ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhuvanam Gaganam Movie: 25 ದಿನ ಪೂರೈಸಿದ ʼಭುವನಂ ಗಗನಂʼ ಚಿತ್ರ; ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭಾಗಿ

Actor Ravichandran: ಪ್ರೇಮಿಗಳ ದಿನದಂದು ತೆರೆಕಂಡ ʼರತ್ನನ್‌ ಪ್ರಪಂಚʼ ಸಿನಿಮಾ ಖ್ಯಾತಿಯ ಪ್ರಮೋದ್‌ ಹಾಗೂ ʼದಿಯಾʼ ಮೂಲಕ ಜನಪ್ರಿಯರಾದ ಪೃಥ್ವಿ ಅಂಬಾರ್‌ ನಟನೆಯ ʼಭುವನಂ ಗಗನಂʼ ಚಿತ್ರ 25 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಂಭ್ರಮಾಚರಣೆ ಅಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮುಖ್ಯ ಅತಿತಿಯಾಗಿ ಪಾಲ್ಗೊಂಡಿದ್ದರು.

25 ದಿನ ಪೂರೈಸಿದ ʼಭುವನಂ ಗಗನಂʼ ಚಿತ್ರ

Profile Ramesh B Mar 19, 2025 1:48 PM

ಬೆಂಗಳೂರು: ʼರತ್ನನ್‌ ಪ್ರಪಂಚʼ ಸಿನಿಮಾ ಖ್ಯಾತಿಯ ಪ್ರಮೋದ್‌ (Pramod) ಹಾಗೂ ʼದಿಯಾʼ ಮೂಲಕ ಜನಪ್ರಿಯರಾದ ಪೃಥ್ವಿ ಅಂಬಾರ್‌ (Pruthvi Amber) ನಟನೆಯ ʼಭುವನಂ ಗಗನಂʼ ಚಿತ್ರ (Bhuvanam Gaganam Movie) 25 ದಿನ ಪೂರೈಸಿದೆ. ಪ್ರೇಮಿಗಳ ದಿನದಂದು ತೆರೆಕಂಡ ಈ ಸಿನಿಮಾ ಇದೀಗ ಆಫ್‌ ಸೆಂಚುರಿಯತ್ತ ಸಾಗುತ್ತಿದೆ. ಕನ್ನಡ ಚಿತ್ರರಂಗ ಸದ್ಯದ ಪರಿಸ್ಥಿತಿ ನಡುವೆಯೂ ʼಭುವನಂ ಗಗನಂʼ ಚಿತ್ರ 25 ದಿನ ಪೂರೈಸಿದೆ. ಈ ಸಂತಸದ ಕ್ಷಣಗಳನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ʼಭುವನಂ ಗಗನಂʼ ಚಿತ್ರದ 25 ದಿನದ ಸಂಭ್ರಮಾಚರಣೆಗೆ ಹಮ್ಮಿಕೊಳ್ಳಲಾಗಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌ (Actor Ravichandran) ಈ ಕಾರ್ಯಕ್ರಮಕ್ಕೆ ಸಾಕ್ಷಿದರು. ನಿರ್ದೇಶಕರಾದ ಸಿಂಪಲ್‌ ಸುನಿ, ಚೇತನ್‌ ಕುಮಾರ್‌, ನಟ ನೆನಪಿರಲಿ ಪ್ರೇಮ್ ಹಾಗೂ ಇಡೀ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಾತನಾಡಿ, ʼʼಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯಕ್ಕೆ ನಗುನೇ ಇಲ್ಲ. ಆದರೆ ಇಲ್ಲಿ ನಗುತ್ತಿದ್ದೇವೆ. ಆ ನಗು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಜನ ಥಿಯೇಟರ್‌ಗೆ ಬರುತ್ತಿಲ್ಲ ಅಂತಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದರೆ ಜನ ಥಿಯೇಟರ್‌ ಒಳಗೆ ಬಂದೇ ಬರುತ್ತಾರೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಆ ಮುಖ ಬೇಕು, ಈ ಬೇಕು ಅನ್ನೋದು ಏನೂ ಬೇಡ. ಚೆನ್ನಾಗಿದ್ದರೆ ನೋಡುತ್ತಾರೆ ಎನ್ನುವುದಕ್ಕೆ ʼಪ್ರೇಮಲೋಕʼ ಸಿನಿಮಾವೇ ಉತ್ತಮ ಉದಾಹರಣೆʼʼ ಎಂದರು.

ʼಭುವನಂ ಗಗನಂʼ ಚಿತ್ರದ ಟ್ರೈಲರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Firefly Movie: ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ರಿಲೀಸ್‌ಗೆ ರೆಡಿ; ಡಾ.ರಾಜ್ ಜನ್ಮೋತ್ಸವಕ್ಕೆ ʼಫೈರ್ ಫ್ಲೈʼ ಬಿಡುಗಡೆ

ಮುಂದುವರಿದು, ʼʼವಾರಕ್ಕೆ 40 ಸಿನಿಮಾ ಬಂದರೆ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಚಿತ್ರರಂಗದಲ್ಲಿ ನಗುವಿನ ವಾತಾವರಣ ಬೇಕು. ನಾವು ಶೀಲ್ಡ್‌ ನೋಡುವುದನ್ನೇ ಮರೆತುಬಿಟ್ಟಿದ್ದೇವೆ. ಈಗ 25 ದಿನಕ್ಕೆ ಶೀಲ್ಡ್‌ ಶುರುವಾಗಿದೆ. ಆಗ 24 ವಾರಕ್ಕೆ ಶೀಲ್ಡ್‌ ಇತ್ತು. ನಿಮ್ಮ ಪಯಣ ಹೀಗೆ ಸಾಗಲಿʼʼ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಚಿತ್ರದಲ್ಲಿ ರೆಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಿರೀಶ್ ಮೂಲಿಮನಿ ಈ ಸಿನಿಮಾ ನಿರ್ದೇಶನ ಮಾಡಿದ್ದು ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ.