ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Spandana Somanna: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ ಸೋಮಣ್ಣ ಜೋಡಿ

Spandana Somanna: ಕಿರುತೆರೆ ನಟಿ ಹಾಗೂ ‘ಬಿಗ್ ಬಾಸ್’ (Bigg Boss Kannada 13) ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಹುಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಪಂದನಾ, ಮದುವೆಯ ಪೂರ್ವ ಶಾಸ್ತ್ರಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈಗಾಗಲೇ ನಡೆದಿರುವ ಹಳದಿ ಶಾಸ್ತ್ರದ (Haladi) ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಸ್ಪಂದನಾ ಸೋಮಣ್ಣ

ಕಿರುತೆರೆ ನಟಿ ಹಾಗೂ ‘ಬಿಗ್ ಬಾಸ್’ (Bigg Boss Kannada 13) ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಹುಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಪಂದನಾ, ಮದುವೆಯ ಪೂರ್ವ ಶಾಸ್ತ್ರಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈಗಾಗಲೇ ನಡೆದಿರುವ ಹಳದಿ ಶಾಸ್ತ್ರದ (Haladi) ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಸ್ಪಂದನಾ-ವರುಣ್ ಜೋಡಿ!

ಸ್ಪಂದನಾ ಸೋಮಣ್ಣ ಅವರ ಮನೆಯಲ್ಲಿ ಮದುವೆಯ ಶಾಸ್ತ್ರಗಳು ಸಾಂಪ್ರದಾಯಿಕವಾಗಿ ಹಾಗೂ ಸಂಭ್ರಮದಿಂದ ಆರಂಭವಾಗಿವೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಸ್ಪಂದನಾ ಮತ್ತು ವರುಣ್ ಪರಸ್ಪರ ಅರಿಶಿನ ಹಚ್ಚಿಕೊಂಡು ಮದುವೆಯ ಸಂಭ್ರಮವನ್ನು ಖುಷಿಯಿಂದ ಆಚರಿಸಿದ್ದಾರೆ.

ಇದನ್ನೂ ಓದಿ: Shah Rukh: ಕಿಂಗ್ ಚಿತ್ರದ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ಕರೀನಾ ಭರ್ಜರಿ ಸ್ಟೆಪ್ಸ್

ಹಳದಿ ಶಾಸ್ತ್ರದ ವೇಳೆ ಕುಟುಂಬದವರು ಹಾಗೂ ಸ್ನೇಹಿತರು ನವಜೋಡಿಯೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಶಾಸ್ತ್ರದ ನಡುವೆ ನಡೆದ ಸಣ್ಣಪುಟ್ಟ ಆಟಗಳು ಮತ್ತು ನಗು-ಸಂಭ್ರಮ ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿವೆ.



ಆರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ!

ಸ್ಪಂದನಾ ಮತ್ತು ವರುಣ್ ಮುನಿರಾಜು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕಳೆದ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಪ್ಯಾರಿಸ್‌ನ ಐಫೆಲ್ ಟವರ್ ಎದುರು ವರುಣ್ ಸ್ಪಂದನಾಗೆ ಪ್ರಪೋಸ್ ಮಾಡಿದ್ದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಇದೀಗ ಹಲವು ವರ್ಷಗಳ ಪ್ರೀತಿಯ ಪಯಣ ಮದುವೆಯ ಹಂತಕ್ಕೆ ತಲುಪಿದೆ. ಮದುವೆಯ ಸಂಭ್ರಮದಲ್ಲಿರುವ ಈ ಜೋಡಿ ತಮ್ಮ ಪ್ರೀತಿಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಸಂತಸ ಹಂಚಿಕೊಂಡಿದ್ದಾರೆ. ಹಳದಿ ಶಾಸ್ತ್ರದ ವಿಡಿಯೋದಲ್ಲಿನ ಅವರ ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ.

ಸಂಗೀತ್ ಕಾರ್ಯಕ್ರಮದಲ್ಲೂ ಜೋಡಿಯ ಭರ್ಜರಿ ಡ್ಯಾನ್ಸ್!

ಹಳದಿ ಶಾಸ್ತ್ರದ ಜೊತೆಗೆ ಸಂಗೀತ್ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿದೆ. ಸಂಗೀತ ಕಾರ್ಯಕ್ರಮದಲ್ಲಿ ಸ್ಪಂದನಾ ಮತ್ತು ವರುಣ್ ಒಟ್ಟಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಈ ವೇಳೆ ಸ್ಪಂದನಾ ಭಾವುಕರಾಗಿರುವ ಕ್ಷಣಗಳೂ ವಿಡಿಯೋದಲ್ಲಿ ಸೆರೆಯಾಗಿವೆ.

ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನವಜೋಡಿ ಸಂಭ್ರಮಿಸಿರುವ ದೃಶ್ಯಗಳು ಮದುವೆ ಮನೆಯ ಖುಷಿಯನ್ನು ಹೆಚ್ಚಿಸಿವೆ. ಸ್ಪಂದನಾ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನವಜೋಡಿಯ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: Gowri Putra Serial: ಏನೇ ಮಾಡೋದಕ್ಕೆ ಹೋದ್ರೂ ಎಡವಟ್ಟಲ್ಲೇ ಕೊನೆಯಾಗ್ತಿದೆ ಕಾರ್ತಿಕ್‌ ಬಾಳು!

ಆರು ವರ್ಷಗಳ ಪ್ರೀತಿಯ ಬಳಿಕ ಮದುವೆಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಪಂದನಾ ಸೋಮಣ್ಣ ಮತ್ತು ವರುಣ್ ಮುನಿರಾಜು ಜೋಡಿಯ ಮದುವೆ ಸಂಭ್ರಮ ಅಭಿಮಾನಿಗಳಲ್ಲೂ ಖುಷಿ ಮೂಡಿಸಿದೆ. ಇವರ ಮದುವೆಯ ಮುಂದಿನ ಶಾಸ್ತ್ರಗಳ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Yashaswi Devadiga

View all posts by this author