ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಬಾಯಿ ಮೇಲೆ ಕಂಟ್ರೋಲ್‌ ಇರಲಿʼ; ಧ್ರುವಂತ್‌ ಮೇಲೆ ತಿರುಗಿಬಿದ್ದ ಆ ಮೂವರು ಸ್ಪರ್ಧಿಗಳು, ʻಬಿಗ್‌ ಬಾಸ್‌ʼ ಮನೆಯಲ್ಲಿ ರಣರಂಗ!

Bigg Boss 12 Dhruvanth: 'ಬಿಗ್ ಬಾಸ್' ಮನೆಯಲ್ಲಿ ಧ್ರುವಂತ್ ಅವರ ಒಂದು ಪದಬಳಕೆಯಿಂದಾಗಿ ದೊಡ್ಡ ಜಗಳವಾಗಿದೆ. ಸೂರಜ್ ಅವರು ಧ್ರುವಂತ್ ಮೇಲೆ ಕೋಪಗೊಂಡು, "ಬಾಯಿ ಮೇಲೆ ಕಂಟ್ರೋಲ್ ಇರಲಿ. ಇದೇನು ನಿಮ್ಮ ಮನೆ ಅಂದ್ಕೊಂಡಿದ್ದೀರಾ?" ಎಂದು ಆವಾಜ್ ಹಾಕಿದ್ದಾರೆ. ಬಳಿಕ ಕ್ಯಾಪ್ಟನ್ ಧನುಷ್, "ನೆಟ್ಟಗೆ ಮಾತನಾಡಲು ಕಲಿಯಲೇ" ಎಂದು ಜಗಳದಲ್ಲಿ ಭಾಗಿಯಾಗಿದ್ದಾರೆ.

ʻಬಿಗ್‌ ಬಾಸ್‌ʼ ಮನೆಯಲ್ಲಿ ಈಗ ರಣರಂಗ ಉಂಟಾಗಿದೆ. ಈ ವಾರ ಆತಿಥಿಗಳ ಕಾರುಬಾರು ಇತ್ತು. ಇದೀಗ ಅವರೆಲ್ಲಾ ಮನೆಯಲ್ಲಿರುವಾಗಲೇ ಸ್ಪರ್ಧಿಗಳು ತಮ್ಮ ಹಳೆಯ ವರ್ತನೆಯನ್ನು ಮುಂದುವರಿಸಿದ್ದಾರೆ. ಮಾತಿಗೆ ಮಾತು ಬೆಳೆಸುತ್ತಾ ಜಗಳವಾಡಿಕೊಂಡಿದ್ದಾರೆ. ಧ್ರುವಂತ್‌ ಅವರ ಮೇಲೆ ಮನೆಯ ಮೂವರು ಸದಸ್ಯರು ಏಕಾಏಕಿ ರೊಚ್ಚಿಗೆದ್ದಿದ್ದಾರೆ. ಮನೆಗೆ ಬಂದಿರುವ ತ್ರಿವಿಕ್ರಮ್‌, ರಜತ್‌ ಮುಂತಾದವರು ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ.

ಅಷ್ಟಕ್ಕೂ ಮನೆಯೊಳಗೆ ಆಗಿದ್ದೇನು?

ಸದ್ಯ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಪ್ರೋಮೋವನ್ನು ಗಮನಿಸಿದರೆ, ಧ್ರುವಂತ್‌ ಅವರು ಎಲ್ಲೆಮೀರಿ ಮಾತನಾಡಿದ್ದು, ಟಿ ಕೊಬ್ಬು ಎಂಬ ಪದಬಳಕೆ ಮಾಡಿರುವುದು ಸೂರಜ್‌ ಮಾತಿನಿಂದ ಗೊತ್ತಾಗುತ್ತಿದೆ. ಮೊದಲು ಧ್ರುವಂತ್‌ ಮೇಲೆ ಸೂರಜ್‌ ಕೂಗಾಡಿದ್ದಾರೆ. "ಬಾಯಿನಾ ಸ್ವಲ್ಪ ಕಂಟ್ರೋಲ್‌ನಲಿ ಇಟ್ಟುಕೊಳ್ಳಿ. ಏನ್‌ ಟೀ ಕೊಬ್ಬು ಅಂದ್ರೆ? ನಾನು ನಿಮ್ಮನ್ನೆ ಕೇಳ್ತಾ ಇರೋದು. ಏನು ಹಂಗಂದ್ರೆ? ಬಾಯಿ ಮೇಲೆ ಹಿಡಿತ ಇರಲಿ. ಇದೇನು ನಿಮ್ಮ ಮನೆ ಅಂದ್ಕೊಂಡಿದ್ದೀರಾ?" ಎಂದು ಆವಾಜ್‌ ಹಾಕಿದ್ದಾರೆ ಸೂರಜ್‌.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದ ಪ್ರೋಮೋ



ಅಖಾಡಕ್ಕಿಳಿದ ಧನುಷ್?

