ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಮಾತಿನಲ್ಲೇ ಕೌಂಟರ್‌, ಡೈಲಾಗ್‌ನಲ್ಲಿ ಪಂಚಿಂಗ್ ಪಂಟರ್! ಮಾತಿನ ಮಲ್ಲ ಗಿಲ್ಲಿ ರೋಚಕ ಜರ್ನಿ

Gilli Nata: ಬಿಗ್‌ ಬಾಸ್‌ ಫಿನಾಲೆ ಕೌಂಟ್‌ ಡೌನ್‌ ಶುರುವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಮಕ್ಕಳಿಂದ ಹಿಡಿದು ಯುವಕರು, ದೊಡ್ಡವರವರೆಗೂ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆದ ಸ್ಪರ್ಧಿ ಅಂದರೆ ಅದುವೇ ಮಾತಿನ ಮಲ್ಲ ಗಿಲ್ಲಿ ನಟ. ಕೆಲವು ವಾರ ಇರಬಹುದೇನೋ ಅಂದುಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದೆ. ಆದರೆ ಫೈನಲ್ ಹಂತದವರೆಗೂ ಬರುತ್ತೇನೆ ಅಂದುಕೊಂಡಿರಲಿಲ್ಲ ಎಂದು ಗಿಲ್ಲಿ ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಫಿನಾಲೆ (Bigg Boss Kannada Finale) ಕೌಂಟ್‌ ಡೌನ್‌ ಶುರುವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಮಕ್ಕಳಿಂದ ಹಿಡಿದು ಯುವಕರು, ದೊಡ್ಡವರ ವರೆಗೂ ವಿಭಿನ್ನ ಮ್ಯಾನರಿಸಂ ಹಾಗೂ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆದ ಸ್ಪರ್ಧಿ ಅಂದರೆ ಅದುವೇ ಮಾತಿನ ಮಲ್ಲ (Matina Malla Gilli Nata) ಗಿಲ್ಲಿ ನಟ. ಕೆಲವು ವಾರ ಇರಬಹುದೇನೋ ಅಂದುಕೊಂಡು ಬಿಗ್ ಬಾಸ್ ಮನೆಗೆ ಬಂದಿದ್ದೆ. ಆದರೆ ಫೈನಲ್ ಹಂತದವರೆಗೂ ಬರುತ್ತೇನೆ ಅಂದುಕೊಂಡಿರಲಿಲ್ಲ ಎಂದು ಗಿಲ್ಲಿ ಹೇಳಿದ್ದಾರೆ. ಮನಿ ಇವತ್ತು ಬರುತ್ತೆ ನಾಳೆ ಹೋಗುತ್ತೆ, ಆದ್ರೆ ಅಭಿಮಾನಿ ಒಂದು ಸಲ ಬಂದ್ರೆ ಮತ್ತೆ ಯಾವಾಗಲೂ ಹೋಗಲ್ಲ ಎಂದು ಸಖತ್‌ ಭಾವುಕರಾದರು (Emotional) ಗಿಲ್ಲಿ. ಅಷ್ಟರ ಮಟ್ಟಿಗೆ ಕ್ರೇಜ್‌ ಹುಟ್ಟು ಹಾಕಿರೋ ಸ್ಪರ್ಧಿ ಆಗಿದ್ದಾರೆ.

ಈ ಸೀಸನ್‌ ಕಪ್‌ ಗಿಲ್ಲಿ ಕೈ ಸೇರೋದು ಪಕ್ಕಾ ?

‘ಬಿಗ್ ಬಾಸ್’ ಮನೆಯೊಳಗೆ ಜಂಟಿ ಆಗಿ ಕಾಲಿಟ್ಟವರು ಗಿಲ್ಲಿ ನಟ. ತಮ್ಮ ಪೇರ್‌ ಆಗಿದ್ದ ಕಾವ್ಯ ಅವರನ್ನ ಈವರೆಗೂ ಗಿಲ್ಲಿ ನಟ ಎಲ್ಲೂ, ಎಂದೂ ಬಿಟ್ಟುಕೊಟ್ಟಿಲ್ಲ. ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದುಕೊಂಡು ಅತೀ ಕಡಿಮೆ ಸಮಯದಲ್ಲಿ ಇನ್ಟಾಗ್ರಾಮ್‌ನಲ್ಲಿ 1M ಫಾಲೋವರ್ಸ್‌ ಪಡೆದ ಮೊದಲ ಸ್ಪರ್ಧಿಯಾಗಿ ಗಿಲ್ಲಿ ದಾಖಲೆ ಬರೆದರು.



