ಬಿಗ್ ಬಾಸ್ (Bigg Boss Kannada 12) ಶುರುವಾದಾಗಿನಿಂದ ಅಶ್ವಿನಿ (Ashwini and Gilli) ಹಾಗೂ ಗಿಲ್ಲಿ ಹಾವು ಮುಂಗುಸಿ ಅನ್ನೋದು ಗೊತ್ತೇ ಇದೆ. ಅಶ್ವಿನಿ ಅವರಿಂದಲೇ ಗಿಲ್ಲಿಗೆ (Gilli Nata) ಮೈಲೇಜ್ ಅನ್ನೋದು ಕೆಲವು ಸ್ಪರ್ಧಿಗಳ ಅಭಿಪ್ರಾಯ. ಅಶ್ವಿನಿ ಸುಮ್ಮನಿದ್ರು ಗಿಲ್ಲಿ ಬಿಡಲ್ಲ ಅಂತ ಓಪಿನಿಯನ್ ಕೂಡ ಮನೆಯಲ್ಲಿದೆ. ಇಷ್ಟೂ ದಿನ ಕಿತ್ತಾಡಿಕೊಂಡ ಜೋಡಿ, ಈಗ ಕುಚಿಕು ಸ್ನೇಹಿತರಾಗುತ್ತಿದ್ದಾರೆ ಎಂದು ಎಪಿಸೋಡ್ ನೋಡಿದ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಸಾಕಷ್ಟು ಬಾರಿ ಗಿಲ್ಲಿ ಬೇಸರಗೊಂಡಾಗ ಅಶ್ವಿನಿ ಅವರೇ ಸಮಾಧಾನ ಮಾಡಿದ್ದಾರೆ.
ಒಂದಾದ್ರ ಗಿಲ್ಲಿ, ಅಶ್ವಿನಿ?
ಕಳೆದ ಸೀಸನ್ ಸ್ಪರ್ಧಿಗಳಾದ ಗಿಲ್ಲಿ ನಟ, ಮಂಜು ಮೊದಲಾದವರು ಅತಿಥಿಗಳು. ಆದರೆ ಅವರ ಟಾರ್ಚರ್‌ಗೆ ಗಿಲ್ಲಿ ಬೇಸರಗೊಂಡಿದ್ದಾರೆ. ಈ ವೇಳೆ ಗಿಲ್ಲಿ ಹಾಗೂ ಅಶ್ವಿನಿ ಗೌಡ ಒಂದಾಗಿದ್ದಾರೆ. ಇವರ ಮಧ್ಯೆ ಗೆಳೆತನ ಮೂಡಿದೆ. ಬೇಸರಗೊಂಡ ಗಿಲ್ಲಿ ಕಂಡು ಮೊದಲಿಗೆ ಅಶ್ವಿನಿ ಅವರು, ʻಚಿಲ್ ಆಗಿರು. ಆರಾಮ್ ಆಗಿರು. ಹಾಗೂ ಹಿಂಸೆ ಆಗ್ತಾ ಇದ್ರೆ ಕರಿ ಬರ್ತೀನಿ ಎಂದಿದ್ದಾರೆ. ಟ್ರಿಗರ್ ಮಾಡಿಕೊಳ್ಳಬೇಡ ಆರಾಮ್ ಆಗಿರುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮಾಜಿ ಸ್ಪರ್ಧಿಗಳು ಇದೊಂದು ಕಾರಣಕ್ಕೆ ಬಿಗ್ ಬಾಸ್ ಮನೆಗೆ ಬಂದ್ರಾ? ಬಾಯ್ತಪ್ಪಿ ಚೈತ್ರಾ ಹೇಳಿದ್ದೇನು?
ಕಳೆದ ವಾರ ಗಿಲ್ಲಿ ನಟನ ಕಾಮಿಡಿ, ವರ್ತನೆ ಜಾಸ್ತಿ ಆಯ್ತು ಎಂದು ಅಶ್ವಿನಿ ಗೌಡ ಕೂಗಾಡಿದ್ದರು, ಊಟವನ್ನು ಬಿಟ್ಟಿದ್ದರು. ಆಮೇಲೆ ವೀಕೆಂಡ್ ಎಪಿಸೋಡ್‌ನಲ್ಲಿ ಅಶ್ವಿನಿ ಮೇಡಂ ಉಳಿಯಬೇಕು, ಅಶ್ವಿನಿ ಮೇಡಂ ಕಂಡರೆ ನನಗೆ ಇಷ್ಟ ಎಂದು ಗಿಲ್ಲಿ ನಟ ಹೇಳಿದ್ದು, ಕಿಚ್ಚ ಸುದೀಪ್ ಅವರಿಗೆ ಅಚ್ಚರಿ ತಂದಿತ್ತು.
