ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ನಾಮಿನೇಷನ್‌ ಸಂಕಷ್ಟಕ್ಕೆ ಸಿಲುಕಿದ ಘಟಾನುಘಟಿ ಸ್ಪರ್ಧಿಗಳು; ಈ ವಾರ ಯಾರೇ ಎಲಿಮಿನೇಟ್‌ ಆದರೂ ಅಚ್ಚರಿಯೇ!

Bigg Boss Kannada 12 Nomination: 'ಬಿಗ್ ಬಾಸ್' ಮನೆಯ 9ನೇ ವಾರದ ನಾಮಿನೇಷನ್‌ನಲ್ಲಿ ಒಟ್ಟು ಏಳು ಸ್ಪರ್ಧಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ಮಾಳು ನಿಪನಾಳ, ಜಾಹ್ನವಿ, ಧ್ರುವಂತ್ ಹಾಗೂ ಕ್ಯಾಪ್ಟನ್ ಅಭಿಷೇಕ್‌ರಿಂದ ನೇರವಾಗಿ ನಾಮಿನೇಟ್ ಆದ ರಘು ಈ ಪಟ್ಟಿಯಲ್ಲಿದ್ದಾರೆ. ಈ ವಾರ ಯಾರೇ ಎಲಿಮಿನೇಟ್ ಆದರೂ, ಬಿಗ್ ಬಾಸ್ ಆಟದ ಗತಿ ಬದಲಾಗುವುದು ಖಚಿತ.

ಬಿಗ್‌ ಬಾಸ್‌ ಮನೆಯಲ್ಲಿ 9ನೇ ವಾರದ ನಾಮಿನೇಷನ್‌ ನಡೆದಿದೆ. ಈ ವಾರ ಒಟ್ಟು ಏಳು ಮಂದಿ ನಾಮಿನೇಟ್‌ ಆಗಿದ್ದು, ಎಲ್ಲಾ ಘಟಾನುಘಟಿಗಳೇ ಈ ಬಾರಿ ನಾಮಿನೇಷನ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ ಯಾರೇ ಎಲಿಮಿನೇಟ್‌ ಆದರೂ ಆಟದ ಗತಿ ಬದಲಾಗುವುದು ಗ್ಯಾರಂಟಿ. ಅಷ್ಟಕ್ಕೂ ನಾಮಿನೇಟ್‌ ಆಗಿರುವ ಆ 7 ಮಂದಿ ಯಾರು? ಮುಂದೆ ಓದಿ.

ನಾಮಿನೇಟ್‌ ಆದ ಏಳು ಮಂದಿ ಇವರೇ!

ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ 13 ಮಂದಿ ಇದ್ದಾರೆ. ಅವರಲ್ಲೀಗ ಏಳು ಮಂದಿಯನ್ನು ನಾಮಿನೇಟ್‌ ಮಾಡಲಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ಮಾಳು ನಿಪನಾಳ, ಜಾಹ್ನವಿ, ಧ್ರುವಂತ್‌ ಮತ್ತು ರಘು ಅವರು ಈ ವಾರ ನಾಮಿನೇಟ್‌ ಆಗಿದ್ದಾರೆ. ರಘು ಅವರನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಸ್ಪರ್ಧಿಗಳು ಮನೆಯವರಿಂದ ನಾಮಿನೇಟ್‌ ಆಗಿದ್ದರೆ, ರಘು ಅವರನ್ನು ಮಾತ್ರ ಕ್ಯಾಪ್ಟನ್‌ ಆಗಿದ್ದ ಅಭಿಷೇಕ್ ಅವರು ಡೈರೆಕ್ಟ್‌ ನಾಮಿನೇಟ್‌ ಮಾಡಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಯಾರಿಗೆ ಸಿಗಲಿದೆ ಗೇಟ್‌ ಪಾಸ್‌?

