ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada 13) ಶುರುವಾಗುವುದಕ್ಕೂ ಮುನ್ನವೇ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕುತೂಹಲ ಮೂಡಿಸಿದೆ. ಆಗಸ್ಟ್ 16ರಿಂದ ಈ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇವರು ಹೆಚ್ಚು ಜನರಿಗೆ ತಲುಪಿದ್ದು ಇಂಗ್ಲಿಷ್‌ನ ಬಿಲಿವರ್(Believer song) ಹಾಡಿನ ಮೂಲಕ. ಸಖತ್ ಟ್ರೆಂಡ್ ಆಗಿರುವ ಈ ಹಾಡನ್ನ ಅದೇ ದಾಟಿಯಲ್ಲಿ ಹಾಡಿ, ಸೋಷಿಯಲ್ ಮೀಡಿಯಾ ವೀಕ್ಷಕರ ಮನ ಗೆದ್ದಿದ್ದರು.
ಬಿಗ್ ಬಾಸ್ ಮನೆಯ ಸ್ಟಾರ್ ಕಂಟೆಸ್ಟಂಟ್ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್ ಗೌಡ ಅವರು ಬಿರುದು ಕೊಟ್ಟಿದ್ದಾರೆ.ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲೇ ಈಗ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Bigg Boss Kannada 13: ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!
ಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಬೆಂಗಳೂರಿನ ಶಿವಾಜಿ ನಗರದಲ್ಲಿ ಹೈಸ್ಕೂಲ್ ಓದಿದ ಹೇಮಲತಾ ಮದವೆ ಆಗಿ ಕುಣಿಗಲ್ ತಾಲೂಕಿನ ಮಣ್ಣನಪಾಳ್ಯ ಹಳ್ಳಿ ಸೇರಿದರು. ಇವರ ಮೂಲ ಆದಯ ವ್ಯವಸಾಯ. ಮ್ಯೂಜಿಕ್ ಇಂಟ್ರಸ್ಟ್ ಇದ್ದಿದರಿಂದ ದೇವರ ನಾಮಗಳನ್ನ ಹಾಡುತ್ತಿದ್ದರು. ಸಂಗೀತ ಕಲಿತಿಲ್ಲ. ಸಖತ್ ಟ್ರೆಂಡ್ ಆಗಿರುವ ಈ ಹಾಡನ್ನ ಅದೇ ದಾಟಿಯಲ್ಲಿ ಹಾಡಿ, ಸೋಷಿಯಲ್ ಮೀಡಿಯಾ ವೀಕ್ಷಕರ ಮನ ಗೆದ್ದಿದ್ದರು. ಇವರು ಸ್ಪೆಷಲ್ ಕಂಟೆಸ್ಟಂಟ್ ಆಗಿ, ಸೆಲೆಕ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಬಿಗ್ ಬಾಸ್ ಸ್ಪರ್ಧೆಯಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. . ಸ್ಪರ್ಧಿಗಳಿಗೆ ಸಾಮಾನ್ಯ ಟಾಸ್ಕ್‌ಗಳ ಬದಲಾಗಿ ಕೊಂಚ ವಿಚಿತ್ರ ಮತ್ತು ಸವಾಲಿನ ಟಾಸ್ಕ್‌ಗಳನ್ನು ನೀಡಲಾಗಿದೆ. ತಲೆ ಬೋಳಿಸಿಕೊಳ್ಳುವುದು, ಗಿನ್ನಿಸ್ ಪ್ರಮಾಣಪತ್ರ ಹರಿಯುವುದು, ಸಗಣಿ ಹಚ್ಚಿಕೊಳ್ಳುವುದು ಸೇರಿದಂತೆ ಹಲವು ಟಾಸ್ಕ್‌ಗಳು ಪ್ರೊಮೊದಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ: Amruthadhaare Serial: ಜೈದೇವ್ ಕಥೆ ಫಿನಿಶ್; ಮಲ್ಲಿ ತನಿಖೆ ಶುರು, ಜೀವ ಕೊಟ್ಟೇ ಬಿಟ್ಟ ಬಿಗ್ ಟ್ವಿಸ್ಟ್!
ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಅರ್ಹತೆ ಪಡೆಯುವವರು ಯಾರು? ಅನ್ನೋದೇ ಕುತೂಹಲ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.