ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dog Satish: ಶ್ವಾನಗಳ ಬಗ್ಗೆ ಡಾಗ್ ಸತೀಶ್ ಕೆಟ್ಟ ಮಾತು; ದಾಖಲಾಯ್ತು ದೂರು

Satish Cadaboms : ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಡಾಗ್‌ ಸತೀಶ್‌ ವಿರುದ್ಧ ದೂರು ದಾಖಲಾಗಿದೆ. ಶ್ವಾನ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ ಕೇಳಿದ ಪ್ರಶ್ನೆಗೆ ಅಸಭ್ಯ ಉತ್ತರವನ್ನು ಸತೀಶ್‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಡಾಗ್ ಸತೀಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಾಗ್‌ ಸತೀಶ್‌

ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಡಾಗ್‌ ಸತೀಶ್‌ (Dog Satish) ವಿರುದ್ಧ ದೂರು ದಾಖಲಾಗಿದೆ. ಶ್ವಾನ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ (Subhash) ಕೇಳಿದ ಪ್ರಶ್ನೆಗೆ ಅಸಭ್ಯ ಉತ್ತರವನ್ನು ಸತೀಶ್‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಡಾಗ್ ಸತೀಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Rakshit Shetty: ಏಕಾಏಕಿ ಬೇಸರದ ಫೋಟೋ ಪೋಸ್ಟ್‌ ಮಾಡಿದ ರಕ್ಷಿತ್ ಶೆಟ್ಟಿ!

ವೈರಲ್ ಆದ ಈ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಟಾಟ್ ಸುಭಾಷ್ (ಸುಭಾಷ್ ಪ್ರಜಾಪತ್)ಅವರ ಜೊತೆ ಡಾಗ್ ಸತೀಶ್ ತೀರಾ ಅಸಹ್ಯ ಮತ್ತು ಅಸಭ್ಯವಾಗಿ ನಾಯಿಯ ಬಗ್ಗೆ ಮಾತನಾಡಿದ್ದಾರೆ.

ಅಸಹ್ಯವಾಗಿ ಉತ್ತರ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅವರು ತಮ್ಮನ್ನು ತಾವು ಡಾಗ್ ಬ್ರೀಡರ್ ಎಂದು ಕರೆದುಕೊಂಡಿದ್ದಾರೆ. ನಾಯಿಯ ಮಿಲನದ ಕುರಿತು ಸುಭಾಷ್, ಡಾಗ್ ಸತೀಶ್ ಅವರಲ್ಲಿ ಅಸಹ್ಯಕರವಾಗಿ ಪ್ರಶ್ನೆಯನ್ನು ಕೇಳಿದ್ದರೆ, ಡಾಗ್ ಸತೀಶ್ ಇನ್ನೂ ತೀರಾ ಅಸಹ್ಯವಾಗಿ ಉತ್ತರವನ್ನು ನೀಡಿದ್ದಾರೆ. ಡಾಗ್ ಸತೀಶ್ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ.

ಇಂತಹ ಮಾತುಗಳಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿರುವ ಲಕ್ಷ್ಮಿ, ಯುವಜನತೆ ಮತ್ತು ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.



ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ವೇಳೆ ಆರೋಪಿಗಳಾದ ಟಾಟ್ ಸುಭಾಷ್ ಮತ್ತು ಡಾಗ್ ಸತೀಶ್ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಮೆಟಾ/ಫೇಸ್‌ಬುಕ್ ಸಂಸ್ಥೆಗೆ ನೋಟಿಸ್ ನೀಡಬೇಕು ಎಂದು ಕೂಡ ಆಗ್ರಹಿಸಲಾಗಿದೆ.

ಒಬ್ಬ ಡಾಗ್ ಬ್ರೀಡರ್. ನಿಮಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಹಲವರು ಡಾಗ್ ಸತೀಶ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಇದನ್ನೂ ಓದಿ: Dog Satish: ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ಕಬಾಬ್ ತಿಂದಿದ್ದೆ; ಡಾಗ್‌ ಸತೀಶ್‌ ಹೊಸ ವಿವಾದ

ಇತ್ತೀಚೆಗೆ ಮೂತ್ರ ಮಾಡುವಾಗಿನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಸತೀಶ್, ಅದಕ್ಕೆ ಸುದೀಪ್ ಹಾಡು ಹಾಕಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಡಾಗ್‌ ಸತೀಶ್‌.

Yashaswi Devadiga

View all posts by this author