ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

Kavya Shaiva: ಬಿಗ್‌ ಬಾಸ್‌ ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಅಂದರೆ ಕೇವಲ ಟಾಸ್ಕ್‌, ವ್ಯಕ್ತಿತ್ವ ಮಾತ್ರವಲ್ಲ. ಇಲ್ಲಿ ಸಖತ್‌ ಮನರಂಜನೆ ಇದೆ. ಬಿಗ್‌ ಬಾಸ್‌ ಆರಂಭವಾದ ಬಳಿಕ ಮೊದಲಿಗೆ ಆಕ್ಟಿವ್‌ ಆಗೋದು ಟ್ರೋಲ್‌ ಪೇಜ್‌ಗಳು . ಒಂದು ಸಣ್ಣ ಹಿಂಟ್‌ ಸಿಕ್ಕರೆ ಸಾಕು ಟ್ರೋಲ್‌ ಮಾಡಿ ಬಿಡ್ತಾರೆ. ಇದೀಗ ಕಾವ್ಯ ಶೈವ ಪರಿಸ್ಥಿತಿ ಅದೇ ಆಗಿದೆ. ಕಾವ್ಯ ಅವರನ್ನ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಜೊತೆ ಹೋಲಿಕೆ ಮಾಡಿ ಟ್ರೋಲ್‌ ಮಾಡ್ತಿದ್ದಾರೆ. ಏನಿದು ಅಸಲಿ ಮ್ಯಾಟರ್‌?

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಅಂದರೆ ಕೇವಲ ಟಾಸ್ಕ್‌, ವ್ಯಕ್ತಿತ್ವ ಮಾತ್ರವಲ್ಲ. ಇಲ್ಲಿ ಸಖತ್‌ ಮನರಂಜನೆ ಇದೆ. ಬಿಗ್‌ ಬಾಸ್‌ ಆರಂಭವಾದ ಬಳಿಕ ಮೊದಲಿಗೆ ಆಕ್ಟಿವ್‌ ಆಗೋದು ಟ್ರೋಲ್‌ ಪೇಜ್‌ಗಳು (Troll Page). ಒಂದು ಸಣ್ಣ ಹಿಂಟ್‌ ಸಿಕ್ಕರೆ ಸಾಕು ಟ್ರೋಲ್‌ ಮಾಡಿ ಬಿಡ್ತಾರೆ. ಇದೀಗ ಕಾವ್ಯ ಶೈವ (Kavya Shaiva) ಪರಿಸ್ಥಿತಿ ಅದೇ ಆಗಿದೆ. ಕಾವ್ಯ ಅವರನ್ನ ಆರ್‌ಸಿಬಿ ಸ್ವಸ್ತಿಕ್ ಚಿಕಾರ (swastik chikara) ಜೊತೆ ಹೋಲಿಕೆ ಮಾಡಿ ಟ್ರೋಲ್‌ ಮಾಡ್ತಿದ್ದಾರೆ. ಏನಿದು ಅಸಲಿ ಮ್ಯಾಟರ್‌?

ಕಾವ್ಯ- ಸ್ವಸ್ತಿಕ್ ಚಿಕಾರ

ಸೋಷಿಯಲ್‌ ಮೀಡಿಯಾದಲ್ಲಿ ಕಾವ್ಯ ಬಗ್ಗೆ ಒಂದು ಪೋಸ್ಟ್‌ ವೈರಲ್‌ ಆಗುತ್ತಿದೆ. ಕಾವ್ಯ ಮತ್ತು ಸ್ವಸ್ತಿಕ್ ಚಿಕಾರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ನಿಜವಾದ ಕೊಡುಗೆ ಇಲ್ಲದೆ ಫೇಮ್‌ ಮಾತ್ರ ಪಡೆದುಕೊಳ್ಳುತ್ತಾರೆ. ಯಾವುದೇ ಕೊಡಗೆ ಕೊಡಲ್ಲ, ವಾವ್‌ ಫೀಲಿಂಗ್‌ ಇಲ್ಲ, ಸ್ಕ್ರೀನ್ ಸ್ಪೇಸ್ ಅಂತೂ ಇಲ್ವೇ ಇಲ್ಲ. ಆದರೂ ಹೈಲೈಟ್‌ ಮಾತ್ರ ಆಗ್ತಾರೆ ಅಂತ ಕಾವ್ಯ ಅವರನ್ನ ಸ್ವಸ್ತಿಕ್ ಚಿಕಾರ ಅವರಿಗೆ ಹೋಲಿಕೆ ಮಾಡಿದ್ದಾರೆ.

