ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhagyalakshmi Serial: 16 ವರ್ಷ ನರಕ! ಮದುವೆಗೆ ರೆಡಿಯಾದ ಭಾಗ್ಯ; ಗೆದ್ದೇ ಬಿಟ್ಟನಾ ತಾಂಡವ್‌?

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಹೊಸ ತಿರುವು ಪಡೆದುಕೊಂಡಿದೆ. ತನ್ವಿ ಹೇಳಿದ್ದಕ್ಕಾಗಿ ಭಾಗ್ಯಳನ್ನು ನಾನು ಮದುವೆ ಆಗೋದಿಲ್ಲ ಎಂದು ಆದಿ ಹೇಳಿದ್ದಾನೆ. ಇದರ ಹಿಂದೆ ಏನು ಕಾರಣ ಇದೆ ಎಂದು ಕುಟುಂಬ ತಲೆ ಕೆಡಿಸಿಕೊಂಡಿದೆ. ಇನ್ನೊಂದು ಕಡೆ ತಾಂಡವ್ ತಂದೆಗೆ ಅನಾರೋಗ್ಯ ಆಗಿದೆ. ಅಷ್ಟೇ ಅಲ್ಲ ಮಾವ ತಾಂಡವ್‌ನನ್ನು ಮದುವೆ ಆಗಬೇಕು ಅಂತ ತಾಕೀತು ಹಾಕಿದ್ದಾನೆ. ಶ್ರೇಷ್ಠ ತಾಯಿ ಆಗ್ತಿದ್ದಾಳೆ, ಈ ವಿಷಯವನ್ನು ಅವಳು ತಾಂಡವ್‌ಗೆ ಹೇಳಿದ್ದಾಳೆ. ಈ ವಿಷಯ ಏನಾದರೂ ಬಾಕಿಯವರಿಗೆ ಗೊತ್ತಾದರೆ ತಾಂಡವ್‌ ಪ್ಲ್ಯಾನ್‌ ಹಾಳಾದಂತೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮದುವೆಯದ್ದೇ ಸಮಸ್ಯೆ ಆಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ (Bhagyalakshmi Serial) ಹೊಸ ತಿರುವು ಪಡೆದುಕೊಂಡಿದೆ. ತನ್ವಿ ಹೇಳಿದ್ದಕ್ಕಾಗಿ ಭಾಗ್ಯಳನ್ನು ನಾನು ಮದುವೆ ಆಗೋದಿಲ್ಲ ಎಂದು ಆದಿ ಹೇಳಿದ್ದಾನೆ. ಇದರ ಹಿಂದೆ ಏನು ಕಾರಣ ಇದೆ ಎಂದು ಕುಟುಂಬ ತಲೆ ಕೆಡಿಸಿಕೊಂಡಿದೆ. ಇನ್ನೊಂದು ಕಡೆ ತಾಂಡವ್ ತಂದೆಗೆ ಅನಾರೋಗ್ಯ ಆಗಿದೆ. ಅಷ್ಟೇ ಅಲ್ಲ ಮಾವ ತಾಂಡವ್‌ನನ್ನು ಮದುವೆ ಆಗಬೇಕು ಅಂತ ತಾಕೀತು ಹಾಕಿದ್ದಾನೆ. ಶ್ರೇಷ್ಠ ತಾಯಿ ಆಗ್ತಿದ್ದಾಳೆ, ಈ ವಿಷಯವನ್ನು ಅವಳು ತಾಂಡವ್‌ಗೆ (Thandav) ಹೇಳಿದ್ದಾಳೆ. ಈ ವಿಷಯ ಏನಾದರೂ ಬಾಕಿಯವರಿಗೆ ಗೊತ್ತಾದರೆ ತಾಂಡವ್‌ ಪ್ಲ್ಯಾನ್‌ ಹಾಳಾದಂತೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ (Serial) ಭಾಗ್ಯ ಮದುವೆಯದ್ದೇ ಸಮಸ್ಯೆ ಆಗಿದೆ.

