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ

Legendary Singer Zubeen Garg: ಹಲವು ಭಾಷೆಗಳಲ್ಲಿ ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಅವರು ಸಿಂಗಪುರದಲ್ಲಿ ದುರಂತ ಸಾವನ್ನಪ್ಪಿದ್ದು, ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವೇ ಎದುರಾದಂತಾಗಿದೆ. ಇದೀಗ ಸಂಗೀತ ಮತ್ತು ಸಂಸ್ಕೃತಿಗೆ ಅವರು ನೀಡಿದ್ದ ಕೊಡುಗೆ ಸ್ಮರಿಸುವ ಸಲುವಾಗಿ ಸ್ಮಾರಕವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಸ್ವತಃ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನವದೆಹಲಿ: 'ಹಿಯಾ ದಿಯಾ ನಿಯಾ', 'ದಾಗ್', 'ನಾಯಕ್', 'ಕನ್ಯಾದಾನ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಹಾಡನ್ನು ಹಾಡುವ ಮೂಲಕ ಖ್ಯಾತಿ ಪಡೆದ ಗಾಯಕ ಜುಬೀನ್ ಗರ್ಗ್ (Zubeen Garg) ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಗ್ಯಾಂಗ್‌ಸ್ಟರ್‌ ಸಿನಿಮಾದಲ್ಲಿನ ʻಯಾ ಅಲಿ ರೆಹಮ್‌ ಅಲಿʼ ಹಾಡು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕನ್ನಡದಲ್ಲಿಯೂ ಹುಡುಗಾಟ ಸಿನಿಮಾದ 'ಒಮ್ಮೊಮ್ಮೆ ಹೀಗೂ ಆಗುವುದೇ' ಹಾಡು ಈಗಲೂ ಕೂಡ ಅಷ್ಟೇ ಜನಪ್ರಿಯತೆ ಪಡೆದಿದೆ. ಹಲವು ಭಾಷೆಗಳಲ್ಲಿ ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಅವರು ಸಿಂಗಾಪುರದಲ್ಲಿ ಅಕಾಲಿಕ ನಿಧನ ಹೊಂದಿದ್ದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವೇ ಎದುರಾದಂತಾಗಿದೆ. ಇದೀಗ ಸಂಗೀತ ಮತ್ತು ಸಂಸ್ಕೃತಿಗೆ ಅವರು ನೀಡಿದ್ದ ಕೊಡುಗೆ ಸ್ಮರಿಸುವ ಸಲುವಾಗಿ ಸ್ಮಾರಕ ವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಸ್ವತಃ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 23 ರಂದು ನಡೆಯಲಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಕನ ಕುಟುಂಬದೊಂದಿಗೆ ಚರ್ಚಿಸಿ ಅನಂತರ ಅವರಿಗೆ ಸ್ಮಾರಕ ಮಾಡಲು ಭೂಮಿ ಯನ್ನು ಅನುಮೋದಿಸಲಾಗುತ್ತದೆ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅಸ್ಸಾಂ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳುವುದಾಗಿ ಕೂಡ ಹೇಳಿಕೊಂಡಿದ್ದಾರೆ.



ಗುವಾಹಟಿ ಬಳಿಯಲ್ಲಿ ಭೂಮಿಯನ್ನು ಮಂಜೂರು ಮಾಡಲು ಅಸ್ಸಾಂ ಸಚಿವ ಸಂಪುಟ ಅನು ಮೋದನೆ ನೀಡಿದೆ, ಅಲ್ಲಿ ಜುಬೀನ್ ಗರ್ಗ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಸಂಗೀತ ಪರಂಪರೆಯನ್ನು ಗೌರವಿಸಲು ಅದೇ ಸ್ಥಳದಲ್ಲಿ ಸ್ಮಾರಕವನ್ನು ಸಹ ನಿರ್ಮಿಸಲಾಗುವುದು ಎಂದು ಅಸ್ಸಾಂ ಸಿಎಂ ಶರ್ಮಾ ಅವರು ಮಾಧ್ಯಮಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿ, ಅಂತಿಮ ವಿಧಿ ವಿಧಾನದ ಬಳಿಕ ಜುಬೀನ್ ಅವರ ಚಿತಾಭಸ್ಮವನ್ನು ಜೋರ್ಹತ್‌ಗೆ ಕೊಂಡೊಯ್ಯಲಾಗುವುದು, ಅಲ್ಲಿ ಐತಿಹಾಸಿಕ ಹೆಸರಿಗಾಗಿ ಅವರ ಸ್ಮಾರಕವನ್ನು ನಿರ್ಮಿಸಲಾಗುವುದು‌. ಗಾಯಕನ ಕಲಾ ಸೇವೆಗೆ ಗೌರವಾರ್ಥ ವಾಗಿ ಅಸ್ಸಾಂ ಸರ್ಕಾರ ಸೆಪ್ಟೆಂಬರ್ 23 ರವರೆಗೆ ರಾಜ್ಯಾದ್ಯಂತ ಶೋಕಾಚರಣೆಯನ್ನು ಮಾಡಲು ಸಮಯ ವಿಸ್ತರಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:Idli Kadai Dhanush Movie: ಧನುಷ್ ನಟನೆಯ ಇಡ್ಲಿ ಕಡೈ ಸಿನಿಮಾಗೆ ಶುಭ ಕೋರಿದ ನಟ ರಿಷಭ್ ಶೆಟ್ಟಿ!

ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಜುಬೀನ್ ಗರ್ಗ್ ನಿಧನ ಹೊಂದಿದ್ದಾರೆ.ಐಸಿಯುನಲ್ಲಿ ಚಿಕಿತ್ಸೆ ನೀಡಲಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಅಸ್ಸಾಮಿ, ಹಿಂದಿ, ಬಂಗಾಳಿ ಸೇರಿದಂತೆ ಅನೇಕ ಭಾಷೆಯಲ್ಲಿ 40,000ರಕ್ಕೂ ಅಧಿಕ ಹಾಡನ್ನು ಹಾಡಿದ್ದ ಗಾಯಕ ಗಾಯಕ ಜುಬೀನ್ ಗರ್ಗ್ ಅವರ ಅಗಲುವಿಕೆ ಸಂಗೀತ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ.