ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare) ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜೀ ವಾಹಿನಿ ಸಂತಸದ ಸುದ್ದಿಯೊಂದನ್ನು ನೀಡಿದೆ. ಇದರಿಂದ ಅಮೃತಧಾರೆಯ ಕಟ್ಟಾ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರೇಕ್‌ಲೆಸ್ ಸಂಚಿಕೆ ಪ್ರಸಾರ ಕಾಣಲಿದೆ.
ಜಾಹೀರಾತು ಇಲ್ಲದೇ ಪ್ರಸಾರ
'ಮಿಂಚು' ಹುಡುಕಾಟಕ್ಕಾಗಿ ಭೂಮಿಕಾ ತಿರುಗಾಡುತ್ತಿದ್ದಾಳೆ. ಇತ್ತ ಪೊಲೀಸರ ಕಸ್ಟಡಿಯಲ್ಲಿರುವ ಗೌತಮ್ ಏನು ಮಾಡಲಾಗದೇ ಅಸಹಾಯಕನಾಗಿದ್ದಾನೆ. ಗೆಳೆಯನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಆನಂದ್ ಎಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾನೆ. ಸೋಮವಾರ ಮತ್ತು ಮಂಗಳವಾರ ಎರಡು ದಿನ ಅಮೃತಧಾರೆ ಸೀರಿಯಲ್ ಯಾವುದೇ ಜಾಹೀರಾತು ಇಲ್ಲದೇ ಪ್ರಸಾರವಾಗಲಿದೆ. ಸೀರಿಯಲ್‌ನ 30 ನಿಮಿಷದಲ್ಲಿ ಯಾವುದೇ ಜಾಹೀರಾತುಗಳಿರಲ್ಲ ಎಂದು ವಾಹಿನಿಯಿಂದ ಅಧಿಕೃತ ಮಾಹಿತಿ ನೀಡಿದೆ.
ಇದನ್ನೂ ಓದಿ: Drishyam 3: ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್
ಇತ್ತ ಮಿಂಚು ತಮ್ಮ ಮಗಳೆಂದು ಇಬ್ಬರು ದಿವಾನ್ ಮನೆಗೆ ಬಂದಿದ್ದಾರೆ. ಇಷ್ಟು ವರ್ಷ ಯಾರೂ ಮಗಳನ್ನು ಹುಡುಕಿಕೊಂಡು ಬಂದಿಲ್ಲ. ನಮ್ಮ ಜೊತೆ ಬೆಳೆದಳು ಅಂತ ಗೌತಮ್ ಹೇಳಿದ್ದಾನೆ. ಆದರೆ ಕಾನೂನು ಪ್ರಕಾರ ತಪ್ಪಾಗಿದ್ದರಿಂದ ಮಗು ಸಿಗೋ ತನಕ ಗೌತಮ್ ಪೊಲೀಸ್ ಕಸ್ಟಡಿಗೆ ಇರಬೇಕಾಗಿದೆ.
ಮಿಂಚು ತಮ್ಮ ಸ್ವಂತ ಮಗಳು ಎಂಬ ವಿಷಯ ತಿಳಿಯದ ಗೌತಮ್ ಜೈಲು ಸೇರಿದ್ದಾನೆ. ಮತ್ತೊಂದೆಡೆ ಶಕುನಿ ಮಾಮಾ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಒಂದು ವೇಳೆ ಮಿಂಚು ಜನ್ಮರಹಸ್ಯ ಬಯಲಾಗಿ, ಜೈದೇವ್ ಪಾತ್ರ ಕೊನೆಯಾದ್ರೆ ಅಮೃತಧಾರೆ ಸೀರಿಯಲ್ ಕೊನೆಯಾಗೋದು ಬಹುತೇಕ ಖಚಿತವಾಗಲಿದೆ.
ಭದ್ರಕಾಳಿಯಾದ್ಲು ಭೂಮಿಕಾ!
ಮಗಳನ್ನು ಕಾಪಾಡಲು ಮುಂದಾಗುವ ಭೂಮಿಕಾ ಎದುರು ಬರುವ ಪ್ರತಿಯೊಬ್ಬ ಗೂಂಡಾಗೂ ತಕ್ಕ ಶಾಸ್ತಿ ಮಾಡುತ್ತಾಳೆ. ಅಷ್ಟೇ ಅಲ್ಲ ಫೈಟ್ ಕೂಡ ಮಾಡುತ್ತಾಳೆ. ಭೂಮಿಕಾ ತನ್ನ ಮಗಳು ಮಿಂಚನ್ನು ಕಿಡ್ನ್ಯಾಪರ್‌ಗಳಿಂದ ಸುರಕ್ಷಿತವಾಗಿ ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.
ಜ್ಯೋತಿಷ್ಯರು ನುಡಿದಂತೆ ಮಗಳಿಂದ ಗೌತಮ್‌ಗೆ ಕಂಟಕ ಎದುರಾಗಿದೆ. ಗೌತಮ್ ಈಗ ಪೊಲೀಸರ ಬಳಿ ಇದ್ದು, ಮಗಳನ್ನು ಹೇಗೆ ರಕ್ಷಿಸಿಕೊಳ್ತಾನೆ? ಭೂಮಿಕಾ ಮುಂದೆ ಏನು ಮಾಡ್ತಾಳೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhare Serial: ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ! ಅನಿರೀಕ್ಷಿತ ತಿರುವಿನಲ್ಲಿ ಅಮೃತಧಾರೆ
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