ಇದನ್ನೂ ಓದಿ: Amruthadhaare Serial: ಸುನಿ ಕಥೆ ಮುಗಿಸಲು ಸಂಚು ಹೂಡಿದ ಜೈದೇವ್‌! ಆನಂದ್‌ ಶಾಕ್‌

ಹೊಸ ಪ್ರೋಮೋ ಔಟ್‌

ಹೊಸ ಪ್ರೋಮೋ ಔಟ್‌ ಆಗಿದೆ. ತನ್ವಿ, ಆದಿ ಬಳಿ ತನ್ನ ತಾಯಿಯನ್ನು ಮದುವೆ ಆಗಬೇಡಿ, ಈ ಮದುವೆ ನಿಲ್ಲಿಸಿ ಎಂದು ಹೇಳಿದಳು. ಆದಿ ಕೂಡ ಮದುವೆ ಆಗೋದಿಲ್ಲ ಎಂದು ಹೇಳಿದನು. ಮೊದಲು ಭಾಗ್ಯಳನ್ನು ಪ್ರೀತಿ ಮಾಡ್ತಿದ್ದೀನಿ ಎಂದು ಹೇಳಿ, ಈಗ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದೆಲ್ಲ ನಡುವೆ ಭಾಗ್ಯ ತಾಂಡವ್‌ ಮದುವೆ ಆಗಲು ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ.

ತಾಂಡವ್‌ ತಂದೆ ಅನಾರೋಗ್ಯ ಇದ್ದ ಕಾರಣ, ಆಸ್ಪತ್ರೆಯಲ್ಲಿಯೇ ಭಾಗ್ಯಳಿಂದ ಭಾಷೆ ತೆಗೆದುಕೊಂಡಿದ್ದಾನೆ. ಭಾಗ್ಯ ಜೀವನ ಚೆನ್ನಾಗಿ ಇರಲಿ ಎಂದು ತಾಂಡವ್‌ ಜೊತೆ ಮರು ಮದುವೆ ಆಗು ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿಗೆ ಸೂಚಿಸಿದ್ದಾಳೆ. ಇದೀಗ ಭಾಗ್ಯ ಹಾಗೂ ತಾಂಡವ್‌ ಮಂಟಪಕ್ಕೆ ಬಂದಿದ್ದಾರೆ. ಶ್ರೇಷ್ಠ ತಾಯಿ ಆಗಿರೋ ವಿಚಾರ ಕೂಡ ಯಾರ ಮುಂದೆ ಹೇಳದಂತೆ ತಾಂಡವ್‌ ಹೇಳಿದ್ದಾನೆ.



ಇನ್ನು ಪ್ರೋಮೋದಲ್ಲಿಯೂ ಭಾಗ್ಯ, ಮದುವೆ ಆಗದೇ ಇರುವ ಸುಳಿವನ್ನೇ ನೀಡಿದಂತೆ ಇದೆ. ಹೀಗಾಗಿ ಭಾಗ್ಯ ಹಾಗೂ ಆದಿ ಮದುವೆ ಆಗುವ ಲಕ್ಷಣ ಇದೆ.

ತನ್ವಿ ತನ್ನ ಮನಸ್ಸು ಬದಲಾಯಿಸಿ, ತಾಯಿ-ಆದಿ ಜೊತೆಗೆ ಮದುವೆ ಮಾಡಿಸಲೂಬಹುದು. ಕೊನೇ ಕ್ಷಣದಲ್ಲಿ ತಾಂಡವ್‌ ಮುಖವಾಡವನ್ನು ಭಾಗ್ಯ ಬಿಚ್ಚಿಡಲೂಬಹುದು.

ಇದನ್ನೂ ಓದಿ: Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್! ಕಮಲ್‌ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?

ಭಾಗ್ಯಳ ಮುಂದಿನ ಹಾದಿ ಸುಗಮವಾಗಿರಲಿದೆಯೇ? ಅಥವಾ ಅವಳು ಮತ್ತೆ ತಾಂಡವ್ ಜೊತೆ ಸಂಸಾರ ಮಾಡುತ್ತಾಳಾ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.

Yashaswi Devadiga

View all posts by this author