'ಭಯ್- ದಿ ಗೌರವ್ ತಿವಾರಿ ಮಿಸ್ಟರಿ' (Bhay The Gaurav Tiwari Mystery) ಮುಂಬರುವ ಹಾರರ್-ಮಿಸ್ಟರಿ ವೆಬ್ ಸರಣಿಯಾಗಿದ್ದು (Horror), ಇದು ಭಾರತದ ಮೊದಲ ಪ್ಯಾರನಾರ್ಮಲ್ ತನಿಖಾಧಿಕಾರಿ ಗೌರವ್ ತಿವಾರಿ ಅವರ ಜೀವನವನ್ನು ಆಧರಿಸಿದೆ. ಗೌರವ್ ತಿವಾರಿ (Gaurav Tiwari) ಪ್ರಸಿದ್ಧ ಪ್ಯಾರನಾರ್ಮಲ್ ತನಿಖಾಧಿಕಾರಿಯಾಗಿದ್ದರು. 2016 ರಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈ ಕಾರಣದಿಂದಾಗಿ, ಗೌರವ್ ತಿವಾರಿ ಅವರ ಸಾವಿನ ರಹಸ್ಯವನ್ನು ಈ ಸರಣಿಯಲ್ಲಿ ಅನ್ವೇಷಿಸಲಾಗಿದೆ. ಅಲ್ಲದೆ, ಕರಣ್ ಠಾಕೂರ್ (Karan Thakur) ಮತ್ತು ಕಲ್ಕಿ ಕೋಚ್ಲಿನ್ ಈ ಸರಣಿಯಲ್ಲಿ (Series) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಿಯಲ್ ಕಥೆ
ಭಾರತದಲ್ಲಿ ಪ್ಯಾರನೆಕ್ಸಸ್ ಅನ್ನು ಪ್ರತಿನಿಧಿಸುವಲ್ಲಿ ಹೆಸರುವಾಸಿಯಾಗಿದ್ದರು. ಅವರು MTV ಗರ್ಲ್ಸ್ ನೈಟ್ ಔಟ್, ಹಾಂಟೆಡ್ ವೀಕೆಂಡ್ಸ್ ವಿಥ್ ಸನ್ನಿ ಲಿಯೋನ್ ಮತ್ತು ಫಿಯರ್ ಫೈಲ್ಸ್‌ನಂತಹ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಟಿವಿಯಲ್ಲಿ ಕಾಣಿಸಿಕೊಂಡರು. ತಿವಾರಿ ಇಂಡಿಯನ್ ಪ್ಯಾರನಾರ್ಮಲ್ ಸೊಸೈಟಿಯ ಸಿಇಒ ಮತ್ತು ಸಂಸ್ಥಾಪಕರೂ ಆಗಿದ್ದರು,
ಗೌರವ್ ತಿವಾರಿ ಜುಲೈ 7, 2016 ರಂದು ತಮ್ಮ ದ್ವಾರಕಾ ಮನೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದು ಪತ್ತೆಯಾಗಿತ್ತು. ಶವಪರೀಕ್ಷೆಯಲ್ಲಿ ಪತ್ನಿಯ ದುಪಟ್ಟಾ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೃಢಪಡಿಸಲಾಗಿತ್ತು. ಆರ್ಥಿಕ ಒತ್ತಡ ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳೊಂದಿಗೆ ಹೋರಾಡುತ್ತಿದ್ದರು ವರದಿಯಾಗಿತ್ತು.
ಟ್ರೇಲರ್ ಹೇಗಿದೆ?
ಭಯ್' ಸರಣಿಯ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಟ್ರೇಲರ್ ನಿಗೂಢತೆ, ಭಯ ಮತ್ತು ಸತ್ಯದ ಹುಡುಕಾಟವನ್ನು ತೋರಿಸುತ್ತದೆ. ಇದು ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚಿನ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕಿದೆ. ಈ ಸರಣಿಯು ನೈಜ ಘಟನೆಗಳನ್ನು ಆಧರಿಸಿದೆ ಮತ್ತು ಅನೇಕ ರೋಮಾಂಚಕ ದೃಶ್ಯಗಳು ಮತ್ತು ನಿಗೂಢ ಘಟನೆಗಳನ್ನು ಒಳಗೊಂಡಿದೆ. ಇದು ಪ್ರೇಕ್ಷಕರಿಗೆ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ಕರಣ್ ಠಾಕೂರ್ ಈ ಸರಣಿಯಲ್ಲಿ ಗೌರವ್ ತಿವಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಆದರೆ ಕಲ್ಕಿ ಕೋಚ್ಲಿನ್ ಮತ್ತು ಇತರ ನಟರು ಸಹ ಕಾಣಿಸಿಕೊಳ್ಳಲಿದ್ದಾರೆ.
ಎಲ್ಲಿ ವೀಕ್ಷಿಸಬಹುದು?
'ಭಯ್- ದಿ ಗೌರವ್ ತಿವಾರಿ ಮಿಸ್ಟರಿ' ಸರಣಿಯು ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. 'ಆಲ್ಮೈಟಿ ಮೋಷನ್ ಪಿಕ್ಚರ್ಸ್' ನಿರ್ಮಿಸಿ ರಾಬಿ ಗ್ರೆವಾಲ್ ನಿರ್ದೇಶಿಸಿದ್ದಾರೆ. ವೀಕ್ಷಕರು ಈ ಸರಣಿಯನ್ನು MX ಪ್ಲೇಯರ್ ಮತ್ತು ಅಮೆಜಾನ್‌ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.