ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸದ್ಯ ಫ್ಯಾಮಿಲಿ ವೀಕ್ ನಡೆಯುತ್ತಿದೆ. ನ್ಯೂ ಇಯರ್ ಸಮೀಪದಲ್ಲಿ ಮನೆಯೊಳಗೆ ಇರುವ ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಸೂರಜ್ ಸಿಂಗ್, ಧನುಷ್, ರಕ್ಷಿತಾ ಶೆಟ್ಟಿ ಅವರ ಫ್ಯಾಮಿಲಿ ಸದಸ್ಯರು ಆಗಲೇ ಬಿಗ್ ಬಾಸ್ ಮನೆಗೆ ಆಗಮಿಸಿ, ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಇದೀಗ ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದ ಗಿಲ್ಲಿ ನಟ ಅವರ ಕುಟುಂಬಸ್ಥರು ಆಗಮಿಸಿದ್ದಾರೆ. ತಮ್ಮ ಮುದ್ದಿನ ತರಲೆ ಮಗನನ್ನು ಕಂಡು ಖುಷಿಯಿಂದ ಮಾತನಾಡಿದ್ದಾರೆ.
ಬೆತ್ತದಿಂದ ಬಾರಿಸಿದ ತಂದೆ
ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಗಿಲ್ಲಿ ನಟ ಅವರ ತಂದೆ ತಾಯಿ ಮನೆಯೊಳಗೆ ಆಗಮಿಸಿದ್ದು, ಮುದ್ದಿನ ಮಗನ ಯೋಗಕ್ಷೇಮ ವಿಚಾರಿಸಿದ್ದಾರೆ. ಮಗನಿಗೆ ತಂದೆಯು ಕೋಲಿನಿಂದ ತಮಾಷೆಗೆ ಹೊಡೆದಿದ್ದಾರೆ. ಇದು ವೀಕ್ಷಕರಿಗೆ ಸಖತ್ ಮಜಾ ನೀಡುವುದಂತೂ ಗ್ಯಾರಂಟಿ. ಅಲ್ಲದೆ, ಇಷ್ಟು ದಿನ ತಮಗೆ ಕಾಲೆಳೆಯುತ್ತಿದ್ದ ಗಿಲ್ಲಿಗೆ ಸರಿಯಾಗಿ ಬಿತ್ತು ಎಂದು ಮನೆಯ ಸದಸ್ಯರು ಕೂಡ ಎಂಜಾಯ್ ಮಾಡಿದ್ದಾರೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಮಗನಿಗೆ ಎಣ್ಣೆ ಸ್ನಾನ
ಇನ್ನು, ಮುದ್ದಿನ ಮಗನಿಗೆ, "ತಲೆಕೂದಲನ್ನು ಬಾಚಿಕೊಳ್ಳದೆ ಹೀಗೇಕೆ ಇಟ್ಕೊಂಡಿರುವೆ" ಎಂದು ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದ್ದಾರೆ ಗಿಲ್ಲಿ ನಟನ ತಾಯಿ. ಎಣ್ಣೆ ಸ್ನಾನ ಮಾಡಿಸಿದ ಬಳಿಕ ಮಗನನ್ನು ರಾಜಕುಮಾರನ ರೀತಿಯಲ್ಲಿ ರೆಡಿ ಮಾಡಿದ್ದಾರೆ. ಸದ್ಯ ಈ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.
ಅಶ್ವಿನಿ ಗೌಡ ತಾಯಿಗೆ ಅತ್ತೆ ಎಂದ ಗಿಲ್ಲಿ
ಇದಕ್ಕೂ ಮುನ್ನ ಅಶ್ವಿನಿ ಗೌಡ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ತಮ್ಮ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರಿಗೆ, "ಅತ್ತೆ" ಎಂದು ಕರೆದಿದ್ದಾರೆ ಗಿಲ್ಲಿ ನಟ. "ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ, ಚೆನ್ನಾಗಿರಿ" ಎಂದು ಗಿಲ್ಲಿಗೆ ಅಶ್ವಿನಿ ತಾಯಿ ಹೇಳಿದರು. ಆಗ ಅಶ್ವಿನಿ, "ವಿಗ್ ಹಾಕಿಕೊಳ್ಳುತ್ತೀರಿ, ಹಲ್ಲು ಸೆಟ್.. ಅಂತೆಲ್ಲ ರೆಗಿಸ್ತಾನೆ" ಎಂದು ಅಮ್ಮನ ಬಳಿ ಗಿಲ್ಲಿ ಬಗ್ಗೆ ದೂರು ಹೇಳಿದ್ದಾರೆ. ಆಗ ಗಿಲ್ಲಿ, "ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ" ಎಂದು ಕೌಂಟರ್ ಕೊಟ್ಟಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅವರ ತಾಯಿಗೆ "ಅತ್ತೆ.. ಅತ್ತೆ.." ಎಂದು ಕರೆದಿದ್ದಾರೆ ಗಿಲ್ಲಿ ನಟ.