ವೀಕೆಂಡ್ ಬಂತು ಅಂದ್ರೆ ಕಿಚ್ಚ ಸುದೀಪ್ (Kichcha sudeep) ಅವರು ಸ್ಪರ್ಧಿಗಳಿಗೆ ಟಾಸ್ಕ್ ನೀಡುವುದು ಹಾಗೇ ಕ್ಲಾಸ್ ಜೊತೆಗೆ ಪಾಠವನ್ನೂ ಕಲಿಸುತ್ತಾರೆ. ಕಾಕ್ರೂಚ್ ಸುಧಿ (cockroach sudhi) ಅವರಿಗೆ ಪಾಠ ಕಲಿಸಲು ಸುದೀಪ್ ಸ್ಮೋಕಿಂಗ್ ರೂಂಗೆ (Smoking Room) ಬೀಗ ಹಾಕಿಸಲು ಹೇಳಿದ್ದಾರೆ. ಸಿಗರೇಟು ಸೇದವವರಿಗಾಗಿ ಒಂದು ಪ್ರತ್ಯೇಕ ಸ್ಮೋಕಿಂಗ್ ರೂಂ ಅನ್ನು ಸಹ ಬಿಗ್ಬಾಸ್ ಮನೆಯಲ್ಲಿ ಮಾಡಿರುತ್ತಾರೆ. ಅದಕ್ಕೀಗ ಎರಡು ವಾರಗಳ ಕಾಲ ( Bigg Boss House smoking house) ಬೀಗ ಹಾಕಿಸಿದ್ದಾರೆ. ಕಾರಣವಾದ್ರೂ ಏನು?
ಅಗ್ನಿ ಮೂಲೆ ಬಂದ್!
ಈ ಅಗ್ನಿ ಮೂಲೆಯನ್ನ ಬಂದ್ ಮಾಡಿ ಅಂತ ಬಿಗ್ ಬಾಸ್ ಅವರಿಗೆ ಸುದೀಪ್ ಕೇಳಿದ್ದಾರೆ. ಕಾಕ್ರೋಚ್ ಸುಧಿ ಸಿಗರೇಟ್ ಸೇದುತ್ತಾರೆ. ಇದು ಇಲ್ಲದೆ ಇವರಿಗೆ ಸಾಧ್ಯವೇ ಇಲ್ಲ. ಒಂದು ವೇಳೆ ಕಳಪೆ ಕೊಟ್ಟು ಜೈಲಿಗೆ ಕಳಿಸಿದ್ರೆ ಸಿಗರೇಟ್ ಸೇದುವುದು ಕಷ್ಟ ಆಗುತ್ತೆ ಅಂತ ಗಿಲ್ಲಿ ಅವರ ಹೆಸರು ತೆಗೆದುಕೊಂಡೆ ಎಂದು ಸುಧಿ ಹೇಳಿದ್ದಾರೆ.
ಇದನ್ನೂ ಓದಿ: BBK 12: ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್; ಮನೆಯ ಪತ್ರ ನುಚ್ಚುನೂರು!
ಸುದೀಪ್ ಆ ಕೂಡಲೇ ನಿರ್ಧಾರ
ಕಾಕ್ರೋಚ್ ಸುಧಿ ಮಾತು ಕೇಳಿದ್ಮೇಲೆ ಸುದೀಪ್ ಆ ಕೂಡಲೇ ಒಂದು ನಿರ್ಧಾರ ತೆಗೆದುಕೊಂಡರು. ಬಿಗ್ ಬಾಸ್ ಇನ್ಮುಂದೆ ಎರಡು ವಾರ ಸ್ಮೋಕಿಂಗ್ ಝೋನ್ ಬಂದ್ ಮಾಡಿ ಅಂತಲೇ ಹೇಳಿದರು.
ಕಾಕ್ರೂಚ್ ಸುಧಿ ಸಹ ಈ ವಾರ ಅಷ್ಟೊಂದು ಆಕ್ಟಿವ್ ಇರಲಿಲ್ಲ. ಬೇರೆಯವರ ಹಣ್ಣುಗಳನ್ನು ಕಳ್ಳತನ ಮಾಡಿ ತಿಂದುಕೊಂಡು ಓಡಾಡಿಕೊಂಡು ಇದ್ದರು. ಸುದೀಪ್ ಅವರು, ಸುಧಿ, ಹಣ್ಣು ಕದ್ದು ತಿಂದ ವಿಡಿಯೋ ಅನ್ನು ಸಹ ಪ್ಲೇ ಮಾಡಿದರು.
