ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಲವ್‌ ಮಾಕ್ಟೇಲ್‌ʼ ಆಯ್ತು, ಈಗ 'ಲವ್ ಕಾಕ್ಟೇಲ್' ಕುಡಿಸಲು ಬಂದ ನಟ ಹರೀಶ್ ರಾಜ್; ಈ ಬಾರಿ ಪ್ಲೇಬಾಯ್‌ ಆಗಿ ಮಿಂಚಿಂಗ್!‌

ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಅನುಭವ ಹೊಂದಿರುವ ನಟ ಹಾಗೂ ನಿರ್ದೇಶಕ ಹರೀಶ್ ರಾಜ್ ಅಭಿನಯದ ‘ಲವ್ ಕಾಕ್ಟೇಲ್’ ಚಿತ್ರದ ಮೇಕಿಂಗ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಲವ್ ಫೇಲ್ಯೂರ್ ಆದ ನಂತರವೂ ಜೀವನವನ್ನು ಜಾಲಿಯಾಗಿ ಹೇಗೆ ಕಳೆಯಬಹುದು ಎಂಬುದನ್ನು ಪ್ಲೇ ಬಾಯ್ ಶೈಲಿಯಲ್ಲಿ ಹೆಣೆದಿರುವ ಈ ಚಿತ್ರಕ್ಕೆ ಜನಾರ್ಧನ್ ಪಿ ಬಂಡವಾಳ ಹೂಡಿದ್ದಾರೆ.

ಹರೀಶ್ ರಾಜ್ ಅವರನ್ನು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನೋಡಿ ಮೆಚ್ಚಿಕೊಂಡ ಅಪಾರ ಅಭಿಮಾನಿಗಳಿದ್ದಾರೆ. ಇಷ್ಟು ದಿನ ನಾವು-ನೀವು ನೋಡಿದ ಹರೀಶ್ ರಾಜ್ ಅವರೇ ಬೇರೆ, ಈಗ ಅವರು ‘ಪ್ಲೇ ಬಾಯ್’ ಆಗಿ ಕಾಡಲು ಬಂದಿದ್ದಾರೆ. ‘ಲವ್ ಕಾಕ್ಟೇಲ್’ ಹಿಡಿದು ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ʻಲವ್ ಕಾಕ್ಟೇಲ್ʼ ಸಿನಿಮಾದ ಮೇಕಿಂಗ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಹರೀಶ್ ರಾಜ್ ತಮ್ಮ ಹೊಸ ಸಿನಿಮಾಗೆ ಪ್ರಚಾರ ಆರಂಭಿಸಿದ್ದಾರೆ.

ಚಿತ್ರರಂಗಕ್ಕೆ ಬಂದು 30 ವರ್ಷ ಆಯ್ತು

ವಿಶೇಷವಾಗಿ, ಲವ್ ಫೇಲ್ಯೂರ್ ಆದರೆ ಏನಂತೆ, ಜೀವನವನ್ನು ಹೇಗೆ ಜಾಲಿಯಾಗಿ ಕಳೆಯಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿಕೊಡಲಾಗಿದೆಯಂತೆ. ಈ ಚಿತ್ರಕ್ಕೆ ಅವರೇ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ.

ಈ ಕುರಿತು ಮಾತನಾಡುವ ಹರೀಶ್ ರಾಜ್, "ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ, ನನಗೀಗ 50 ವರ್ಷ. ಈ ಸಂತಸವನ್ನು ಎಲ್ಲರ ಜೊತೆಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಹಿರಿಯ ನಟ ಉಮೇಶ್ ಅಣ್ಣ ಒಳ್ಳೆಯ ಪಾತ್ರ ಮಾಡಿದ್ದರು, ಆದರೆ ಇಂದು ಅವರು ನಮ್ಮೊಂದಿಗಿಲ್ಲ. ನಟಿ ಅಭಿನಯ ಮೇಡಂ ಜೊತೆಗೆ ಈ ಹಿಂದೆ ಒಂದು ಕಾಮಿಡಿ ಪಾತ್ರ ಮಾಡಿದ್ದೆ, ಇಂದು ಮತ್ತೆ ಒಟ್ಟಿಗೆ ನಟಿಸಿದ್ದೇವೆ. ಉಮಾಶ್ರೀ ಅಮ್ಮ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಮೊದಲು 'ವೆಂಕಟೇಶಾಯ ನಮಃ' ಎಂದು ಶೀರ್ಷಿಕೆ ಇಡಲು ಅಂದುಕೊಂಡಿದ್ದೆವು. ಸೆನ್ಸಾರ್ ಮಂಡಳಿಯವರು ಚಿತ್ರವನ್ನು ಹೊಗಳಿದರು. ನಂತರ ಶೀರ್ಷಿಕೆಯನ್ನು ಬದಲಾಯಿಸಿದೆವು" ಎಂದಿದ್ದಾರೆ.

ನಿರ್ಮಾಪಕ ಜನಾರ್ಧನ್ ಪಿ ಮಾತನಾಡಿ, "ನಿರ್ಮಾಪಕ ಎನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ಜವಾಬ್ದಾರಿಯನ್ನೂ ಹರೀಶ್ ರಾಜ್ ಅವರೇ ವಹಿಸಿಕೊಂಡು ನಿಭಾಯಿಸಿದ್ದಾರೆ. 'ಸಮಯ ಮಾಡಿಕೊಂಡು ಬಂದು ಹೋಗಿ' ಎಂದುಷ್ಟೇ ಹೇಳುತ್ತಿದ್ದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ, ನೋಡಿ ಹಾರೈಸಿ" ಎಂದರು.

Umashree: ಡಾ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌, ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟ; ಉಮಾಶ್ರೀಗೆ ಗೌರವ

ಮುಖ್ಯಪಾತ್ರದಲ್ಲಿ ನಟಿ ಅಭಿನಯ

"ಹರೀಶ್ ಮತ್ತು ನಾನು 'ಹೋಗ್ಲಿ ಬಿಡಿ ಸರ್' ಎಂಬ ಹಾಸ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದೆವು. ಆವಾಗಲೇ ಅವರ ಎನರ್ಜಿ ನೋಡಿ 'ನೀವು ಹೀರೋ ಆಗಬಹುದು' ಎಂದಿದ್ದೆ. ಆಮೇಲೆ ಅವರು ಹೀರೋ ಆಗಿ ಮಿಂಚಿದರು. 'ಏನ್ ಹರೀಶ್, ನಮ್ಮನ್ನೆಲ್ಲಾ ಸಿನಿಮಾದಲ್ಲಿ ಹಾಕಿಕೊಳ್ಳುವುದೇ ಇಲ್ಲ' ಎಂದು ಒಮ್ಮೆ ಕೇಳಿದ್ದೆ. ಅದಾಗಿ ಎಷ್ಟೋ ದಿನಗಳ ನಂತರ ಕರೆ ಮಾಡಿ ಈ ಪಾತ್ರ ನೀಡಿದರು" ಎಂದರು ನಟಿ ಅಭಿನಯ.

‘ಲವ್ ಕಾಕ್ಟೇಲ್’ ಸಿನಿಮಾವನ್ನು 'ಶ್ರೀ ಲಕ್ಷ್ಮೀ ಜನಾರ್ಧನ' ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ಅವರು ನಿರ್ಮಿಸಿದ್ದು, ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ, ಜೀವನ್ ಪ್ರಕಾಶ್ ಸಂಕಲನ ಹಾಗೂ ರಾಜಾ ಶಿವಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಮುಂತಾದವರು ಈ ಚಿತ್ರದಲ್ಲಿದ್ದಾರೆ.