ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ತುಂಬಾ ಮಂದಿ ನಾಮಿನೇಟ್ ಆಗಿದ್ದರು, ಜೊತೆಗೆ ಡಬಲ್ ಎಲಿಮಿನೇಷನ್ ನಡೆದಿದೆ. ಮಾಳು ನಿಪನಾಳ್ ಮತ್ತು ಸೂರಜ್ ಸಿಂಗ್ ಅವರು ಮನೆಯಿಂದ ಆಚೆ ಹೋಗಿದ್ದಾರೆ. ಅಂತೆಯೇ ಈ ವಾರ ನಾಮಿನೇಷನ್ ಕೂಡ ಮುಕ್ತಾಯವಾಗಿದ್ದು, ಈ ವಾರ 5 ಮಂದಿಗೆ ಎಲಿಮಿನೇಷನ್ ಭಯ ಕಾಡುತ್ತಿದೆ.
ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ?
ಈ ವಾರ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆ ಆಗಿದ್ದು, ಅವರ ನೇತೃತ್ವದಲ್ಲಿ ಮನೆಯ ಸದಸ್ಯರ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್ ಸೇರಿ ಒಟ್ಟು ಮಂದಿ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಜಸ್ಟ್ ಮಿಸ್ ಆಗಿದ್ದ ಸ್ಪಂದನಾ ಸೋಮಣ್ಣ ಈ ವಾರ ಕೂಡ ನಾಮಿನೇಟ್ ಆಗಿದ್ದಾರೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಸ್ಪಂದನಾ ಪ್ರತಿ ವಾರ ಸೇಫ್ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಕಳೆದ ವಾರ ಅವರನ್ನು ಎಲಿಮಿನೇಷನ್‌ನ ಕೊನೆವರೆಗೂ ಹೋಗಿಬಂದಿದ್ದರು. ಅಂತಿಮ ಕ್ಷಣದಲ್ಲಿ ಸ್ಪಂದನಾ ಸೇಫ್ ಆದರೆ ಮಾಳು ನಿಪನಾಳ್ ಹೊರಗೆ ಬಂದರು. ಈ ವಾರ ಕೂಡ ಸ್ಪಂದನಾಗೆ ಎಲಿಮಿನೇಷನ್ ಆತಂಕ ಇದ್ದೇ ಇದೆ. ಇನ್ನುಳಿದಂತೆ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್ ಅವರಲ್ಲಿ ಯಾರೇ ಒಬ್ಬರು ಎಲಿಮಿನೇಟ್ ಆದರು, ಅದು ಅಚ್ಚರಿ ಎನಿಸುವುದಂತೂ ಪಕ್ಕಾ! ಅಥವಾ ಈ ವಾರ ಕೂಡ ಡಬಲ್ ಎಲಿಮಿನೇಷನ್ ಇರಲಿದೆಯಾ? ಕಾದುನೋಡಬೇಕು.
ಕ್ಯಾಪ್ಟನ್ ಗಿಲ್ಲಿ ಸೇಫ್
ಮನೆಯ ಕ್ಯಾಪ್ಟನ್ ಆದ ಕಾರಣ, ಈ ವಾರ ಗಿಲ್ಲಿ ನಟ ಸೇಫ್ ಆಗಿದ್ದಾರೆ. ಜೊತೆಗೆ ಮುಂದಿನ ವಾರದ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ನೀಡುವುದಕ್ಕೆ ಅರ್ಹತೆಯನ್ನು ಕೂಡ ಪಡೆದುಕೊಂಡಿದ್ದಾರೆ. ಜೊತೆಗೆ ಅಶ್ವಿನಿ ಗೌಡ ಕೂಡ ಕ್ಯಾಪ್ಟೆನ್ಸಿ ಓಟದಲ್ಲಿ ಭಾಗಿಯಾಗಲು ಅರ್ಹತೆ ಕೂಡ ಪಡೆದಿದ್ದಾರೆ. ವಿಶೇಷ ಏನಪ್ಪ ಅಂದ್ರೆ, ಈ ವಾರ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಆಗಲಿದ್ದಾರೆ.
ಬಿಗ್ ಬಾಸ್ ಫಿನಾಲೆಗೆ ಇನ್ನು 20 ದಿನಗಳಷ್ಟೇ ಬಾಕಿ ಇವೆ. ಯಾರು ಈ ಬಾರಿ ವಿನ್ನರ್ ಆಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಅಂತೂ ಜೋರಾಗಿದೆ. ಗಿಲ್ಲಿ ನಟ ಅವರಿಗೆ ಸದ್ಯ ಸಿಕ್ಕಾಪಟ್ಟೆ ಜನಪ್ರಿಯತೆ ಇದ್ದು, ಕಳೆದ ವಾರ ನಡೆದ ಫ್ಯಾಮಿಲಿ ವೀಕ್‌ನಲ್ಲಿ ಅದು ಇನ್ನಷ್ಟು ಬಹಿರಂಗವಾಗಿದೆ.