ಅಷ್ಟೇ ಅಲ್ಲ ರಕ್ಷಿತಾಗೆ ಒಂದು ಮಾತನ್ನ ಹೇಳಿದರು. ರಕ್ಷಿತಾ ಅವರ ಪೇರಳೆ ಹಣ್ಣನ್ನು ತಿಂದ ಸುಧಿ ಅವರಿಗೆ ಸುದೀಪ್ ಖಡಕ್ ಆಗಿ ಮಾತನಾಡಿದರು. ಸುಧಿ ಅವರಿಗೆ ಬಂದಂತಹ ಚೈನ್‌ವನ್ನು ಕದಿಯಿರಿ ಎಂದು ರಕ್ಷಿತಾ ಅವರಿಗೆ ಹೇಳಿದ್ದಾರೆ ಸುದೀಪ್. ಒಂದು ವಾರದಲ್ಲಿಯೇ ಈ ಒಂದು ಪವರ್ ಅನ್ನ ರಕ್ಷಿತಾ ಶೆಟ್ಟಿ ಕದಿಯಬೇಕು ಅಂತಲೂ ಸುದೀಪ್ ಹೇಳಿದ್ದಾರೆ.
ಕಳಪೆ ಪಟ್ಟದಿಂದ ಜಸ್ಟ್ ಮಿಸ್
ಕಳಪೆ ಪಟ್ಟದಿಂದ ನೀವು ಜಸ್ಟ್ ಮಿಸ್ ಆಗಿದ್ದೀರಿ ಅಂತಲೂ ಸುದೀಪ್ ಹೇಳಿದ್ದಾರೆ. ಸುದೀಪ್ ಅವರು ಸುಧಿ ಅವರಿಗೆ ಪ್ರಶ್ನೆ ಇಡುತ್ತಾರೆ. ಗಿಲ್ಲಿ ಕಳಪೆಗೆ ಅರ್ರಾಗಿದ್ದರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸುಧಿ, ಖಂಡಿತ ಇಲ್ಲ. ಪಾಪ ಗಿಲ್ಲಿ ಕಳಪೆ ಹುಡುಗ ಅಲ್ಲ, ಅವರು ಎಂದೂ ಕಳಪೆ ಆಗುವ ಕೆಲಸ ಮಾಡಲ್ಲʼಎಂದರು. ಮತ್ತೇಕೆ ಕಳಪೆ ಕೊಟ್ಟಿರಿ? ಎಂದು ಸುದೀಪ್ ಪ್ರಶ್ನೆ ಹಾಕಿದರು.
ಅಗ್ನಿ ಮೂಲೆಗೆ ಬೀಗ
ಸುಧಿ ಕೊಟ್ಟ ಕಾರಣ ಮಜವಾಗಿತ್ತು. ಜೈಲಿಗೆ ಹೋಗಲು ಭಯವೇನಿಲ್ಲ. ಆದರೆ ಬಾತ್‌ರೂಮ್‌ಗಷ್ಟೇ ಬಿಡ್ತಾರೆ. ಅದು ಕೂಡ ಮಾಳು ಬಾತ್ರೂಂಗೆ ಬಿಟ್ಟರೆ ಇನ್ಯಾವುದಕ್ಕೂ ಹೊರಕ್ಕೆ ಬಿಡುವುದಿಲ್ಲ ಹೇಳಿದ್ದರು. ಜೈಲಿಗೆ ಹೋದರೆ ಅಗ್ನಿಮೂಲೆಗೆ ಹೋಗಲು ಆಗಲ್ಲ. ಅದಿಕ್ಕೆ ಗಿಲ್ಲಿಗೆ ವೋಟ್ ಹಾಕಿದೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಾವ್ಯಾ -ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಚಂದ್ರಪ್ರಭಗೆ ಸುದೀಪ್ ಖಡಕ್ ಕ್ಲಾಸ್
ಇದನ್ನು ಕೇಳಿ ಸುದೀಪ್ ಅವರು ನಕ್ಕು, ಎರಡು ವಾರಗಳ ಕಾಲ ಆದರೂ ಸಹ ಅಗ್ನಿ ಮೂಲೆಗೆ ಬೀಗ ಹಾಕಿಸಿ, ಇದು ಸಮಾಜಕ್ಕೂ ಒಂದು ಸಂದೇಶ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ್ದಾರೆ.