ಇದನ್ನೂ ಓದಿ: Bigg Boss Kannada 12: ಟಾಸ್ಕ್ ಮಾಸ್ಟರ್‌, ಈ ಸೀಸನ್ ಮೊದಲ ಫೈನಲಿಸ್ಟ್ ಧನುಷ್‌ ಜರ್ನಿ ಹೇಗಿತ್ತು?

ಟ್ಯಾಟೂನಿಂದ ಹಿಡಿದುಕೊಂಡು, ಪ್ರತಿ ಗಲ್ಲಿಯಲ್ಲಿ ಗಿಲ್ಲಿ ಬ್ಯಾನರ್‌ ಹಾಕಿ ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ.ಜನರು ಗಿಲ್ಲಿ ಇರೋದಕ್ಕೆ ಚಾನಲ್‌ ಟಿ ಆರ್‌ ಪಿ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ.

ಮಾತಿನಲ್ಲೇ ಕೌಂಟರ್‌ ಕೊಡೋ ಗಿಲ್ಲಿ

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಅವರ ಎದುರು ಅಬ್ಬರಿಸೋ ಸ್ಪರ್ಧಿ ಅಂದರೆ ಗಿಲ್ಲಿ. ಅಷ್ಟೇ ಅಲ್ಲ ಗಿಲ್ಲಿ ಕೊಡುವ ಕೌಂಟರ್‌ಗೆ ಯಾವುದೇ ಎದುರಾಳಿ ಸ್ಪರ್ಧಿಗಳಾದರೂ ಸುಮ್ಮನೆ ಆಗ್ತಾರೆ.

ಡೈಲಾಗ್‌ ಕಿಂಗ್‌ ಗಿಲ್ಲಿ!

ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್ ಹಾಡು ಸಖತ್‌ ಫೇಮಸ್‌ ಕೂಡ ಆಯ್ತು. ಸಾಂಗ್‌ ಆಗಿಯೂ ಪರಿವರ್ತನೆ ಆಗಿ ರೀಲ್ಸ್‌ ಮಾಡಲು ಶುರು ಮಾಡಿದ್ದರು ಅಭಿಮಾನಿಗಳು. ಡಮಾಲ್ ಡಿಮಿಲ್‌ ಡಕ್ಕ ಗಿಲ್ಲಿ ಗೆಲ್ಲೋದು ಪಕ್ಕಾ! ಹೇಳಿದ ಡೈಲಾಗ್‌ ಇಂದಿಗೂ ಗಿಲ್ಲಿ ಫ್ಯಾನ್ಸ್‌ ಹೇಳುತ್ತಾರೆ.

ಗಿಲ್ಲಿ ನಟ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ, ಕಾಮಿಡಿ ಟೈಮಿಂಗ್ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಕಾಮಿಡಿ ಮೂಲಕವೇ ಕಹಿಸತ್ಯವನ್ನ ಹೊರಗೆ ಹಾಕಿ ಎಲ್ಲರ ಮುಖವಾಡಗಳನ್ನ ಗಿಲ್ಲಿ ನಟ ಕಳಚುತ್ತಿದ್ದ ರೀತಿ ವೀಕ್ಷಕರಿಗೆ ತುಂಬಾ ಇಷ್ಟ ಆಗಿತ್ತು.