ನಂತರ ಅಖಾಡಕ್ಕಿಳಿದ ಧನುಷ್, "ನೀನೇನ್‌ ದಬಾಕಲು ಸಾಧ್ಯವಿಲ್ಲ. ನೆಟ್ಟಗೆ ಮಾತನಾಡಲು ಕಲಿಯಲೇ.." ಎಂದು ಧ್ರುವಂತ್‌ ಮೇಲೆ ಕೂಗಾಡಿದ್ದಾರೆ. ಆ ಬಳಿಕ ಬಂದ ಸ್ಪಂದನಾ ಸೋಮಣ್ಣ, "ಹೇಳೋದನ್ನು ಕೇಳಿಸ್ಕೋಳ್ಳಿ. ಇದೆಲ್ಲಾ ಬೇಡ ಧ್ರುವಂತ್.."‌ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಧ್ರುವಂತ್‌ ವಿರುದ್ಧ ರೊಚ್ಚಿಗೆದ್ದ ಈ ಮೂವರನ್ನು ಮನೆಯ ಇತರೆ ಸದಸ್ಯರು ಕಂಟ್ರೋಲ್‌ ಮಾಡುವುದಕ್ಕೆ ಮುಂದಾಗಿದ್ದಾರೆ.

BBK 12: ‌'ಬಿಗ್‌ ಬಾಸ್‌' ಮನೆಯಲ್ಲಿ ರಘುಗೆ ಸಿಕ್ತು ಡಬಲ್‌ ಶಾಕ್‌; ಇದಕ್ಕೆ ಕಾರಣ ಕ್ಯಾಪ್ಟನ್‌ ಅಭಿಷೇಕ್!

ಅಡುಗೆ ಮನೆಯಲ್ಲಿ ಜಾಹ್ನವಿ & ಅಶ್ವಿನಿ ಗೌಡ ಮಾತುಕತೆ

ಇದೆಲ್ಲಾ ರಾದ್ಧಾಂತ ನಡೆಯುವಾಗ ಜಾಹ್ನವಿ & ಅಶ್ವಿನಿ ಗೌಡ ಅವರು ಮನೆಯ ಅಡುಗೆ ಮನೆಯಲ್ಲಿದ್ದರು. ಆಗ ಜಾಹ್ನವಿ ಜೊತೆ ಮಾತನಾಡಿದ ಅಶ್ವಿನಿ ಗೌಡ, "ನಾನು ಆಡಬೇಕಿದ್ದ ಜಗಳವನ್ನೆಲ್ಲಾ ಎಂಟು ವಾರ ಆಡಿದ್ದೇನೆ. ಇವರು ಈಗ ಜಗಳ ಮಾಡ್ತಿದ್ದಾರೆ" ಎಂದು ನಕ್ಕಿದ್ದಾರೆ. ಅಂತಿಮವಾಗಿ ಇದು ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕು. ನವೆಂಬರ್‌ 28ರಂದು ಈ ಸಂಚಿಕೆಯು ಪ್ರಸಾರವಾಗಲಿದ್ದು, ಧ್ರುವಂತ್‌ ಅವರು ಯಾಕೆ ಅಂಥ ಪದವನ್ನು ಬಳಸಿದ್ರು? ಜಗಳ ಆರಂಭವಾಗಿದ್ದೇಕೆ ಎಂಬುದು ಗೊತ್ತಾಗಲಿದೆ.

ಸದ್ಯ ಅಭಿಷೇಕ್‌ ಬಳಿಕ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿ ಧನುಷ್‌ ಆಯ್ಕೆ ಆಗಿದ್ದು, ಆರಂಭದಲ್ಲೇ ದೊಡ್ಡ ಜಗಳವಾಗುವ ಸಂಭವ ಕಂಡಿದೆ. ಆದರೆ ಕ್ಯಾಪ್ಟನ್‌ ಧನುಷ್‌ ಅವರೇ ಜಗಳದಲ್ಲಿ ಭಾಗಿಯಾಗಿದ್ದು ಅಚ್ಚರಿ!