ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಭಾರತ ಸೇರಿದಂತೆ ಹಲವು ವ್ಯಾಪಾರ ಪಾಲುದಾರರ ವಿರುದ್ಧ ತನಿಖೆ ಆರಂಭಿಸಿದ ಅಮೆರಿಕ

ಅಮೆರಿಕದ ಸುಂಕ ಹೊಡೆತದ ನಡುವೆಯೂ ಏಕಾಏಕಿ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ವ್ಯಾಪಾರ ಪಾಲುದಾರ ರಾಷ್ಟ್ರಗಳ ವಿರುದ್ಧ ಅಮೆರಿಕ ತನಿಖೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಭಾರತವೂ ಸೇರಿದೆ. ಭಾರತವು 58 ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ಹೆಚ್ಚುವರಿ ಮಾಡಿಕೊಂಡಿರುವುದನ್ನು ತನಿಖೆ ಆದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಪ್ರಶ್ನಿಸಿದೆ.

ಭಾರತದ ವಿರುದ್ಧ ತನಿಖೆ ಆರಂಭಿಸಿದ ಅಮೆರಿಕ

ಸಂಗ್ರಹ ಚಿತ್ರ -

ನವದೆಹಲಿ: ಭಾರತದ (India) ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿರುವ ಅಮೆರಿಕ (america), ಈ ಕುರಿತು ತನಿಖೆಗೆ ಆದೇಶಿಸಿದೆ. ಅಮೆರಿಕದ ಭಾರಿ ಸುಂಕ (Us tariff) ಹೊಡೆತದ ನಡುವೆಯೂ ಏಕಾಏಕಿ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ವ್ಯಾಪಾರ ಪಾಲುದಾರ (Trading partners) ರಾಷ್ಟ್ರಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಆಡಳಿತವು, ಭಾರತವು ಸರಿಸುಮಾರು 5.35 ಲಕ್ಷ ಕೋಟಿ ರೂ. ಮೌಲ್ಯದ ವ್ಯಾಪಾರ ಹೆಚ್ಚುವರಿ (Trade Surplus) ಮಾಡಿಕೊಂಡಿರುವುದನ್ನು ಪ್ರಶ್ನಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದ ಭಾರತ ಸುಮಾರು 58 ಬಿಲಿಯನ್ ಡಾಲರ್ ಅಂದರೆ 5.35 ಲಕ್ಷ ಕೋಟಿ ರೂ. ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಿರುವ ಪುರಾವೆಗಳನ್ನು ಹೊಂದಿದೆ ಎಂದು ಅಮೆರಿಕ ಹೇಳಿದೆ.

Basmati rice exports fall: ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ

ಭಾರತ ಸೇರಿದಂತೆ ಹಲವು ವ್ಯಾಪಾರ ಪಾಲುದಾರರಿಗೆ ವಿಧಿಸಲಾಗಿದ್ದ ಅಮೆರಿಕದ ಹೆಚ್ಚುವರಿ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿದ ಬಳಿಕ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಗುರುವಾರ ಭಾರತ ಮತ್ತು ಇತರ 15 ಪ್ರಮುಖ ವ್ಯಾಪಾರ ಪಾಲುದಾರರ ವಿರುದ್ಧ ಅನ್ಯಾಯದ ವ್ಯಾಪಾರ ಚಟುವಟಿಕೆಗಳಿಗಾಗಿ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಲು ಆದೇಶಿಸಿದೆ.

ಇದರಲ್ಲಿ ಕೆಲವು ಉತ್ಪಾದನಾ ವಲಯಗಳಲ್ಲಿ ಏಕಾಏಕಿ ಹೆಚ್ಚುವರಿ ಸಾಮರ್ಥ್ಯ ಪ್ರದರ್ಶನ ಮತ್ತು ಉತ್ಪಾದನೆಗೆ ಸಂಬಂಧಿಸಿದ ಕೆಲವು ಆರ್ಥಿಕತೆಗಳ ಕಾಯಿದೆಗಳು, ನೀತಿಗಳ ಕುರಿತು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ 1974ರ ವ್ಯಾಪಾರ ಕಾಯಿದೆಯ ಸೆಕ್ಷನ್ 301 ರ ಅಡಿಯಲ್ಲಿ ತನಿಖೆಗಳನ್ನು ಪ್ರಾರಂಭಿಸಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವ್ಯಾಪಾರ ಪಾಲುದಾರರು ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಒಂದೇ ಎಂದು ಪರಿಗಣಿಸಿ ಉತ್ಪಾದನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇದು ಅತಿಯಾದ ಉತ್ಪಾದನೆಗೆ ಕಡಿಮೆ ಸಾಮರ್ಥ್ಯ ಬಳಕೆಯನ್ನು ತೋರಿಸುತ್ತದೆ. ಭಾರತದಲ್ಲಿ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದಕ್ಕೆ ಪುರಾವೆಗಳಿವೆ ಎಂದು ಹೇಳಿರುವ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್, ಭಾರತದ ಜಾಗತಿಕ ಸರಕುಗಳ ವ್ಯಾಪಾರ ಹೆಚ್ಚುವರಿ ವಲಯಗಳಲ್ಲಿ ಜವಳಿ, ಆರೋಗ್ಯ, ನಿರ್ಮಾಣ ಸರಕುಗಳು ಮತ್ತು ಆಟೋಮೋಟಿವ್ ಸರಕುಗಳು ಸೇರಿವೆ. ಸೌರ ಮಾಡ್ಯೂಲ್ ವಲಯದಲ್ಲಿ ಉತ್ಪಾದನೆಯು ವಾರ್ಷಿಕ ದೇಶೀಯ ಬೇಡಿಕೆಯ ಮೂರು ಪಟ್ಟು ಹೆಚ್ಚಾಗಿದೆ. ಭಾರತವು ಪೆಟ್ರೋಕೆಮಿಕಲ್ಸ್, ಉಕ್ಕು ಮತ್ತು ಇತರ ಕೈಗಾರಿಕೆಗಳಲ್ಲಿ ಗಮನಾರ್ಹ ಹೆಚ್ಚುವರಿಯಾಗಿದೆ ಎಂದು ಹೇಳಿದೆ.

ಭಾರತಕ್ಕೆ ಮಾತ್ರ ಹಾರ್ಮೊಜ್‌ ಜಲಸಂಧಿ ತೆರವುಗೊಳಿಸಿದ ಇರಾನ್‌; ವಿದೇಶಾಂಗ ಸಚಿವರ ಮಾತುಕತೆ ಬೆನ್ನಲ್ಲೇ ಮಹತ್ವದ ಘೋಷಣೆ!

ಇದರೊಂದಿಗೆ ಚೀನಾ, ಯುರೋಪಿಯನ್ ಯೂನಿಯನ್, ಸಿಂಗಾಪುರ್, ಸ್ವಿಟ್ಜರ್ಲೆಂಡ್, ನಾರ್ವೆ, ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥೈಲ್ಯಾಂಡ್, ಕೊರಿಯಾ, ವಿಯೆಟ್ನಾಂ, ತೈವಾನ್, ಬಾಂಗ್ಲಾದೇಶ, ಮೆಕ್ಸಿಕೊ ಮತ್ತು ಜಪಾನ್ ವಿರುದ್ದವೂ ತನಿಖೆಗೆ ಆದೇಶಿಸಿರುವ ಅಮೆರಿಕ, ವಿಚಾರಣೆಯ ಬಳಿಕ ಸುಂಕದ ಕುರಿತು ಪರಿಗಣಿಸುವುದಾಗಿ ಹೇಳಿದೆ.