ಗಿಲ್ಲಿ ಎಲ್ಲರನ್ನ ಕೆಳಗೆ ಹಾಕಿ ಮಾತಾಡ್ತಾರೆ ಅಂತ ಹಲವು ಸ್ಪರ್ಧಿಗಳು ಆರೋಪ ಮಾಡಿದ್ದೂ ಇದೆ. ಎಲ್ಲೇ ಕುಳಿತ್ತಿದ್ದರೂ ಇನ್ನೊಂದು ಕಡೆ ಏನಾಗುತ್ತಿದೆ ಅಂತ ಕರೆಕ್ಟ್ ಆಗಿ ಊಹಿಸುತ್ತಿದ್ದ ಚಾಲಾಕಿ ಗಿಲ್ಲಿ.

ಟಾಸ್ಕ್‌ನಲ್ಲಿ ಸ್ವಲ್ಪ ಹಿನ್ನೆಡೆ

ಕಾವ್ಯಗೆ ಫ್ಯಾಮಿಲಿ ಲೆಟರ್‌ ಸಿಗಬೇಕು ಅಂತ ಗಿಲ್ಲಿ ತಮ್ಮ ಪತ್ರವನ್ನ ತ್ಯಾಗ ಮಾಡಿದ್ದರು. ಸಾಧ್ಯವಾದಾಗ ಕಾವ್ಯರನ್ನ ನಾಮಿನೇಷನ್‌ನಿಂದ ಬಚಾವ್ ಮಾಡಿದ್ದರು. ಅಶ್ವಿನಿ ಗೌಡ ವರ್ಸಸ್ ಗಿಲ್ಲಿನೇ ಬಿಗ್‌ ಬಾಸ್‌ ಮನೆಯ ಹೈಲೈಟ್‌. ಸ್ಪರ್ಧಿಗಳು ಕೂಡ ಗಿಲ್ಲಿಯನ್ನ ಹಲವು ಬಾರಿ ಟಾಸ್ಕ್‌ ವಿಚಾರಕ್ಕೆ ನಾಮಿನೇಟ್‌ ಮಾಡಿದ್ದರು. ಹೆಚ್ಚು ಕಳಪೆ ಪಡೆದ ಸ್ಪರ್ಧಿಯೂ ಗಿಲ್ಲಿ ಆಗಿದ್ದರು.

ಇದನ್ನೂ ಓದಿ: Bigg Boss Kannada 12: ಎಂತಾ ಗೊತ್ತುಂಟಾ...? ರಕ್ಷಿತಾ ಆಟದಲ್ಲೂ ಸೈ, ಎಂಟರ್ಟೈನಮೆಂಟ್‌ಗೂ ಜೈ! ಹೀಗಿತ್ತು ಪುಟ್ಟಿ ಪಯಣ

ಗಿಲ್ಲಿ ಗೆಲ್ಲೋದು ಪಕ್ಕಾ?

ಗಿಲ್ಲಿ ಈ ಸೀಸನ್‌ನಲ್ಲಿ ವೀಕ್ಷಕರನ್ನು ನಗಿಸಿದ್ದಾರೆ. ಮನರಂಜನೆ ನೀಡಿದ್ದಾರೆ. ಲೀಲಾಜಾಲವಾಗಿ ಯಾವುದೇ ಬಿಗ್‌ ಬಾಸ್‌ ಚಟುವಟಿಕೆ ನೀಡಿದರೂ ನಿಭಾಯಿಸಿದ್ದಾರೆ. ಹಾಡನ್ನು ಬರೆದಿದ್ದಾರೆ. ಡ್ಯಾನ್ಸ್‌ ಮಾಡಿದ್ದಾರೆ, ಹಾಡಿದ್ದಾರೆ. ಒಟ್ಟಾರೆ All Rounder ನಮ್ಮ ಗಿಲ್ಲಿ ಅಂತಿದ್ದಾರೆ ಫ್ಯಾನ್ಸ್‌,

ಇಡೀ ಫ್ಯಾಮಿಲಿ ಕೂತು ನಗುವ ಹಾಗೆ ಕಾಮಿಡಿಯನ್ನೂ ಮಾಡಿದ್ದಾರೆ. ವೀಕ್ಷಕರ ಮನಗೆದ್ದಿರುವ ಗಿಲ್ಲಿ ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಬೇಕು ಅನ್ನೋದು ಅವರ ಫ್ಯಾನ್ಸ್‌ ಆಶಯ.

Yashaswi Devadiga

View all posts by this author