ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Batwara 1947 Trailer: ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್‌ ಔಟ್‌

Batwara: ಆಕ್ಷನ್‌ ಪ್ಯಾಕ್ಡ್‌ನಿಂದ ಕೂಡಿದೆ. ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಬಟ್ವಾರಾ 1947 ರ ಟ್ರೇಲರ್ ಹೃದಯಸ್ಪರ್ಶಿಯಾಗಿದೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರದ ಕುರಿತಾಗಿ ಇದೆ. ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ.

ಬಟ್ವಾರಾ ಸಿನಿಮಾ

ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಟ್ವಾರಾ 1947' (Batwara Movie Trailer) ಚಿತ್ರ ಟ್ರೇಲರ್ ಬಿಡುಗಡೆಯಾಗಿದೆ. ಆಕ್ಷನ್‌ ಪ್ಯಾಕ್ಡ್‌ನಿಂದ ಕೂಡಿದೆ. ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಬಟ್ವಾರಾ 1947 ರ ಟ್ರೇಲರ್ ಹೃದಯಸ್ಪರ್ಶಿಯಾಗಿದೆ. ಭಾರತ-ಪಾಕಿಸ್ತಾನ (India Pakisthan) ವಿಭಜನೆಯ ನಂತರದ ಕುರಿತಾಗಿ ಇದೆ.

ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ.

ಇದನ್ನೂ ಓದಿ: Jr NTR : ಜ್ಯೂ ಎನ್​ಟಿಆರ್​ ಭುಜಕ್ಕೆ ಗಾಯ; ಬಿಗ್‌ ಅಪ್‌ಡೇಟ್‌ ಕೊಟ್ಟ ಟೀಮ್‌!

ಸನ್ನಿ ಡಿಯೋಲ್ ಹಾಗೂ ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಪ್ರೀತಿ ಜಿಂಟಾ ಮತ್ತು ಮಗ ಕರಣ್ ಡಿಯೋಲ್ ಪಾಕಿಸ್ತಾನದ ಲಾಹೋರ್‌ಗೆ ವಲಸೆ ಹೋಗುತ್ತಾರೆ. ಆದರೆ, ಆ ಮನೆಯ ಮಹಡಿಯ ಮೇಲೆ ಹಿರಿಯ ಹಿಂದೂ ಮಹಿಳೆಯೊಬ್ಬರು (ಶಬಾನಾ ಅಜ್ಮಿ) ವಾಸಿಸುತ್ತಿದ್ದು, ತಮ್ಮ ಪಾರಂಪರಿಕ ಮನೆಯನ್ನು ತೊರೆಯಲು ನಿರಾಕರಿಸುತ್ತಾರೆ. ತಮ್ಮ ಕೋಣೆಯಲ್ಲಿ ಸಣ್ಣ ದೇವಾಲಯವನ್ನಿಟ್ಟುಕೊಂಡು ಪೂಜೆ ಮಾಡುವುದು ಸ್ಥಳೀಯ ಕೆಲವರ ಆಕ್ರೋಶಕ್ಕೆ ಕಾರಣವಾಗುತ್ತದೆ.

" ಅವರು ಹಿಂದೂ ಮಹಿಳೆಯಲ್ಲ, ಅವರು ತಾಯಿ. ತಾಯಂದಿರನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ವಿಭಜಿಸಬೇಡಿ. ತಾಯಿ ಸ್ವತಃ ಒಂದು ಧರ್ಮ. ಪ್ರತಿಯೊಬ್ಬ ವ್ಯಕ್ತಿಯ ಮೊದಲ ಧರ್ಮ ತಾಯಿ. ಪ್ರತಿ ಮಗು ಹೇಳುವ ಮೊದಲ ಪದ "ತಾಯಿ" ಎನ್ನುವ ಡೈಲಾಗ್‌ ಹೈಲೈಟ್‌ ಆಗಿದೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥೆಯನ್ನು ಹೇಳುವ ಈ ಚಿತ್ರವು ಅಸ್ಗರ್ ವಜಾಹತ್ ಅವರ ಪ್ರಸಿದ್ಧ ನಾಟಕ "ಜಿಸ್ ಲಾಹೋರ್ ನಹಿ ದೇಖ್ಯಾ, ಓ ಜಮ್ಯೈ ನಹಿ" ಆಧರಿಸಿದೆ. ಸನ್ನಿ ಮತ್ತು ಪ್ರೀತಿ ಜೊತೆಗೆ, ಚಿತ್ರದ ತಾರಾಗಣದಲ್ಲಿ ಶಬಾನಾ ಅಜ್ಮಿ, ಅಲಿ ಫಜಲ್, ಕರಣ್ ಡಿಯೋಲ್ ಮತ್ತು ಅಭಿಮನ್ಯು ಇದ್ದಾರೆ.



ನಟ-ನಿರ್ದೇಶಕ ಜೋಡಿ ಘಾಯಲ್, ಘಾಟಕ್ ಮತ್ತು ದಾಮಿನಿಯಂತಹ ಹಿಟ್‌ಗಳನ್ನು ನೀಡಿದೆ.ಈ ಚಿತ್ರವನ್ನು ಅಮೀರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಜಂಟಿಯಾಗಿ ನಿರ್ಮಿಸಿದ್ದಾರೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಈ ಚಿತ್ರ ಆಗಸ್ಟ್ 14, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Ramayana Movie: ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್‌ ಹೇಳಿದ್ದೇನು?

ಸಸಸನ್ನಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಾರ್ಟಿಷನ್ 1947 ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಎ ಪ್ರಮಾಣಪತ್ರವನ್ನು ಪಡೆದಿದೆ.

Yashaswi Devadiga

View all posts by this author