ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hanumantha, BBK 11: ಹುಟ್ಟೂರಿನಲ್ಲಿ ಹನುಂತನಿಗೆ ಅದ್ಧೂರಿ ಸ್ವಾಗತ: ಹನುಮನ ನೋಡಲು ಸೇರಿದ ಸಾವಿರಾರು ಅಭಿಮಾನಿಗಳು

ರೋಡ್​ಶೋ ವೇಳೆ ಕಾರಿನ ಸನ್ ರೂಫ್ ಮೂಲಕ ಹೊರ ಬಂದು ಹನುಮಂತ ಅವರು ಅಭಿಮಾನಿಗಳತ್ತ ಕೈ ಬೀಸಿದರು. ಹಳ್ಳಿಗರ ಪ್ರೀತಿ ನೋಡಿ ಖುಷಿಪಟ್ಟರೆ, ಬಿಗ್ ಬಾಸ್ ವಿನ್ನರ್ನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸವಣೂರು ಪಟ್ಟಣಕ್ಕೆ ಬಂದ ಹನುಮಂತುಗೆ ಡಿಜೆ ಹಾಕಿ ಅದ್ಧೂರಿ ಸ್ವಾಗತ ಕೋರಲಾಗಿದೆ.

Hanumantha

ಬಿಗ್ ​ಬಾಸ್ ಕನ್ನಡ​ ಸೀಸನ್​ 11ರ (Bigg Boss Kannada 11) ವಿಜೇತ ಹನುಮಂತ ಲಮಾಣಿ ತನ್ನ ಹುಟ್ಟೂರಿ ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿರುವ ಮನೆಗೆ ಆಗಮಿಸಿದ್ದಾರೆ. ಹನುಮಂತುಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ನಮ್ಮೂರಿನ ಹುಡುಗ ಬಿಗ್ ಬಾಸ್ ಟ್ರೋಫಿ ಗೆದ್ದು ಬಂದಿರುವುದಕ್ಕೆ ಇಡೀ ಸವಣೂರು ಪಟ್ಟಣ ಕುಣಿದು ಕುಪ್ಪಳಿಸಿದೆ. ಕಪ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಹನುಮಂತ ಊರಿಗೆ ಮರಳಿದ್ದಾರೆ. ಸವಣೂರು ಪಟ್ಟಣದಿಂದ ಊರಿನವರೆಗೆ ಸುಮಾರು 10 ಕಿಮೀ ರೋಡ್ ಶೋ ಮಾಡಿದ್ದಾರೆ.

ರೋಡ್​ಶೋ ವೇಳೆ ಕಾರಿನ ಸನ್​ ರೂಫ್ ಮೂಲಕ ಹೊರ ಬಂದು ಹನುಮಂತ ಅವರು ಅಭಿಮಾನಿಗಳತ್ತ ಕೈ ಬೀಸಿದರು. ಹಳ್ಳಿಗರ ಪ್ರೀತಿ ನೋಡಿ ಖುಷಿಪಟ್ಟರೆ, ಬಿಗ್ ಬಾಸ್ ವಿನ್ನರ್​ನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸವಣೂರು ಪಟ್ಟಣಕ್ಕೆ ಬಂದ ಹನುಮಂತುಗೆ ಡಿಜೆ ಹಾಕಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಹನುಮಂತು ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಮೆರವಣಿಗೆ ನಡೆಸಿದ್ದಾರೆ.

ಬಿಗ್ ​ಬಾಸ್​ ಮನೆಯಲ್ಲಿದ್ದಾಗ ಊರಿನ ಸ್ನೇಹಿತರನ್ನು ಮಿಸ್​​​ ಮಾಡಿಕೊಳ್ಳುತ್ತಿದ್ದೆ ಎಂದ ಹನುಮಂತು ಈಗ ಬಿಗ್​​ ಬಾಸ್​ ಮನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೂರು ತಿಂಗಳು ಅವರೊಡನೆ ಇದ್ದು ಅಲ್ಲಿಗೆ ಹೊಂದಿಕೊಂಡಿದ್ದೆ. ಅದು ಮನೆ ಅಲ್ಲ ದೇವರ ಗುಡಿ ಎಂದು ಬಣ್ಣಿಸಿದ್ದಾರೆ.

ಅದ್ಧೂರಿ ಮೆರವಣಿಗೆಯುದ್ದಕ್ಕೂ ಹನುಮಂತುಗೆ ಸನ್ಮಾನ ಮಾಡಲಾಯಿತು. ಕೇಳಿದವರಿಗೆ ಸೆಲ್ಫಿ ಕೊಟ್ಟ ಹನುಮಂತ, ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಪಾತ್ರಧಾರಿ ನಾವೆಲ್ಲ, ಸೂತ್ರಧಾರಿ ಶಿವ ಮೇಲ ಎಂದು ಹಾಡಿ ಹನುಮಂತ ಖುಷಿ ಪಡಿಸಿದ್ದಾನೆ. ಸವಣೂರು ನಗರದ ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಹನುಮಂತು ಮನೆ ಇರುವ ಚಿಲ್ಲೂರು ಬಡ್ನಿವರಗೂ ಸಾಗಿದೆ. ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಪುಷ್ಪದ ಮಳೆಯನ್ನೇ ಹರಿಸುತ್ತಿದ್ದಾರೆ.



ಹನುಮಂತ ಅವರು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರಿನಲ್ಲೇ ಇದ್ದರು. ಅವರು ಊರಿಗೆ ತೆರಳಿರಲಿಲ್ಲ. ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ಸ್ ನ ಶೂಟಿಂಗ್ ಮಾಡಬೇಕಿದ್ದ ಕಾರಣ ಊರಿಗೆ ಹೋಗಿರಲಿಲ್ಲ. ಈ ಕಾರಣದಿಂದ ಅವರು ಬಿಗ್ ಬಾಸ್ ಗೆದ್ದ ಬಳಿಕವೂ ಬೆಂಗಳೂರಲ್ಲೇ ಇದ್ದರು. ಇದೀಗ ಶೂಟಿಂಗ್ ಮುಗಸಿ ಅವರು ಊರಿಗೆ ತೆರಳಿದ್ದು ಅದ್ಧೂರಿ ಸ್ವಾಗತ ಸಿಕ್ಕಿದೆ.

Bhavya Gowda, BBK 11: ಭವ್ಯಾ ಗೌಡಾಗೆ ಭರ್ಜರಿ ವೆಲ್ಕಮ್ ಮಾಡಿದ ಅಕ್ಕ-ತಂಗಿ: ವಿಡಿಯೋ ನೋಡಿ