ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhagyalakshmi Kannada Serial: ಭಾಗ್ಯಲಕ್ಷ್ಮಿ ಸೀರಿಯಲ್ ಅಂತ್ಯ​: ನಟಿ ಸುಷ್ಮಾ ರಾವ್​ ಭಾವುಕ ಪೋಸ್ಟ್!

Bhagyalakshmi Kannada Serial: ಕಳೆದ ಮೂರುವರೆ ವರ್ಷಗಳಿಂದ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಕನ್ನಡ ವೀಕ್ಷಕರನ್ನ ರಂಜಿಸುತ್ತಿದೆ. ಇದೀಗ ಜನಮೆಚ್ಚಿದ ಕಥೆ ‘ಭಾಗ್ಯಲಕ್ಷ್ಮೀ’ ಅಂತ್ಯವಾಗಲಿದೆ. ನಾಯಕಿ ಸುಷ್ಮಾ ಕೆ. ರಾವ್ ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮೀ’ (Bhagyalakshmi Kannada Serial). ಕಳೆದ ಮೂರುವರೆ ವರ್ಷಗಳಿಂದ ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಕನ್ನಡ ವೀಕ್ಷಕರನ್ನ ರಂಜಿಸುತ್ತಿದೆ. ಇದೀಗ ಜನಮೆಚ್ಚಿದ ಕಥೆ ‘ಭಾಗ್ಯಲಕ್ಷ್ಮೀ’ ಅಂತ್ಯವಾಗಲಿದೆ. ನಾಯಕಿ ಸುಷ್ಮಾ ಕೆ. ರಾವ್ (Sushma K Rao) ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

ಟಿಆರ್‌ಪಿ ಪಡೆದು, ನಂಬರ್‌ 1 ಸೀರಿಯಲ್‌

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ತಾಂಡವ್ - ಶ್ರೇಷ್ಠಾ ಮದುವೆ ಆಯ್ತು, ಭಾಗ್ಯ - ತಾಂಡವ್ ಡಿವೋರ್ಸ್ ಆಯ್ತು, ಭಾಗ್ಯ - ಆದಿ ಮದುವೆ ಸಹ ಆಯ್ತು. . ಅಕ್ಕ - ತಂಗಿಯರ ಮನೆಗೆ ಅಕ್ಕ - ತಂಗಿಯರೇ ಸೊಸೆಯಾಗಿ ಹೋಗುವ ಕಥೆಯನ್ನ ‘ಭಾಗ್ಯಲಕ್ಷ್ಮೀ’ ಹೊಂದಿತ್ತು. ಆದರೆ, ಬರ್ತಾ ಬರ್ತಾ ‘ಭಾಗ್ಯಲಕ್ಷ್ಮೀ’ ಬೇರೆ ಬೇರೆ ತಿರುವುಗಳನ್ನ ಪಡೆಯಿತು. ಒಂದೇ ಸೀರಿಯಲ್‌ ಎರಡು ಹೋಳಾಯಿತು. ಅತೀ ಹೆಚ್ಚು ಟಿಆರ್‌ಪಿ ಪಡೆದು, ನಂಬರ್‌ 1 ಸೀರಿಯಲ್‌ ಎನಿಸಿಕೊಂಡಿತ್ತು. ಟಿಆರ್‌ಪಿಯಲ್ಲಿ ಟಾಪ್‌ನಲ್ಲಿರುವಾಗಲೇ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಎಂಡ್ ಆಯ್ತು.

ಇದನ್ನೂ ಓದಿ: Amruthadhaare Serial: ಮಹಿಮಾ ಬದುಕಿಗೆ ಭರವಸೆ ನೀಡಿದ ಗೌತಮ್ - ಭೂಮಿ; ಧನ್ಯವಾದ ಹೇಳಿದ ಶಕುಂತಲಾ!

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಆದಿ ಮತ್ತು ಭಾಗ್ಯ ಖುಷಿಯಾಗಿದ್ದಾರೆ. ವಿಲನ್​ ಕನ್ನಿಕಾಳ ಮುಖವಾಡ ಬಯಲಾಗಬೇಕಿದೆ. ಆದಿಯ ಚಿಕ್ಕಮ್ಮನ ವಿಚಿತ್ರ ವರ್ತನೆಯ ಕಾರಣವೂ ತಿಳಿಯಬೇಕಿದೆ. ಶೂಟಿಂಗ್​ ಅಂತೂ ಮುಗಿದಿರುವುದು ನಟಿ ಸುಷ್ಮಾ ಅವರ ಪೋಸ್ಟ್​ನಿಂದ ತಿಳಿದು ಬರುತ್ತಿದೆ.

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರಾವ್, ಕುಸುಮಾ ಆಗಿ ಪದ್ಮಜಾ ರಾವ್, ಗುಂಡಣ್ಣ ತನ್ಮಯ್ ಆಗಿ ನಿಹಾರ್ ಗೌಡ, ತನ್ವಿ ಆಗಿ ಅಮೃತಾ, ತಾಂಡವ್ ಆಗಿ ಸುದರ್ಶನ್ ರಂಗಪ್ರಸಾದ್, ಶ್ರೇಷ್ಠಾ ಆಗಿ ಕಾವ್ಯ ಗೌಡ, ಆದಿ ಆಗಿ ಹರೀಶ್ ರಾಜ್, ಕನ್ನಿಕಾ ಆಗಿ ಸುಕೃತಾ ನಾಗ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Bhagyalakshmi Serial colors

ಭಾಗ್ಯಲಕ್ಷ್ಮೀʼ ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ನಟಿ, ನಿರೂಪಕಿ ಸುಷ್ಮಾ ಕೆ ರಾವ್ ಅವರ ನಟನಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಧಾರಾವಾಹಿ ಇದು.. ತಾಂಡವ್‌ನ ಕಿರಿಕಿರಿ - ಕಿರುಕುಳದಿಂದ ತಪ್ಪಿಸಿಕೊಂಡು ಭಾಗ್ಯ - ಆದಿ ವಿವಾಹವಾಗಿತ್ತು.

ಇದನ್ನೂ ಓದಿ: Krishi Thapanda: ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ ಭಾವುಕ ಪೋಸ್ಟ್!

ಈ ಹಿಂದೆ ಭಾಗ್ಯಗೆ ಹಲವು ಸಂಕಷ್ಟಗಳು ಎದುರಾಗಿದ್ದವು. ಎಲ್ಲಾ ಸಂಕಷ್ಟಗಳನ್ನು ದಾಟಿಕೊಂಡು ಭಾಗ್ಯ - ಆದಿ ವಿವಾಹವಾಗಿದೆ.ಇದೇ ತಿಂಗಳು ತನ್ನ ಕಥೆಗೆ ಭಾಗ್ಯಲಕ್ಷ್ಮೀ ವಿದಾಯ ಹೇಳುತ್ತಿದೆ ಎನ್ನಲಾಗುತ್ತಿದೆ. ಅಂತಿಮ ಸಂಚಿಕೆಗಳು ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರ ಕಾಣಲಿದೆ.

Yashaswi Devadiga

View all posts by this author