ಈ ಏಳು ಮಂದಿಯಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗಬಹುದು ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಎಲ್ಲರೂ ಕೂಡ ಕಳೆದ ಹಲವು ದಿನಗಳಿಂದ ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಗುರುತನ್ನು ಮೂಡಿಸುತ್ತಿದ್ದಾರೆ. ಮಾಳು ಅವರನ್ನು ಎಲ್ಲರೂ ಸೈಲೆಂಟ್‌ ಎಂದುಕೊಂಡಿದ್ದರು. ಅವರು ಕೂಡ ಒಮ್ಮೆ ಕ್ಯಾಪ್ಟನ್‌ ಆಗಿ ತಮ್ಮ ಹವಾ ತೋರಿಸಿದ್ದಾರೆ. ಧ್ರುವಂತ್‌ ಕೂಡ ಆಟದ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ. ಉಳಿದಂತೆ ಗಿಲ್ಲಿ, ಕಾವ್ಯ, ಅಶ್ವಿನಿ ಗೌಡ, ಜಾಹ್ನವಿ ಮತ್ತು ಬಂದ ದಿನಗಳಿಂದಲೂ ಸದ್ದು ಮಾಡುತ್ತಲೇ ಇದ್ದಾರೆ. ಇವರಲ್ಲಿ ಯಾರನ್ನು ಆಡಿಯೆನ್ಸ್ ಮನೆಗೆ ಕಳುಹಿಸಿತ್ತಾರೋ ಎಂಬುದನ್ನು ಕಾದುನೋಡಬೇಕು.

Delhi Election Result 2025: ಆಪ್‌ಗೆ ಬಿಗ್‌ ಲಾಸ್‌...ಇನ್ಮುಂದೆ ದೆಹಲಿಯಲ್ಲಿ ಬಿಜೆಪಿಯೇ ಬಿಗ್‌ ಬಾಸ್‌; ಕೇಜ್ರಿವಾಲ್‌ಗೆ ಹೀನಾಯ ಸೋಲು

ಗಿಲ್ಲಿ ನಾಮಿನೇಷನ್‌ಗೆ ಕಾರಣವೇನು?

ಈ ಸಲ ಗಿಲ್ಲಿಯನ್ನು ನಾಮಿನೇಟ್‌ ಮಾಡುವುದಕ್ಕೆ ಕಾರಣ, ಅವರಲ್ಲಿನ ಅತಿಯಾದ ಕಾಮಿಡಿ ಸ್ವಭಾವ. ಯಾವುದಕ್ಕೂ ಗಂಭೀರತೆ ಇಲ್ಲ, ಎಲ್ಲ ಟೈಮ್‌ನಲ್ಲೂ ಕಾಮಿಡಿ ಮಾಡಿಕೊಂಡು, ವ್ಯಂಗ್ಯ ಮಾಡಿಕೊಂಡಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈಗಾಗಲೇ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಗಿಲ್ಲಿ ನಟಗೆ ಎಲಿಮಿನೇಷನ್‌ ಭಯವಂತೂ ಕಾಡುತ್ತಿಲ್ಲ.

ರಘು ನಾಮಿನೇಷನ್‌ ಮಾಡಿದ್ದು ಸರಿಯೇ?

ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿರುವ ಅಭಿಷೇಕ್‌ ಅವರು ರಘು ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಅದಕ್ಕವರು ನೀಡಿದ ಕಾರಣ, "ಇಲ್ಲಿವರೆಗೂ ನಾನು ಇರುವುದು ಲಕ್‌ನಿಂದ ಅಂತೆ. ಅದನ್ನು ರಘು ಅವರು ಹೇಳಿದ್ದಾರೆ. ಅವರು ಬರುವುದಕ್ಕೂ ಮುನ್ನ 2 ವಾರ ನಾವಿಲ್ಲಿ ತುಂಬಾ ಅನುಭವಿಸಿರುತ್ತೇವೆ. ಲಕ್‌ ಅಂತ ಹೇಳುವುದು ತುಂಬಾ ಸುಲಭ. ರಘು ಇಲ್ಲಿವರೆಗೂ ಲಕ್‌ನಿಂದ ಬಂದಿದ್ದಾರೆ‌, ಲಕ್‌ನಿಂದ ಬಂದಿರೋದು ನಾನಲ್ಲ" ಅಂತ ಹೇಳಿದ್ದಾರೆ. ಆದರೆ ಅಭಿಷೇಕ್‌ ನೀಡಿದ ಕಾರಣಗಳು ಆಡಿಯೆನ್ಸ್‌ಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳಾಗುತ್ತಿವೆ.