ಸ್ವಸ್ತಿಕ್ ಚಿಕಾರಗೆ ಹೋಲಿಕೆ ಮಾಡೋದು ಏಕೆ?

ಆರ್​ಸಿಬಿ ಪಾಳಯ ಸೇರಿಕೊಂಡಿದ್ದ ಸ್ವಸ್ತಿಕ್ ಚಿಕಾರ, ಲೈವ್ ಪಂದ್ಯದಲ್ಲೂ, ಡ್ರೇಸಿಂಗ್ ರೂಮ್​ನಲ್ಲೂ, ಡಗೌಟ್​ನಲ್ಲೂ ಕೊಹ್ಲಿ ಹಿಂದೆ ಇರುತ್ತಾ ಕೇವಲ ಬಿಲ್ಡಪ್‌ ಪಡೆಯುತ್ತಿದ್ದರು. ಸ್ವಸ್ತಿಕ್ ಅವರ ನಡೆಯಿಂದ ಕೊಹ್ಲಿಗೂ ಇರಿಸು ಮುರಿಸಾಗಿತ್ತು. ಒಂದು ಬಾರಿ ಸಂದರ್ಶನದಲ್ಲಿ ಚಿಕಾರನನ್ನು ನನ್ನ ರೂಮ್​ನಲ್ಲಿ ಇರಿಸಿಕೊಳ್ಳಲು ಬಯಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು.

ವೈರಲ್‌ ಪೋಸ್ಟ್‌



ಯಾವಾಗಲೂ ಕೊಹ್ಲಿ ಜೊತೆ ಇರುವ ಸ್ವಸ್ತಿಕ್ ಚಿಕಾರಾ ಸದಾ ಕಾಲ ತುಂಟಾಟ ಮಾಡುತ್ತಿರುತ್ತಿದ್ದರು, ಆರ್​ಸಿಬಿ ಆಟಗಾರರು ಕೂಡ ಚಿಕಾರನನ್ನು ಇದೇ ವಿಷಯವಾಗಿ ಸಾಕಷ್ಟು ಬಾರಿ ಕೀಟಲೆ ಮಾಡಿದ್ದೂ ಇದೆ. ಇದೀಗ ಇದೇ ಗುಣ ಕಾವು ಹೊಂದಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯ.

ಕಾವ್ಯ ಕೂಡ ಗಿಲ್ಲಿ ಅವರ ಹಿಂದೆ ಹೋಗಿ ಬಿಲ್ಡಪ್‌ ತೆಗೆದುಕೊಳ್ತಿದ್ದಾರೆ. ಟಾಸ್ಕ್‌ನಲ್ಲಿ ಏನೂ ಕೊಡುಗೆ ಇಲ್ಲದೇ ಇದ್ದರೂ ಹೈಲೈಟ್‌ ಆಗ್ತಾರೆ ಅಂತ ಕಮೆಂಟ್‌ ಮಾಡುತ್ತಿದ್ದಾರೆ.

ಯಾರು ಸ್ವಸ್ತಿಕ್ ಚಿಕಾರ?

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು. ಆದರೆ, ಅವರಿಗೆ ಐಪಿಎಲ್ 2025 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಉತ್ತರ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುವ ಸ್ವಸ್ತಿಕ್ ಚಿಕಾರ, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 33.33 ಸರಾಸರಿಯಲ್ಲಿ 200 ರನ್ ಗಳಿಸಿದ್ದಾರೆ, ಇದರಲ್ಲಿ 1 ಶತಕವೂ ಸೇರಿದೆ. ಅವರು 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 74 ರನ್ ಮತ್ತು 4 ಟಿ20 ಪಂದ್ಯಗಳಲ್ಲಿ 15 ರನ್ ಗಳಿಸಿದ್ದಾರೆ.

Yashaswi Devadiga

View all posts by this author