ವೈರಲ್ ವಿಡಿಯೋ
ಕಿಚನ್ ಏರಿಯಾದಲ್ಲಿರುವ ಸೋಫಾ ಮೇಲೆ ಕೂತು, ಅಶ್ವಿನಿ, ಗಿಲ್ಲಿ ಮಾತನಾಡಿಕೊಂಡಿದ್ದಾರೆ.
"ಅವರು ಮಾತನಾಡಿದರು, ಇವರು ಮಾತನಾಡಿದರು. ಅದಿಕ್ಕೆ ಸಪ್ಲೈಯರ್ ಕೆಲಸ ಕೊಟ್ಟಿದ್ದಾರೆ. ಟಾಸ್ಕ್ ಆಗಿಲ್ಲ ಅಂದ್ರೆ ಸರಿಯಾಗಿ ಕೌಂಟರ್ ಕೊಡುತ್ತಿದ್ದೆ. ರೂಮ್‌ನಲ್ಲಿ ನನಗೆ ಟ್ರಿಗರ್ ಆಯ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ. “ನೀನು ಕೆಲಸ ಮಾಡಲ್ಲ ಎಂದು ಗೊತ್ತು. ಏನಾದರೂ ಮಾಡ್ತೀಯಾ ಅಂತ ಗೊತ್ತು, ನೀನು ಮಾಡಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಮನೆಯವರ ತಂಟೆಗೆ ಅತಿಥಿಗಳು ಬಂದಿರೋದು ಅಶ್ವಿನಿ ಹಾಗೂ ಗಿಲ್ಲಿಗೆ ಕೋಪ ತರಿಸಿದೆ. ಈ ಕಾರಣದಿಂದಲೇ ಇಬ್ಬರೂ ಒಂದಾಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಸೈಲೆಂಟ್ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್ ಹೇಳಿಕೆಗೆ ಫ್ಯಾನ್ಸ್ ಕೆಂಡ
ಸದ್ಯ ಗಿಲ್ಲಿಯೇ ಟಾರ್ಗೆಟ್
ಸೀಸನ್ 11 ಸ್ಪರ್ಧಿಗಳು ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಿಲ್ಲಿಗಾಗಿಯೇ ಹೊಸ ರೂಲ್ಸ್ ಮಾಡಿದ್ದಾರೆ ಉಗ್ರಂ ಮಂಜು. ಉಗ್ರಂ ಮಂಜು ಅವರ ಮನೆಯವರಿಗೆ, ಗಿಲ್ಲಿ ಕೈಯಿಂದಾನೆ ಊಟ ಬಡಿಸಿಕೊಂಡು ತಿನ್ನಬೇಕು. ಅಥವಾ ಎಲ್ಲರಿಗು ಆದಮೇಲೆ ಅವನು ಊಟ ಮಾಡಬೇಕು ಎಂದು ಸೀಸನ್ 11 ಸ್ಪರ್ಧಿಗಳು ನಿಯಮ ಮಾಡಿದ್ದಾರೆ.
ಆದರೆ ಗಿಲ್ಲಿ ಮಾತ್ರ ಇದನ್ನು ಫಾಲೋ ಮಾಡಿಲ್ಲ. ಆದರೆ ಗಿಲ್ಲಿ ಇದನ್ನ ಒಪ್ಪಲೆ ಇಲ್ಲ ರಘು ಅವರ ಮುಂದೆ ಇದೆಂಥ ರೂಲ್ಸ್? ಅಂತ ಬ್ರೇಕ್ ಮಾಡಿದ್ದಾರೆ.ಅದಕ್ಕೆ ಉಗ್ರಂ ಮಂಜು ಕೆಂಡ ಆಗಿದ್ದಾರೆ. ʻನಾನು ಹೇಳಿದ್ದೇನು ಅಭಿ ? ಅಂತ ಕ್ಯಾಪ್ಟನ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಗಿಲ್ಲಿ ಬೋಂಡಾ ತಿಂದುಕೊಂಡು ಆರಾಮ್ ಇದ್ದಾನೆ. ನೀವು ಹಸಿವು ಅಂದುಕೊಂಡು ಆರಾಮ್ ಇದ್ದೀರಾ. ನೀವುಷ್ಟು ಜನ ಅವನಿಗೆ ಹೇಳೋಕೆ ಆಗಾಲ್ಲ. ನಿಮಗೆ ನಾಚಿಕೆ ಆಗಲ್ವಾ? ನಾಳೆ ನಾನೇ ಬೇರೆ ಆಟ ತೋರಸ್ತೀನಿʼ ಅಂದಿದ್ದಾರೆ ಉಗ್ರಂ ಮಂಜು.